ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಆಸ್ಪತ್ರೆಯಲ್ಲಿ ಜ.1 ಜನಿಸುವ ಮೊದಲ ಹೆಣ್ಣು ಮಗುವಿಗೆ 5 ಲಕ್ಷ

|
Google Oneindia Kannada News

ಬೆಂಗಳೂರು, ಡಿಸೆಂಬರ್ 30 : ಹೊಸ ವರ್ಷದಂದು ಅಂದರೆ ಜನವರಿ 1, 2018ಕ್ಕೆ ಬೆಂಗಳೂರಿನ ಬಿಬಿಎಂಪಿ ಆಸ್ಪತ್ರೆಯಲ್ಲಿ ಜನಿಸಿದ ಮೊದಲ ಹೆಣ್ಣುಮಗುವಿನ ಶಿಕ್ಷಣಕ್ಕಾಗಿಯೇ ಐದು ಲಕ್ಷ ರುಪಾಯಿ ಹಣ ಠೇವಣಿ ಇಡಲು ನಿರ್ಧರಿಸಲಾಗಿದೆ. ಈ ಹಣವು ಮಗು ಹಾಗೂ ಬೆಂಗಳೂರಿನ ಆಯುಕ್ತರ ಜಂಟಿ ಖಾತೆಯಲ್ಲಿ ಇರುತ್ತದೆ.

ಅನಧಿಕೃತ ಫ್ಲೆಕ್ಸ್ ಹಾವಳಿ: ಮುದ್ರಣ ಮಳಿಗೆಗಳ ಮೇಲೆ ದಾಳಿಅನಧಿಕೃತ ಫ್ಲೆಕ್ಸ್ ಹಾವಳಿ: ಮುದ್ರಣ ಮಳಿಗೆಗಳ ಮೇಲೆ ದಾಳಿ

ಈ ವಿಚಾರದ ಬಗ್ಗೆ ಬೆಂಗಳೂರಿನ ಮೇಯರ್ ಸಂಪತ್ ರಾಜ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಸ್ಪತ್ರೆಯ ಪೈಕಿ ಯಾವುದಾದರೊಂದರಲ್ಲಿ ಜನವರಿ ಒಂದರ ಹೊಸ ವರ್ಷದಂದು ಜನಿಸುವ ಮೊದಲ ಹೆಣ್ಣುಮಗು ಹಾಗೂ ಬೆಂಗಳೂರು ಆಯುಕ್ತರ ಜಂಟಿ ಹೆಸರಿನಲ್ಲಿ ಐದು ಲಕ್ಷ ರುಪಾಯಿ ಠೇವಣಿ ಇಡಲಾಗುವುದು.

ಹೊಸ ವರ್ಷ ಆಚರಣೆ ಹಿನ್ನೆಲೆ ಭದ್ರತೆಗೆ ಮೇಯರ್ ಸೂಚನೆಹೊಸ ವರ್ಷ ಆಚರಣೆ ಹಿನ್ನೆಲೆ ಭದ್ರತೆಗೆ ಮೇಯರ್ ಸೂಚನೆ

5 lakhs to 1st girl child born in 2018 in any BBMP hospital

ಆ ಹಣದಲ್ಲಿ ಹೆಣ್ಣುಮಗುವಿನ ಶಿಕ್ಷಣದ ಖರ್ಚನ್ನು ನೋಡಿಕೊಳ್ಳಲಾಗುವುದು. ಈ ವಿಚಾರವಾಗಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಎಂದು ಮೇಯರ್ ಸಂಪತ್ ರಾಜ್ ಮಾಹಿತಿ ನೀಡಿದ್ದಾರೆ. ಅಪರೂಪದ ಕ್ರಮ ಎನಿಸಿಕೊಂಡಿರುವ ಇದರ ಅನುಕೂಲ ಪಡೆಯುವ ಹೆಣ್ಣುಮಗು ಯಾವುದು ಎಂದು ಕಾದುನೋಡೋಣ.

English summary
BBMP will deposit Rs 5 lakhs in joint account of municipal commissioner and 1st girl child born in 2018 in any BBMP hospital. The resolution was passed in the council. We will take care of her education: BBMP mayor Sampath Raj said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X