ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2017ರಲ್ಲಿ ಮಹಿಳೆಯರ ಮೇಲೆ ದೌರ್ಜನ್ಯದ 3,017 ಪ್ರಕರಣ ದಾಖಲು

By Manjunatha
|
Google Oneindia Kannada News

ಬೆಂಗಳೂರು, ಜನವರಿ 03: 2017ರಲ್ಲಿ ರಾಜ್ಯದ ವಿವಿಧೆಡೆ ಮಹಿಳೆಯರ ಮೇಲೆ 3,107 ದೌರ್ಜನ್ಯ ಪ್ರಕರಣ ದಾಖಲಾಗಿವೆ ಎಂದು ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮೀಬಾಯಿ ತಿಳಿಸಿದ್ದಾರೆ.

ಹಲ್ಲೆ ಮಾಡಿದ್ದು ನಾನಲ್ಲ ಅವರು: ಯೋಗೀಶ್ ಗೌಡ ಪತ್ನಿ ಮಲ್ಲಮ್ಮಹಲ್ಲೆ ಮಾಡಿದ್ದು ನಾನಲ್ಲ ಅವರು: ಯೋಗೀಶ್ ಗೌಡ ಪತ್ನಿ ಮಲ್ಲಮ್ಮ

ಮಹಿಳಾ ಆಯೋಗದ ವತಿಯಿಂದ 2018ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಂಗಳಿಗೆ ಸರಾಸರಿ 230 ಪ್ರಕರಣ ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

3017 women on Violence cases has been registerd

ಪ್ರತಿ ಜಿಲ್ಲೆಯಲ್ಲೂ ಬೇರೆ ಬೇರೆ ಸ್ವರೂಪದ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ ಎಂದ ಅವರು ಹಾವೇರಿಯಲ್ಲಿ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಪ್ರಕರಣಗಳು, ರಾಮನಗರದಲ್ಲಿ ಬಹುಪತ್ನಿತ್ವ, ಮೈಸೂರಿನಲ್ಲಿ ಪ್ರೇಮ ವಿವಾಹದ ನಂತರ ದೌರ್ಜನ್ಯ, ಚಿಕ್ಕಮಗಳೂರಿನಲ್ಲಿ ವಲಸಿಗರ ಮೇಲೆ ಅತ್ಯಾಚಾರ, ಮಂಗಳೂರಿನಲ್ಲಿ ವೇಶ್ಯಾವಾಟಿಕೆ ಜಾಲ, ಕೊಪ್ಪಳದಲ್ಲಿ ಬಾಲ್ಯವಿವಾಹ... ಹೀಗೆ ವಿವಿಧ ರೀತಿಯ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು.

ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ದುಡಿಯುವ ಮಹಿಳೆಯರ ಮೇಲೆ ‌ಲೈಂಗಿಕ ಕಿರುಕುಳ ನಡೆದಿರುವ 72 ಪ್ರಕರಣ ದಾಖಲಾಗಿವೆ ಇದು ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ ಹೆಚ್ಚಳವಾಗಿದೆ ಎಂದರು.

English summary
In the year 2017, 3017 cases of Violence on women has been lodged in Karnataka says Women's Commission president Nagalakshmi Bhai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X