ಬೆಂಗಳೂರು: 393 ಮತಗಟ್ಟೆಗಳ ಸ್ಥಳಾಂತರ ಸಾಧ್ಯತೆ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 07: ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ 8278 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ 393 ಮತಗಟ್ಟೆಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಮಲ್ಲೇಶ್ವರದಲ್ಲಿ ಐಪಿಪಿ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಲ್ಲದೆ 112 ಮತಗಟ್ಟೆಗಳ ಹೆಸರು ಬದಲಾವಣೆಗೂ ಮನವಿ ಸಲ್ಲಿಸಲಾಗಿದೆ. ಕೆಲ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ ಮತ್ತು ನೆಲಸಮಗೊಂಡಿವೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಇನ್ನು ಕೆಲವು ಮೊದಲ ಮಹಡಿಯಲ್ಲಿದ್ದು, ವಿಶೇಷಚೇತನರು ಮತ್ತು ಹಿರಿಯ ನಾಗರಿಕರು ಹತ್ತಿಳಿಯಲು ತೊಂದರೆಯಾಗುತ್ತದೆ. ಹಾಗಾಗಿ, ಅಂಥ ಮತಗಟ್ಟೆಗಳನ್ನು ನೆಲಮಹಡಿಗೆ ಸ್ಥಳಾಂತರಿಸಲಾಗುತ್ತದೆ ಎಂದರು.

ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಮಿಂಚಿನ ನೋಂದಣಿ

ಖಾಸಗಿ ಕಟ್ಟಡಗಳು, ಧಾರ್ಮಿಕ ಸ್ಥಳ ಮತ್ತು ರಾಜಕೀಯ ವ್ಯಕ್ತಿಗಳಿಗೆ ಸೇರಿರುವ ಜಾಗಗಳಲ್ಲಿರುವ ಮತಗಟ್ಟೆಗಳನ್ನು ಸರ್ಕಾರಿ ಕಟ್ಟಡಗಳಿಗೆ ಹಸ್ತಾಂತರಿಸಲಾಗುತ್ತದೆ. ಕಳೆದ ಚುನಾವಣೆಯಲ್ಲಿ ಮತದಾನದ ಪ್ರಮಾಣವು ಸೇ. 58ಕ್ಕಿಂತ ಜಾಸ್ತಿ ದಾಟಿಲ್. ಹೀಗಾಗಿ, 1500ಕ್ಕಿಂತ ಅಧಿಕ ಮತದಾರರಿಡುವ ಕಡೆಗೆ ಮಾತ್ರ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಬೇಕೆಂದು ಆಯೋಗಕ್ಕೆ ಮನವಿ ಮಾಡಕೊಳ್ಳಲಾಗಿದೆ.

ವೋಟರ್ ಐಡಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಮತ್ತು ರಾಲಿಗೆ ಅನುಮತಿ ಪಡೆಯಲು ಸುವಿಧಾ ವಹನಗಳ ಬಳಕೆಗೆ ಅನುಮತಿ ನೀಡಲು ಸುಗಮ್, ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ಸ್ ಅಳವಡಿಕೆಗೆ ಸಂಬಂಧಿಸಿದಂತೆ ದೂರು ನೀಡಲು ಸಮಾಧಾನ ಎಂಬ ಅಪ್ಲಿಕೇಷನ್ ಚುನಾವಣಾ ಆಯೋಗವು ಅಭಿವೃದ್ಧಿಪಡಿಸಿದೆ.

393ಮತಗಟ್ಟೆಗಳ ಸ್ಥಳಾಂತರ

393ಮತಗಟ್ಟೆಗಳ ಸ್ಥಳಾಂತರ

ಕೆಲ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ ಮತ್ತು ನೆಲಸಮಗೊಂಡಿವೆ. ಇನ್ನು ಕೆಲವು ಮೊದಲ ಮಹಡಿಯಲ್ಲಿದ್ದು, ವಿಶೇಷಚೇತನರು ಮತ್ತು ಹಿರಿಯ ನಾಗರಿಕರು ಹತ್ತಿಳಿಯಲು ತೊಂದರೆಯಾಗುತ್ತದೆ. ಹಾಗಾಗಿ, ಅಂಥ ಮತಗಟ್ಟೆಗಳನ್ನು ನೆಲಮಹಡಿಗೆ ಸ್ಥಳಾಂತರಿಸಲಾಗುತ್ತದೆ ಇನ್ನು ಕೆಲವು ಮತಗಟ್ಟೆಗಳು ಮತಗಟ್ಟೆ ಪ್ರದೇಶ ವ್ಯಾಪ್ತಿಯಿಂದ ಹೊರಗಿವೆ. ಯಾವುದೇ ಮತಗಟ್ಟೆಯು 2.ಕಿ.ಮೀಗಿಂತ ದೂರ ಇರಬಾರದು. ಆದ ಕಾರಣ, ವುಗಳನ್ನು ಆ ಪ್ರದೇಶದ ವ್ಯಾಪ್ತಿಗೆ ತರಬೇಕಿರುವುದರಿಂದ ಮತಗಟ್ಟೆಗಳ ಹೆಸರನ್ನು ಬದಲಾಯಿಸಲಾಗಿದೆ.

ಚುನಾವಣಾ ವೀಕ್ಷಕರಿಗೆ ಮತದಾನ ಮುಂದೂಡುವ ಅಧಿಕಾರ

ಚುನಾವಣಾ ಆಯೋಗಕ್ಕೆ 55ಸಾವಿರ ಸಿಬ್ಬಂದಿ ಅಗತ್ಯ

ಚುನಾವಣಾ ಆಯೋಗಕ್ಕೆ 55ಸಾವಿರ ಸಿಬ್ಬಂದಿ ಅಗತ್ಯ

ನಗರದಲ್ಲಿ ಚುನಾವಣಾ ಕರ್ತವ್ಯಕ್ಕೆ ಒಟ್ಟು 55 ಸಾವಿರ ಸಿಬ್ಬಂದಿಯ ಅಗತ್ಯವಿದೆ. ಸದ್ಯ 12 ಸಾವಿರ ಸಿಬ್ಬಂದಿಯ ಕೊರತೆ ಎದುರಾಗಿದೆ. ಆದ ಕಾರಣ ಡಿ ಗ್ರೂಪ್ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಲಿಂಕ್ ಕಾರ್ಯಕರ್ತರನ್ನು ಚುನಾವಣಾ ಕೆಲಸಕ್ಕೆ ನಿಯೋಜಿಸಿಕೊಳ್ಳಲು ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳಲಾಗಿದೆ.

10ನೇ ತರಗತಿ ವ್ಯಾಸಂಗ ಮಾಡಿರುವ 2500 ಅಂಗನವಾಡಿ ಕಾರ್ಯಕರ್ತರು, 6 ಸಾವಿರ ಡಿ ಗ್ರೂಪ್ ನೌಕರರು, 1200 ಬಿಲ್ ಕಲೆಕ್ಟರ್ ಗಳು, 1100 ಆಶಾ ಕಾರ್ಯಕರ್ತೆಯರು ಮತ್ತು 6 ಸಾವಿರ ಖಾಸಗಿ ಶಾಲಾ-ಕಾಲೇಜು ಸಿಬ್ಬಂದಿ ಇದ್ದಾರೆ.

ಮತದಾನ ಪ್ರಮಾಣ ಹೆಚ್ಚಿಸಲು ಬಿಬಿಎಂಪಿಯಿಂದ 4 ಮೊಬೈಲ್ ಆ್ಯಪ್‌

ಭಾನುವಾರ ಮಿಂಚಿನ ನೋಂದಣಿ

ಭಾನುವಾರ ಮಿಂಚಿನ ನೋಂದಣಿ

ನಗರದ ಎಲ್ಲ ಮತಗಟ್ಟೆಗಳಲ್ಲಿ ಭಾನುವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮತಗಟ್ಟೆಯೇ ಮತದಾರರ ಪಟ್ಟಿ ಲಭ್ಯವಿರುತ್ತದೆ. ಸಾರ್ವಜನಿಕರು ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿಕೊಳ್ಳಬಹುದು. ಇದಲ್ಲದೇ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತು ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು.

ಚುನಾವಣಾ ಅಕ್ರಮಗಳನ್ನು ತಡೆಯಲು ಚೆಕ್‌ಪೋಸ್ಟ್

ಚುನಾವಣಾ ಅಕ್ರಮಗಳನ್ನು ತಡೆಯಲು ಚೆಕ್‌ಪೋಸ್ಟ್

ಚುನಾವಣಾ ಅಕ್ರಮಗಳನ್ನು ತಡೆಯಲು ನಗರ ಜಿಲ್ಲೆಯ ಗಡಿ ಭಾಗಗಳಲ್ಲಿ 20ಕಡೆ ಚೆಕ್‌ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಪ್ರತಿ 15 ಮತಗಟ್ಟೆಗಳಿಗೆ ಒಂದು ಪೊಲೀಸ್ ಸಂಚಾರಿ ವಾಹನಗಳನ್ನು ನಿಯೋಜಿಸಲಾಗಿದೆ. ಶಾಂತಿಯುತ ಚುನಾವಣೆಗೆ ಅಗತ್ಯ ಭದ್ರತೆಯನ್ನು ಕಲ್ಪಿಸಲಾಗಿದೆ., ಈವರೆಗೆ 9900 ಮಂದಿ ಬಂದೂಕು, ಪಿಸ್ತೂಲ್ ಗಳನ್ನು ತಂದೊಪ್ಪಿಸಿದ್ದಾರೆ. ಅಕ್ರಮವಾಗಿ ಪಿಸ್ತೂಲ್ ಹೊಂದಿದ್ದ ಮೂವರನ್ನು ಬಂಧಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ 2, ಬಿಜೆಪಿ ವಿರುದ್ಧ 1 ಪ್ರಕರಣ ದಾಖಲಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BBMP commissioner has recomended to election commission to change 393 booths, because some booths are in bad condtitins, is necessary to change the booth for safe voting process.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ