ಜ್ಞಾನಭಾರತಿ: ಒಂದು ವರ್ಷದಲ್ಲಿ 36 ಗಂಧದ ಮರ ಕಳವು

Posted By: Nayana
Subscribe to Oneindia Kannada

ಬೆಂಗಳೂರು, ಮಾರ್ಚ್ 13: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ನಲ್ಲಿನ ಬಯೋ ಪಾರ್ಕ್ ನಲ್ಲಿ ದುಷ್ಕರ್ಮಿಗಳು 36 ಶ್ರೀಗಂಧ ಮರಗಳನ್ನು ಕಡಿದು ಸಾಗಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ 36 ಶ್ರೀಗಂಧದ ಮರಗಳು ಕಳುವಾಗಿವೆ. 2017ರ ಡಿಸೆಂಬರ್ ತಿಂಗಳೊಂದರಲ್ಲೇ 26 ಶ್ರೀಗಂಧ ಮರಗಳನ್ನು ಕಡಿದು ಸಾಗಿಸಿದ್ದಾರೆ. ಸುಮಾರು 1 ಸಾವಿರ ಎಕರೆ ವಿಸ್ತೀರ್ಣದಲ್ಲಿರುವ ಕ್ಯಾಂಪಸ್ ನಗರದಲ್ಲೇ ಅತಿ ಹೆಚ್ಚು ಶ್ರೀಗಂಧ ಮರಗಳಿಉವ ತಾಣವಾಗಿದೆ.

ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಶ್ರೀಗಂಧ ಮರಗಳ ಕಳವು

ಅದರಲ್ಲಿ ಜೀವವೈವಿಧ್ಯ ಉದ್ಯಾನವೇ ಸುಮಾರು 500ಎಕರೆ ವಿಸ್ತೀರ್ಣದಲ್ಲಿದೆ. ಈ ಪೈಕಿ ಸುಮಾರು 300 ಎಕರೆ ವಿಸ್ತೀರ್ಣದಲ್ಲಿನ ಜೀವವೈವಿಧ್ಯ ತಾಣದ ಭಾಗ-2ರಲ್ಲಿ 340 ಶ್ರೀಗಂಧ ಮರಗಳಿವೆ ಎಂದು ಗುರುತಿಸಲಾಗಿದ್ದು, ಭಾಗ1ರಲ್ಲಿ ಮರಗಳ ಸಮೀಕ್ಷೆ ಇನ್ನೂ ಮುಂದುವರೆದಿದೆ.

36 sandalwood tree stolen in Jnanabharathi campus

ಡ್ರೋಣ್ ಸಮೀಕ್ಷೆ: ಈ ನಡುವೆ ಜ್ಞಾನಭಾರತಿ ಕ್ಯಾಂಪ್ಸ್ ನಲ್ಲಿನ ಶ್ರೀಗಂಧ ಹಾಗೂ ಇತರ ಮರಗಳ ಉಳಿವಿಗೆ ಕ್ರಮ ಕೈಗೊಂಡಿರುವ ವಿಶ್ವವಿದ್ಯಾಲಯ, ಮರಗಳ ಸಮೀಕ್ಷೆ ನಡೆಸುತ್ತಿದೆ. ಡ್ರೋಣ್ ಕ್ಯಾಮರಾಗಳನ್ನು ಬಳಸಿ ನಡೆಸುತ್ತಿರುವ ಮರಗಳ ಸಮೀಕ್ಷೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಆನಂತರ ಎಲ್ಲ ಮರಗಳ ಮಾಹಿತಿಯನ್ನು ಜಿಯೋ ಟ್ಯಾಗಿಂಗ್ ಮೂಲಕ ದಾಖಲಿಸಲಾಗುತ್ತದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

2016ರ ನವೆಂಬರ್ ನಿಂದ 2017ರ ಡಿಸೆಂಬರ್ ಅವಧಿಯಲ್ಲಿ 36ಶ್ರೀಗಂಧ ಮರಗಳು ಕಳವು ಪ್ರಕರಣಗಳು ದಾಖಲಾಗಿವೆ ಎಂದು ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಬಯೋ-ಪಾರ್ಕ್‌ನ ಸಮನ್ವಯಾಧಿಕಾರಿ ತಿಳಿಸಿದ್ದಾರೆ. ಜೀವವೈವಿಧ್ಯ ಉದ್ಯಾನ ಸೇರಿದಂತೆ ಕ್ಯಾಂಪಸ್ನ ಇತರೆಡೆ ಪ್ರತಿ ದಿನ 10ರಿಂದ 15 ಮರಗಳನ್ನು ಕಡಿದು ಸಾಗಿಸಿರುವುದು ಬೆಳಕಿಗೆ ಬರುತ್ತಿದೆ.ಆದರೆ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದೇ ವಿಷಾದದ ಸಂಗತಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bio park in Jnanabharathi campus has become favorite for thieves as at least 36 sandalwood trees have been stolen in last one year. An RTI information sought by Bio tech park coordinator has revealed the information.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ