5 ವರ್ಷಗಳ ಗ್ರಾಪಂ ಅಭಿವೃದ್ಧಿ ಯೋಜನೆ ರೆಡಿ: ಸಿದ್ದು

Posted By:
Subscribe to Oneindia Kannada

ಬೆಂಗಳೂರು, ಜನವರಿ 11: ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಮುಂದಿನ ಐದು ವರ್ಷಗಳಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ವಿಧಾನ ಸೌಧದ ಸಮಿತಿಯ ಕೊಠಡಿಯಲ್ಲಿ ನಡೆದ ಕರ್ನಾಟಕ ರಾಜ್ಯ ವಿಕೇಂದ್ರೀರಣ ಯೋಜನೆ ಹಾಗೂ ಅಭಿವೃಧ್ಧಿ ಸಮಿತಿಯ ಪ್ರಥಮ ಸಭೆಯಲ್ಲಿ ಅವರು ಮಾತನಾಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿಗಾಗಿ ಸಿದ್ದ ಪಡಿಸಿರುವ ಈ ಯೋಜನೆಯನ್ನು ತಾಲ್ಲೂಕು ಹಾಗೂ ಜಿಲ್ಲಾ ಸಮಿತಿಗಳು ಪರಿಶೀಲಿಸಿ, ಸಂಯೋಜಿತ ವರದಿಯನ್ನು ತಮ್ಮ ನೇತೃತ್ವದ ರಾಜ್ಯ ಸಮಿತಿಗೆ ಸಲ್ಲಿಸಲ್ಲಿವೆ. ಅಲ್ಲದೆ, ಈ ವರದಿಯನ್ನು ರಾಜ್ಯ ಮಟ್ಟದ ಸಮಿತಿಯು ಪರಿಶೀಲಿಸಿ ಯೋಜನಾ ಇಲಾಖೆಗೆ ಸಲ್ಲಿಸಲಿದೆ. ಅಂತೆಯೇ, ತಳ ಹಂತದ ಶಿಫಾರಸ್ಸುಗಳನ್ನು ಮೇಲಿನ ಹಂತದ ಸಮಿತಿಗಳು ಯಾವುದೇ ಕಾರಣಕ್ಕೂ ಬದಲಾಯಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.[ಐಎಸ್ಓ ಪಡೆದ ರಾಜ್ಯದ ಮೊದಲ ಲೈಲಾ ಗ್ರಾಮ ಪಂಚಾಯಿತಿ]

5-year plan for the development of Gram panchayat is ready CM siddaramaiah

ಇಡೀ ರಾಜ್ಯದ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಲು ತಳ ಹಂತದ ಗ್ರಾಮ ಸಭೆಯಿಂದ ಚರ್ಚೆ ನಡೆಸಿ ಸೂಕ್ತ ಶಿಫಾರಸ್ಸುಗಳನ್ನು ಮೇಲಿನ ಹಂತದವರೆಗೂ ಸಲ್ಲಿಸಲಾಗುವ ಹೊಸ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಲಿದೆ. ರಾಜ್ಯದಲ್ಲಿ ಸ್ವಯಂ ಸ್ಥಳೀಯ ಸರ್ಕಾರವಾಗಿ ಕಾರ್ಯನಿರ್ವಹಿಸುವ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಾಗೂ ನಗರಾಡಳಿತ ವ್ಯಾಪ್ತಿಯ ಸಂಸ್ಥೆಗಳಿಗೆ ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ಹೆಚ್ಚಿನ ಅನುದಾನ, ಅಧಿಕಾರ ಮತ್ತು ಅನುಷ್ಠಾನಗೊಳಿಸುವ ಕಾರ್ಯ ವ್ಯವಸ್ಥೆಯನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಗೆ ವಿವರಿಸಿದರು.['ಕುರಿ ಕಾಯಲು ತೋಳಕ್ಕೆ ಜವಾಬ್ದಾರಿ ನೀಡಿದ ರಾಜ್ಯ ಸರ್ಕಾರ']

ಜನವಸತಿ ಸಭೆಗೆ ನಿರ್ದಾರ
ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನಾ ಸಮಿತಿಗೆ ತಾಲ್ಲೂಕಿನ ಹೆಚ್ಚಿನ ಭಾಗವನ್ನು ಪ್ರತಿನಿಧಿಸುವ ವಿಧಾನಸಭಾ ಸದಸ್ಯರು ಹಾಗೂ ಜಿಲ್ಲಾ ಸಮಿತಿಗೆ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷರಾಗಿದ್ದು, ಗ್ರಾಮೀಣಾಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ಜವಾಬ್ದಾರಿಯನ್ನು ತಳಹಂತದ ಸಂಸ್ಥೆಗಳಾದ ಜನ ವಸತಿ ಸಭೆ, ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳಿಗೆ ವಹಿಸಲಾಗಿದೆ.

ಇದನ್ನು ಮುಂದಿನ ಐದು ವರ್ಷಗಳ ಅವಧಿಗೆ ಸಿದ್ಧಪಡಿಸಲಾಗಿದೆ. ಸಮಾಜದಿಂದ ಬದಿಗೊತ್ತಿರುವ ಹಾಗೂ ನಿರ್ಲಕ್ಷ್ಯಕ್ಕೆ ಒಳಪಟ್ಟ ಗ್ರಾಮಗಳಿಂದ ದೂರದಲ್ಲಿ ವಸತಿ ವ್ಯವಸ್ಥೆ ಮಾಡಿ ಜೀವಿಸುತ್ತಿರುವ ದುರ್ಬಲ ವರ್ಗದವರು ತಮ್ಮ ಸಮಸ್ಯೆಗಳನ್ನು ಚರ್ಚಿಸಲು ಅನುವಾಗುವಂತೆ ಜನ ವಸತಿ ಸಭೆ ನಡೆಸಲು ಹಾಗೂ ಗ್ರಾಮಗಳಲ್ಲಿ ವಾಸಿಸುವ ದುರ್ಬಲ ವರ್ಗದವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಉತ್ತಮ ಪಡಿಸಲು ತಳಹಂತದಿಂದಲೇ ಯೋಜನೆಯನ್ನು ರೂಪಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್. ಕೆ. ಪಾಟೀಲ್ ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
5-year plan for the development of Gram panchayat is ready says Chief Minister Siddaramaiah in meeting in Vidhana Soudha Bengaluru.
Please Wait while comments are loading...