ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಪ್ಪನ ಅಗ್ರಹಾರದ 400 ಕೈದಿಗಳು ಡಿಗ್ರಿ ಪ್ರವೇಶಕ್ಕೆ ಸಿದ್ಧ!

|
Google Oneindia Kannada News

ಬೆಂಗಳೂರು, ಫೆಬ್ರವರಿ 28 : ಪರಪ್ಪನ ಅಗ್ರಹಾರದ 400 ಮಂದಿ ಕೈದಿಗಳು ಡಿಗ್ರಿಗೆ ಪ್ರವೇಶ ಪಡೆಯಲು ಸಿದ್ಧರಿದ್ದಾರೆ. ಅಪರಾಧ ಕೃತ್ಯ ಎಸಗಿ ಜೈಲುವಾಸದಲ್ಲಿರುವಕೈದಿಗಳಿಗೆ ಬೆಂಗಳೂರು ವಿಶ್ವವಿದ್ಯಾಲಯದ ಅಂಚೆ ದೂರ ಶಿಕ್ಷಣ ನಿರ್ದೇಶನಾಲಯ ಉಚಿತ ಉನ್ನತ ಶಿಕ್ಷಣ ಭಾಗ್ಯ ಕಲ್ಪಿಸುತ್ತಿದೆ.

ರಾಜ್ಯದ ಪ್ರತಿಯೊಬ್ಬರಿಗೂ ಉನ್ನತ ಶಿಕ್ಷಣ ನೀಡಬೇಕು ಎಂಬ ಸಂಕಲ್ಪ ಮಾಡಿರುವ ಬೆಂಗಳೂರು ವಿವಿ, ದೂರಶಿಕ್ಷಣ ವಿಭಾಗ, ವಿವಿಧ ಪ್ರಕರಣಗಳಡಿ ಜೈಲು ಸೇರಿರುವ ಖೈದಿಗಳಿಗೂ ಶಿಕ್ಷಣ ನೀಡುತ್ತಿದೆ. ಪರಪ್ಪನ ಅಗ್ರಹಾರದಲ್ಲಿ ಸುಮಾರು 400 ಕ್ಕೂ ಹೆಚ್ಚಿನ ಕೈದಿಗಳು ಉನ್ನತ ಶಿಕ್ಷಣ ಕಲಿಕೆಗೆ ಒಲವು ತೀರಿಸಿದ್ದು, ಒಂದೆರೆಡು ದಿನಗಳಲ್ಲಿ ಜೈಲಿನಲ್ಲಿಯೇ ಪ್ರವೇಶ ಪ್ರಕ್ರಿಯೆ ನಡೆಯಲಿದೆ.

ಪ್ರಸ್ತುತ ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಶೇ.21 ರಷ್ಟಿದ್ದು ಮುಂದಿನ ಐದು ವರ್ಷಗಳಲ್ಲಿ ಇದರ ಸಂಖ್ಯೆಯನ್ನು ಶೇ.40 ರಷ್ಟು ಹೆಚ್ಚಳ ಮಾಡಬೇಕು ಎಂದು ಕೇಂದ್ರ ಸರ್ಕಾರವು ಗುರಿ ಹೊಂದಿದೆ. ಇದರ ಭಾಗವಾಗಿ ಕಾರ್ಯ ನಿರ್ವಹಿಸುತ್ತಿರುವ ದೂರಶಿಕ್ಷಣ ನಿರ್ದೇಶನಾಲಯ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಶಿಕ್ಷಣ ನೀಡುತ್ತಿದೆ.

400 prisoners will get degree from BU

ದೂರ ಶಿಕ್ಷಣ ವರದಾನ: ಬೆಂಗಳೂರು ವಿಶ್ವವಿದ್ಯಾಲಯದ ಅಂಚೆ ಮತ್ತು ದೂರ ಶಿಕ್ಷಣ ನಿರ್ದೇಶನಾಲಯದಲ್ಲಿ 2017-18 ನೇ ಸಾಲಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ 7 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕಳೆದ ಐದು ವರ್ಷಗಳಲ್ಲೇ ಇದು ಅತ್ಯಧಿಕವಾದದ್ದು.

2016-17 ನೇ ಸಾಳಿನಲ್ಲಿ ಕೇವಲ 2,634 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದರು. ಉದ್ಯೋಗಿಗಳು ರೆಗ್ಯುಲ್ರ್ ಕಾಲೇಜುಗಳಲ್ಲಿ ತರಗತಿಗಳಿಗೆ ಹಾಜರಾಗಲು ಸಾಧ್ಯವಿಲ್ಲದ ಕಾರಣ ಹಾಗೂ ಕೆಎಸ್ಓಯು ಮಾನ್ಯತೆ ಕಳೆದುಕೊಂಡಿರುವುದರಿಂದ ಬೆಂವಿವಿ ದೂರಶಿಕ್ಷಣಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

English summary
Around four hundreds prisoners where were in Parappana Agrahara central jail interested to get degree this year from distance education center of Bengaluru University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X