ಬೆಂಗಳೂರಲ್ಲಿ ಇಬ್ಬರು ಶಂಕಿತ ಅಲ್ ಖೈದಾ ಉಗ್ರರ ಸೆರೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 22 : ಅಲ್ ಖೈದಾ ಉಗ್ರ ಸಂಘಟನೆ ಪರವಾಗಿ ಪ್ರಚಾರ ನಡೆಸುತ್ತಿದ್ದ ಆರೋಪದ ಮೇಲೆ ದೆಹಲಿಯ ಪೊಲೀಸರ ವಿಶೇಷ ತಂಡ ಬೆಂಗಳೂರಿನಲ್ಲಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದೆ. ಶುಕ್ರವಾರ ಮುಂಜಾನೆ ತುಮಕೂರು, ಮಂಗಳೂರಿನಲ್ಲಿಯೂ ಎನ್‌ಐಎ ಐಎಸ್‌ಐಎಸ್ ಶಂಕಿತ ಉಗ್ರರನ್ನು ಬಂಧಿಸಿದೆ.

ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮತ್ತು ದೆಹಲಿ ಪೊಲೀಸರ ವಿಶೇಷ ತಂಡ ಹೈದರಾಬಾದ್, ಬೆಂಗಳೂರು, ತುಮಕೂರು, ಮಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕಾರ್ಯಾಚರಣೆ ನಡೆಸಿ ಶುಕ್ರವಾರ 8 ಶಂಕಿತ ಉಗ್ರರನ್ನು ಬಂಧಿಸಿದೆ. ಹೈದರಾಬಾದ್‌ನಲ್ಲಿ ನಾಲ್ವರು, ಬೆಂಗಳೂರಿನಲ್ಲಿ ಇಬ್ಬರು, ತುಮಕೂರು ಮತ್ತು ಮಂಗಳೂರಿನಲ್ಲಿ ಒಬ್ಬ ಶಂಕಿತ ಉಗ್ರನನ್ನು ಬಂಧಿಸಲಾಗಿದೆ. [ಮಂಗಳೂರಲ್ಲಿ ಶಂಕಿತ ಉಗ್ರನ ಸೆರೆ]

terrorism

ಬೆಂಗಳೂರಲ್ಲಿ ಬಂಧನ : ಬೆಂಗಳೂರಿನ ಜಕ್ಕಸಂದ್ರದಲ್ಲಿ ವಾಸವಾಗಿದ್ದ ಇಬ್ಬರನ್ನು ದೆಹಲಿ ಪೊಲೀಸರ ವಿಶೇಷ ತಂಡ ಬಂಧಿಸಿದೆ.ಜನವರಿ 7 ರಂದು ಬೆಂಗಳೂರಿನಲ್ಲಿ ಉಗ್ರ ಸಂಘಟನೆ ಸೇರುವಂತೆ ಯುವಕರನ್ನು ಪ್ರೇರೆಪಿಸುತ್ತಿದ್ದ ಮೌಲ್ವಿ ಮೌಲಾನಾ ಸೈಯದ್ ಅಂಜಾರ್ ಶಾ ಖಾಸ್ಮಿಯನ್ನು ಬಂಧಿಸಲಾಗಿತ್ತು. ಆತ ನೀಡಿರುವ ಮಾಹಿತಿ ಅನ್ವಯ ಇಂದು ಇಬ್ಬರನ್ನು ಬಂಧಿಸಲಾಗಿದೆ. [ಬೆಂಗಳೂರಲ್ಲಿ ಮೌಲ್ವಿ ಬಂಧನ]

ತುಮಕೂರು, ಮಂಗಳೂರು ಸುದ್ದಿ : ರಾಷ್ಟ್ರೀಯ ತನಿಖಾ ದಳ ಐಎಸ್‌ಐಎಸ್ ಉಗ್ರ ಸಂಘಟನೆ ಪರವಾಗಿ ಪ್ರಚಾರ ಮಾಡುತ್ತಿದ್ದ ಆರೋಪದ ಮೇಲೆ ತುಮಕೂರಿನಲ್ಲಿ ಸೈಯದ್ ಹುಸೇನ್ (25), ಮಂಗಳೂರಿನಲ್ಲಿ ನಜಮುಲ್ ಹೂಡಾ (25) ಎಂಬ ಶಂಕಿತ ಉಗ್ರರನ್ನು ಬಂಧಿಸಿದೆ. ಎನ್‌ಐಎ ತಂಡ ಹೈದರಾಬಾದ್‌ನಲ್ಲಿಯೂ ನಾಲ್ವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದೆ. [ತುಮಕೂರಲ್ಲಿ ISIS ಶಂಕಿತ ಉಗ್ರನ ಸೆರೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Delhi police Special cell have arrested 4 terrorist suspects in Bengaluru for allegedly trying to propagate on behalf of the al-Qaeda.
Please Wait while comments are loading...