'ದೀಪಕ್ ರಾವ್ ಹತ್ಯೆಗೆ 50 ಲಕ್ಷ ಸುಪಾರಿ ನೀಡಲಾಗಿತ್ತು'

Posted By: Gururaj
Subscribe to Oneindia Kannada

ಬೆಂಗಳೂರು, ಜನವರಿ 08 : 'ದೀಪಕ್ ರಾವ್ ಹತ್ಯೆಗೆ 50 ಲಕ್ಷ ರೂ. ಸುಪಾರಿ ನೀಡಲಾಗಿತ್ತು' ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಗಂಭೀರ ಆರೋಪ ಮಾಡಿದರು.

ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಕರ್ನಾಟಕ ಬಿಜೆಪಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿತು. ಮೌರ್ಯ ಸರ್ಕಲ್ ಬಳಿ ನಡೆದ ಪ್ರತಿಭಟನೆ ಉದ್ದೇಶಿಸಿ ಆರ್.ಅಶೋಕ್ ಮಾತನಾಡಿದರು.

ದೀಪಕ್ ಹತ್ಯೆಯಲ್ಲಿ ಬಿಜೆಪಿ ಕಾರ್ಪೋರೇಟರ್ ಎಂದ್ಹೇಳಿ ಯುಟರ್ನ್ ಹೊಡೆದ HDK

'ದೀಪಕ್ ಹತ್ಯೆಗೆ 50 ಲಕ್ಷ ರೂ. ಸುಪಾರಿ ನೀಡಲಾಗಿತ್ತು. ಮಾಧ್ಯಮಗಳಲ್ಲಿ, ಪೊಲೀಸ್ ತನಿಖೆಯಲ್ಲಿ ಇದು ಗೊತ್ತಾಗಿದೆ. ಸುಪಾರಿ ಕೊಟ್ಟವರು ಯಾರು? ಎಂಬುದು ತನಿಖೆಯಲ್ಲಿ ಬಹಿರಂಗವಾಗಬೇಕು' ಎಂದರು.

Ashoka

ಕಾನೂನು ಸುವ್ಯವಸ್ಥೆ ಹದ ಗೆಟ್ಟಿದೆ : ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, 'ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಹದಗೆಟ್ಟಿದೆ. ರಾಮಲಿಂಗಾ ರೆಡ್ಡಿ ಅವರು ಗೃಹ ಸಚಿವರಾಗಿ ಸಹ ವಿಫಲರಾಗಿದ್ದಾರೆ. 4 ವರ್ಷದಲ್ಲಿ 6525 ಕೊಲೆಗಳು ನಡೆದಿವೆ' ಎಂದು ಆರೋಪಿಸಿದರು.

ಸಂಕಷ್ಟಕ್ಕೆ ಸ್ಪಂದಿಸಿದ ಜನ, ದೀಪಕ್ ತಾಯಿ ಖಾತೆಯಲ್ಲೀಗ 32 ಲಕ್ಷ ರೂ.

'ಕುಮಾರಸ್ವಾಮಿ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಅವರ ಹೇಳಿಕೆಯನ್ನು ಖಂಡಿಸುತ್ತೇನೆ. ತನಿಖೆ ನಡೆಯುತ್ತಿದೆ, ತನಿಖೆ ದಾರಿ ತಪ್ಪಿಸುವ ಕೆಲಸವನ್ನು ಅವರು ಮಾಡಬಾರದು' ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, 'ಜಿಹಾದಿಗಳ ಮತಕ್ಕಾಗಿ ಒಂದು ಜನಾಂಗ ಎತ್ತಿ ಕಟ್ಟುವ ಕೆಲಸ ಮಾಡಲಾಗುತ್ತಿದೆ. ಕುಮಾರಸ್ವಾಮಿ ಅವರು ನಮ್ಮ ಜೊತೆ ಸರ್ಕಾರ ಮಾಡಿದ್ದರು. ರಾಜ್ಯದಲ್ಲಿ ನಾಯಕರಾಗಿ ಬೆಳೆಯಬೇಕು ಎನ್ನುವ ಅವರು ತನಿಖೆ ದಾರಿ ತಪ್ಪಿಸುವ ಕೆಲಸ ಮಾಡಬಾರದು' ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Home Minister of Karnataka R. Ashoka alleged that Rs 50 lakh supari give to kill Mangaluru BJP activist Deepak Rao. Karnataka BJP leaders stage protest in Bengaluru condemned murder of Deepak Rao.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ