ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ರಾಹುಲ್ ಗಾಂಧಿ ನಮ್ಮ ಹೆಮ್ಮೆ' ಹಾಡಿ ಹೊಗಳಿದ ಡಿಕೆ ಶಿವಕುಮಾರ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 12: ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಕಾಂಗ್ರೆಸ್ ಪಾಳೆಯದಲ್ಲಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಗುಣಗಾನ ಆರಂಭವಾಗಿದೆ.

ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಭಾರೀ ಆಘಾತ?!ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಭಾರೀ ಆಘಾತ?!

"ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ದೇಶದ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ" ಎಂದು ಕರ್ನಾಟಕ ಕಾಂಗ್ರೆಸ್ ಮುಖಂಡ ಮತ್ತು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ರಾಹುಲ್ ಗಾಂಧಿ ಅವರನ್ನು ಹಾಡಿಹೊಗಳಿದ್ದಾರೆ.

"ಕಠಿಣ ಪರಿಶ್ರಮಕ್ಕೆ ಎಂದಿಗೂ ಫಲ ಸಿಕ್ಕೇ ಸಿಗುತ್ತದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಮ್ಮ ದೇಶದ ನಾಯಕರಾಗಿ ಹೊರಹೊಮ್ಮಿದ್ದಾರೆ. ಪಕ್ಷಕ್ಕಾಗಿ ಅವರು ರೂಪಿಸಿದ್ದ ಕಾರ್ಯತಂತ್ರ ಫಲನೀಡಿದೆ."

5 states election results: DK Shivakumar praises Rahul Gandhi for victory

"ಈ ಜಯ ಭಾರತೀಯರು ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ. ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಕೆಲಸ ಮಾಡಲು ನಾವು ಕಾಂಗ್ರೆಸ್ಸಿಗರು ಹೆಮ್ಮೆ ಪಡುತ್ತೇವೆ" ಎಂದು ಡಿ ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

ಪಂಚ ರಾಜ್ಯ ಸೋಲಿನ ಬಳಿಕ ಬಿಜೆಪಿಗೆ ಉಳಿದದ್ದು ಎಷ್ಟು ರಾಜ್ಯಗಳು?ಪಂಚ ರಾಜ್ಯ ಸೋಲಿನ ಬಳಿಕ ಬಿಜೆಪಿಗೆ ಉಳಿದದ್ದು ಎಷ್ಟು ರಾಜ್ಯಗಳು?

ಪಂಚರಾಜ್ಯಗಳಲ್ಲಿ ತೆಲಂಗಾಣದಲ್ಲಿ ಟಿಆರ್ ಎಸ್ ಮತ್ತು ಮಿಜೋರಾಂನಲ್ಲಿ ಸ್ಥಳೀಯ ಪಕ್ಷವಾದ ಎಂಎನ್ ಎಫ್ ಗೆಲುವು ಸಾಧಿಸಿದ್ದರೆ, ಬಿಜೆಪಿ ಆಡಳಿತವಿದ್ದ ಉಳಿದ ಮೂರು ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ನವೆಂಬರ್-ಡಿಸೆಂಬರ್ ನಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಡಿ.11 ರಂದು ಹೊರಬಿದ್ದಿತ್ತು.

English summary
Congress president Rahul Gandhi is emerging as leader of our country, Karnataka Congress leader and minister DK Shivakumar tweeted after Congress' victory in 3 states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X