ಪೀಣ್ಯದ ಹತ್ತಿರ ಸಿಕ್ಕಿದ್ದು 2 ಸಾವಿರ ನೋಟುಗಳ 45 ಲಕ್ಷ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 26: ಬ್ಯಾಂಕ್ ಗಳಲ್ಲಿ ನಮ್ಮದೇ ಚೆಕ್ ನೀಡಿ ಹಣ ಡ್ರಾ ಮಾಡಬೇಕು ಅಂದರೆ 24 ಸಾವಿರ ಮಿತಿ ಇದೆ. ಆದರೆ ಬೆಂಗಳೂರಿನ ಪೀಣ್ಯದಲ್ಲಿ ಹೊಚ್ಚ ಹೊಸ ಎರಡು ಸಾವಿರ ರುಪಾಯಿ ನೋಟುಗಳಿದ್ದ 45 ಲಕ್ಷ ರುಪಾಯಿ ಪತ್ತೆಯಾಗಿದೆ. ಇಬ್ಬರನ್ನು ಈ ಸಂಬಂಧ ವಶಕ್ಕೆ ಪಡೆಯಲಾಗಿದೆ.

ಆಗಿದ್ದೇನು ಅಂದರೆ ಸ್ವಿಫ್ಟ್ ಕಾರಲ್ಲಿ ಮೈಸೂರಿನಿಂದ ಬರುತ್ತಿದ್ದ ಇಬ್ಬರು ವ್ಯಕ್ತಿಗಳ ಬಳಿ ಎರಡು ಸಾವಿರ ರುಪಾಯಿ ಹೊಸ ನೋಟುಗಳಲ್ಲೇ ಇದ್ದ ನಲವತ್ತೈದು ಲಕ್ಷ ರುಪಾಯಿ ಸಿಕ್ಕಿದೆ. ತಾವು ಕಾರು ಡೀಲರ್ಸ್, ಅದರ ಹಣ ಇದು ಎಂದು ಅವರು ಹೇಳಿಕೊಂಡಿದ್ದಾರೆ. ಅದರೆ ಇಷ್ಟು ಮೊತ್ತದ ಹಣ ಹೇಗಿರುವುದಕ್ಕೆ ಸಾಧ್ಯ ಎಂಬ ಅನುಮಾನ ವ್ಯಕ್ತವಾಗಿದೆ.[ಕ್ಯಾಂಟರ್ ನಲ್ಲಿ ಸಾಗಿಸುತ್ತಿದ್ದ ಒಂದು ಕೋಟಿ ರುಪಾಯಿ ದರೋಡೆ!]

Note

ಸದ್ಯಕ್ಕೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಈ ಇಬ್ಬರನ್ನು ವಿಚಾರಣೆ ಮಾಡಲಾಗುತ್ತಿದೆ. ಮುಂದಿನ ಹಂತವಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಹ ಆದಾಯ ಮೂಲದ ಬಗ್ಗೆ ಹಾಗೂ ಇಷ್ಟು ಮೊತ್ತದ ಹಣ ಒಗ್ಗೂಡಿದ್ದು ಹೇಗೆ ಎಂಬ ಬಗ್ಗೆ ಕೂಡ ಪ್ರಶ್ನೆಗಳನ್ನು ಕೇಳಲಿದ್ದಾರೆ. ಆದರೆ ಈ ಪ್ರಕರಣ ಹೊಸ ಅನುಮಾನವಂತೂ ಹುಟ್ಟುಹಾಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
45 lakh rupee in new 2 thousand currency note seized in Peenya, Bengaluru. Two taken in to custody by Yashawanthpur police and interrogating the source of money.
Please Wait while comments are loading...