ಬೆಂಗಳೂರಿನಲ್ಲಿ ಮನೆಗೆ ನುಗ್ಗಿ ಪುಡಿ ರೌಡಿಗಳ ದಾಂಧಲೆ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್. 12 : 30 ರೌಡಿಗಳ ತಂಡವೊಂದು ಶನಿವಾರ ಮಧ್ಯರಾತ್ರಿ ಬೆಂಗಳೂರಿನ ರಾಮಮೂರ್ತಿ ನಗರದ ಟಿ.ಸಿ ಪಾಳ್ಯದ ಮನೆಗೆ ನುಗ್ಗಿ ಮೆನೆಯಲ್ಲಿದ್ದವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದೆ.

ರಾಜು ಎನ್ನುವರ ಮನೆಗೆ ನುಗ್ಗಿದ ಪುಡಿ ರೌಡಿಗಳ ತಂಡ ರಾಜು ಮತ್ತು ಅವರ ತಾಯಿ 65 ವರ್ಷದ ಲಕ್ಷ್ಮೀಭಾಯಿ ಮೇಲೆ ಹಲ್ಲೆ ನಡೆಸಿದ್ದಾರೆ. ಕೇರಳದ ಮೂಲದ ನಿವೃತ್ತ ಐಟಿಐ ಅಧಿಕಾರಿ ವೇದಸ್ಯ ಅವರು ಬಿಬಿಎಂಪಿ ನಿಯಮಗಳನ್ನು ಗಾಳಿಗೆ ತೂರಿ ಮನೆ ಕಟ್ಟುವುದನ್ನು ರಾಜು ಪ್ರಶ್ನಿಸಿದ್ದಕ್ಕೆ ಈ ಹಲ್ಲೆ ನಡೆದಿದೆ.

30 rowdy's gang attacked on Raju's house in TC Palya Bengaluru

ರಾಜು ಅವರ ಮನೆ ಪಕ್ಕದಲ್ಲಿ ವೇದಸ್ಯ ಅವರು ಹೊಸದಾಗಿ ಮನೆ ಕಟ್ಟುತ್ತಿದ್ದಾರೆ. ಬಿಬಿಎಂಪಿ ಪ್ರಕಾರ ಒಂದು ಮನೆಯಿಂದ ಮತ್ತೊಂದು ಮನೆಗೆ 3 ಅಡಿ ಜಾಗ ಬಿಟ್ಟು ಮನೆ ಕಟ್ಟಿ ರಾಜು ಹೇಳಿದ್ದಾನೆ. ಹಾಗೂ ಬಿಬಿಎಂಪಿಗೆ ಈ ಬಗ್ಗೆ ದೂರನ್ನು ನೀಡಿದ್ದಾನೆ.

ಇದಿರಂದ ಕೋಪಗೊಂಡ ವೇದಸ್ಯ ಶನಿವಾರ ರಾತ್ರಿ ಸುಮಾರು 30 ರೌಡಿಗಳನ್ನು ರಾಜು ಮನೆಗೆ ಕಳುಹಿಸಿ ಹಲ್ಲೆ ಮಾಡಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ.

ಹಲ್ಲೆಗೊಳಗಾದ ರಾಜು ಅವರು ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ಸರಿಯಾಗಿ ಸ್ಪಂದಿಸಿಲ್ಲ ಎಂದು ರಾಜು ಅವರ ಅಳಲು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
30 rowdy's gang attacked on Raju's house in TC Palya,Ramamurthy Nagar Bengaluru on Saturday mid night.
Please Wait while comments are loading...