ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರಸ್ತೆಗಳನ್ನು ಸ್ವಚ್ಛಗೊಳಿಸಲು ಬರ್ತಿದ್ದಾರೆ ಮೆಕ್ಯಾನಿಕಲ್ ಸ್ವೀಪರ್ಸ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 11: ಬೆಂಗಳೂರಿನ ಪ್ರಮುಖ ಸಮಸ್ಯೆಗಳೆಂದರೆ ಒಂದು ತ್ಯಾಜ್ಯ ಎರಡನೆಯದ್ದು ರಸ್ತೆಗುಂಡಿಗಳು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಬಿಬಿಎಂಪಿ ಮುಂದಾಗಿದೆ.

ಹಸಿ ಕಸ ನಿರ್ವಹಣೆ ಉತ್ತೇಜನಕ್ಕೆ ತೆರಿಗೆ ವಿನಾಯ್ತಿಗಾಗಿ ಅಭಿಯಾನ ಹಸಿ ಕಸ ನಿರ್ವಹಣೆ ಉತ್ತೇಜನಕ್ಕೆ ತೆರಿಗೆ ವಿನಾಯ್ತಿಗಾಗಿ ಅಭಿಯಾನ

ಬೆಂಗಳೂರಿನ 2 ಸಾವಿರ ಕಿ.ಮೀ ರಸ್ತೆಯನ್ನು ಸ್ವಚ್ಛಗೊಳಿಸಲು ಮೆಕ್ಯಾನಿಕಲ್ ಸ್ವೀಪರ್ಸ್‌ಗಳು ಬರಲಿದ್ದಾರೆ. ಈ ಕುರಿತು ಒಪ್ಪಿಗೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಶೀಘ್ರ ಸ್ವೀಪರ್‌ಗಳನ್ನು ನೇಮಿಸಲಾಗುತ್ತದೆ.

ಎಲ್ಲೆಂದರಲ್ಲಿ ಕಸ ಹಾಕೋರಿಗೆ ಪಾಠ ಕಲಿಸಲು ಈತ ಮಾಡಿದ ಉಪಾಯಕ್ಕೆ ಸಿಕ್ಕಿತು ಫಲ ಎಲ್ಲೆಂದರಲ್ಲಿ ಕಸ ಹಾಕೋರಿಗೆ ಪಾಠ ಕಲಿಸಲು ಈತ ಮಾಡಿದ ಉಪಾಯಕ್ಕೆ ಸಿಕ್ಕಿತು ಫಲ

ಬೆಂಗಳೂರಲ್ಲಿ ಒಟ್ಟು 34 ಮೆಕ್ಯಾನಿಕಲ್ ಸ್ವೀಪರ್‌ಗಳನ್ನು ನೇಮಿಸಲಾಗುತ್ತದೆ ಅವರೊಂದಿಗೆ 17 ಮೆಕ್ಯಾನಿಕಲ್ ಮಷಿನ್‌ ಖರೀದಿಸಲಾಗುತ್ತದೆ. ಈ ವಾಹನದ ಜೊತೆ ಬಂದು ಎರಡು ದಿನಕ್ಕೊಮ್ಮೆಯಲ್ಲ ಪ್ರತಿನಿತ್ಯವು ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸಲಿದ್ದಾರೆ.

41 mechanical sweepers to clean city roads daily

ಈ ಮೆಕ್ಯಾನಿಕಲ್ ಸ್ವೀಪರ್ಸ್ ನಿತ್ಯ 50 ಕಿ.ಮೀ ಸ್ವಚ್ಛಗೊಳಿಸಬಲ್ಲರು, ಬಿಬಿಎಂಪಿಯು ಕನಿಷ್ಠ 2 ಸಾವಿರ ಕಿ.ಮೀ ಶುಚಿಗೊಳಿಸುವ ಗುರಿ ಹೊಂದಿದ್ದು 41 ಸ್ವೀಪರ್‌ಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.

ತ್ಯಾಜ್ಯ ಸುಡುವುದರಿಂದ ಈ 22 ಕಾಯಿಲೆಗಳು ಬರಬಹುದು ಹುಷಾರ್! ತ್ಯಾಜ್ಯ ಸುಡುವುದರಿಂದ ಈ 22 ಕಾಯಿಲೆಗಳು ಬರಬಹುದು ಹುಷಾರ್!

ಪ್ರತಿ ಮಷಿನ್‌ಗೆ 70 ಲಕ್ಷ ರೂ ವೆಚ್ಚ ತಗುಲಲಿದೆ. ಕಾಂಟ್ರ್ಯಾಕ್ಟರ್‌ಗಳಿಗೆ 6.5 ಲಕ್ಷ ರೂ ನೀಡಬೇಕಾಗುತ್ತದೆ.ಮುಂದಿನ ವರ್ಷದೊಳಗಾಗಿ 100 ಮೆಕ್ಯಾನಿಕಲ್ ಸ್ವೀಪರ್‌ಗಳನ್ನು ನೇಮಿಸಿಕೊಂಡು 5 ಸಾವಿರ ಕಿ.ಮೀ ಸ್ವಚ್ಛಗೊಳಿಸುವ ಯೋಜನೆ ಹೊಂದಿದೆ. ಬೆಂಗಳೂರು 14,440 ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ.

English summary
The city roads are set to be cleaner with the local civic body all set to deploy mechanical sweepers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X