ಬೇಸಿಗೆ ಶಿಬಿರ, ಬೆಂಗಳೂರು ಪಾಲಕರೇ ಎಚ್ಚರ

Subscribe to Oneindia Kannada

ಬೆಂಗಳೂರು, ಮೇ 08: ಮಕ್ಕಳಿಗೆ ಬೇಸಿಗೆ ರಜೆ ಎಂದು ಹಿಂದೆ ಮುಂದೆ ನೋಡದೇ ಯಾವುದೋ ಬೇಸಿಗೆ ಶಿಬಿರಕ್ಕೆ ಕಳುಹಿಸಿದರೆ ಅಪಾಯ ಮೈ ಮೇಲೆ ಎಳೆದುಕೊಂಡಂತೆ.

ಬೇಸಿಗೆ ಶಿಬಿರಕ್ಕೆ ಬಂದಿದ್ದ ಬಾಲಕಿ ಮೇಲೆ ತರಬೇತುದಾರನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.[ದೇಶವನ್ನೇ ಅಲುಗಾಡಿಸಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಗಳು]

rape

ಅಮೃತಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಖಾಸಗಿ ಶಾಲೆಯ ಆವರಣದಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾಗಿದ್ದು ಬಾಲಕಿಯ ಪಾಲಕರು ನೀಡಿರುವ ದೂರಿನ ಅನ್ವಯ ನೃತ್ಯ ತರಬೇತುದಾರ ಪೀಟರ್‌ (21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಫೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಬೇಸಿಗೆ ಶಿಬಿರ ಆಯೋಜಿಸಿದ್ದ ಶಾಲಾ ಆಡಳಿತ ಮಂಡಳಿಯ ಭರತ್‌ (39) ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.[ಬೆಂಗಳೂರಲ್ಲಿ ಆಟೋ ಏರುವ ಮುನ್ನ ಒಮ್ಮೆ ಯೋಚಿಸಿ]

ಮೇ 3ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ಯಾರಿಗೂ ಗೊತ್ತಿಲ್ಲದಂತೆ ಬಾಲಕಿಯನ್ನುಕೋಣೆಯೊಂದಕ್ಕೆ ಕರೆದೊಯ್ದ ಆರೋಪಿ ಪೀಟರ್‌ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮರುದಿನ ಬೆಳಗ್ಗೆ ಖಿನ್ನಳಾಗಿದ್ದ ಬಾಲಕಿಯನ್ನು ಪಾಲಕರು ಪ್ರಶ್ನೆ ಮಾಡಿದಾಗ ದೌರ್ಜನ್ಯದ ಸುದ್ದಿಯನ್ನು ಬಾಲಕಿ ತಿಳಿಸಿದ್ದಾಳೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A four-year-old minor girl was sexually assaulted at a summer camp in Bengaluru. Police have arrested a 21-year-old youth for allegedly molesting the girl. The accused has been identified by the name of Peter and is one of the faculty members.
Please Wait while comments are loading...