ಲಿಮ್ಕಾದಾಖಲೆ ಸೇರಲು ಪಟಪಟಿಸುತ್ತಿರುವ ರಾಷ್ಟ್ರಧ್ವಜ

Posted By:
Subscribe to Oneindia Kannada

ಬೆಂಗಳೂರು,ಜನವರಿ, 29: ರಾಷ್ಟ್ರೀಯ ಐಕ್ಯತೆ ಪ್ರೇರೇಪಿಸಲು ಹಮ್ಮಿಕೊಂಡ ‘ಭಾರತಕ್ಕೆ ನಮ್ಮ ನಮನ'("ವಿ ಸಲ್ಯೂಟ್ ಇಂಡಿಯಾ')ಎಂಬ ವಿನೂತನ ಬೃಹತ್ ರಾಷ್ಟ್ರ ಧ್ವಜ ನಿರ್ಮಾಣ ಕಾರ್ಯ ಯಶಸ್ವಿಯಾಗಿ ನೆರವೇರಿದ್ದು, ಲಿಮ್ಕಾ ವಿಶ್ವದಾಖಲೆಗೆ ಕಳುಹಿಸಿಕೊಡಲಾಗುತ್ತದೆ ಎಂದು ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಜಿಎ ಬಾವ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಜಿಎ ಬಾವ ಅವರು, 'ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರಧ್ವಜ ಹೊಲಿಯುವ ಕಾರ್ಯದಲ್ಲಿ ಸುಮಾರು 4,000 ಮಂದಿ ಪಾಲ್ಗೊಂಡಿದ್ದು, 3,000 ಮೀಟರ್ ಬಟ್ಟೆ ಬಳಸಿ 33,750 ಚದರ ಅಡಿಯ(150 ಅಡಿ ಉದ್ದ 225 ಅಡಿ ಅಗಲ) ರಾಷ್ಟ್ರ ಧ್ವಜವನ್ನು 22 ಗಂಟೆ 5 ನಿಮಿಷದಲ್ಲಿ ಪೂರ್ಣಗೊಳಿಸಲಾಗಿದೆ. ಇದು ಇತಿಹಾಸದ ಮೊದಲ ಪ್ರಯತ್ನ ಎಂದು ಹೇಳಿದರು.[ಬೆಂಗಳೂರಿನಲ್ಲಿ ಬೃಹತ್ ರಾಷ್ಟ್ರಧ್ವಜ ಸ್ತಂಭ]

ಟ್ಯುನೇಷಿಯಾ ರಾಷ್ಟ್ರ ಧ್ವಜ ನಿರ್ಮಿಸಿದ ಮೊದಲ ದೇಶ. 30 ವರ್ಷಗಳಿಂದ ವಿವಿಧ ರಾಷ್ಟ್ರಗಳು ರಾಷ್ಟ್ರ ಧ್ವಜ ನಿರ್ಮಿಸಿ ವಿಶ್ವ ದಾಖಲೆ ಮಾಡಿವೆ ಎಂದು ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಜಿಎ ಬಾವ ಮಾಹಿತಿ ನೀಡಿದರು.[ನರೇಂದ್ರ ಮೋದಿ ತ್ರಿವರ್ಣ ಧ್ವಜದ ಮೇಲೆ ಸಹಿ ವಿವಾದ ಅಂತ್ಯ?]

'ಭಾರತಕ್ಕೆ ನಮ್ಮ ನಮನ' ("ವಿ ಸಲ್ಯೂಟ್ ಇಂಡಿಯಾ') ಎಂಬ ಕಾರ್ಯಕ್ರಮಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್‌ ಗುಂಡೂರಾವ್, ಚಿತ್ರ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಸಾ.ರಾ. ಗೋವಿಂದು, ನಟ ದೊಡ್ಡಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

ಲಿಮ್ಕಾ ದಾಖಲೆ:

ಲಿಮ್ಕಾ ದಾಖಲೆ ಭಾರತದ ಮಟ್ಟಿಗೆ ಇರುವ ದಾಖಲೆ ಪುಸ್ತಕ. ಶಿಕ್ಷಣ, ಕೃಷಿ, ಸಿನಿಮಾ, ಪ್ರಕೃತಿ, ವೈದ್ಯ ವಿಜ್ಞಾನ, ಉದ್ಯಮ, ಕ್ರೀಡೆ ಹೀಗೆ ನಾನಾ ಕ್ಷೇತ್ರದಲ್ಲಿ ವಿವಿಧ ಸಾಧನೆ ಮಾಡಿದ್ದಲ್ಲಿ ಈ ದಾಖಲೆ ಪುಸ್ತಕಕ್ಕೆ ಸೇರಬಹುದು. ಇದು 1990ರಲ್ಲಿ ಮೊದಲು ಪ್ರಾರಂಭಗೊಂಡಿತು. ಇದು ಇಂಗ್ಲೀಷ್, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಮುದ್ರಣಗೊಳ್ಳುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
33750 sq feet long Indian National flag stitched in Kanteerava Stadium, Bengaluru. Its take time 22 hours and 5 minutes.4000 people stiched this flag.
Please Wait while comments are loading...