ಗ್ರಾಮಿ ಪ್ರಶಸ್ತಿ ಕೊನೆ ಸುತ್ತಿಗೆ ಭಾರತೀಯ ಶಾಸ್ತ್ರೀಯ ಸಂಗೀತ ಆಲ್ಬಂ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 12: 'ಅನಂತ ಮೊದಲನೆಯ ವಾಲ್ಯೂಮ್--ಮಾಸ್ತ್ರೋಸ್ ಆಫ್ ಇಂಡಿಯಾ' ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಅಧಿಕೃತ ಅರ್ಜಿಯನ್ನು 60ನೇ ಗ್ರಾಮಿ ಪ್ರಶಸ್ತಿಗಾಗಿ, 'ವರ್ಲ್ಡ್ ಮ್ಯೂಸಿಕ್ ಆಲ್ಬಮ್'ನ ವರ್ಗದಡಿ ಸ್ವೀಕರಿಸಲಾಗಿದೆ.

ಪಂಡಿತ್ ವಿಕ್ಕು ವಿನಾಯಕ್ ರಾಮ್ ಅವರಿಂದ ರಚಿತವಾದ ಗುರು ಸ್ತೋತ್ರದಲ್ಲಿ ಮೂರು ತಲೆಮಾರಿನವರಿದ್ದು, ಸೆಲ್ವ ಗಣೇಶ್ ವಿನಾಯಕ್ ರಾಮ್, ಸ್ವಾಮಿನಾಥನ್ ಸೆಲ್ವಗಣೇಶ್ ಮತ್ತು ಸಿದ್ಧಾಂತ್ ಭಾಟಿಯ ಇದ್ದಾರೆ. ಇದನ್ನು 'ಅರೇಂಜ್ ಮೆಂಟ್ಸ್- ಇನ್ಸ್ಟ್ರುಮೆಂಟಲ್ ಆಂಡ್ ವೋಕಲ್ಸ್'ಗಾಗಿ ಸ್ವೀಕರಿಸಲಾಗಿದೆ.

30 Indian Maestros and One Album In The Race For The Grammy's

ಅನಂತವನ್ನು ಕೇವಲ 33 ದಿನಗಳಲ್ಲಿ ಧ್ವನಿಮುದ್ರಣವನ್ನು ಮಾಡಲಾಯಿತು. ನಿರ್ಮಾಪಕರಾದ ಸಿದ್ಧಾಂತ್ ಭಾಟಿಯಾ ದೇಶಾದ್ಯಂತ ಪ್ರವಾಸ ಮಾಡಿ, ಯಾವ ಎಲ್ಕ್ಟ್ರಾನಿಕ್ ಸಂಗೀತದ ಉಪಕರಣದ ಸಹಾಯವೂ ಇಲ್ಲದೆ, ಪಾರಂಪರಿಕವಾದ ಜೀವಂತ ಕಚೇರಿಗಳ ಧ್ವನಿ ಮುದ್ರಣ ಮಾಡಿದ್ದಾರೆ.

ಅಲ್ಪಾವಧಿಯಲ್ಲಿ ಮಿಂಚಿನ ಕ್ಷಣಗಳನ್ನು ಸೆರೆ ಹಿಡಿಯುವ ಉದ್ದೇಶ ಇದರ ಹಿಂದಿತ್ತು. ಎಲ್ಲಾ ಟ್ರ್ಯಾಕ್ ಗಳನ್ನು ಆಗಲೇ ರಚಿಸಿ, ಸಿದ್ಧಪಡಿಸಲಾಯಿತು. ಅನಂತ ಪ್ರಯೋಗಾತ್ಮಕವಾದ ಸಂಗೀತವಾದರೂ ಭಾರತದ ಶಾಸ್ತ್ರೀಯತೆಯನ್ನು ಕಾಯ್ದುಕೊಂಡಿದೆ.

ಅನಂತ ಭಾರತ ಶಾಸ್ತ್ರೀಯ ಸಂಗೀತದ ಅತಿ ದೊಡ್ಡ ಸಂಕಲನವಾಗಿದ್ದು, 30 ಸಂಗೀತ ದಿಗ್ಗಜರ 3000 ಕ್ಷಣಗಳ ಸಂಗೀತವನ್ನು ಹೊಂದಿದೆ. ಇದರ ಕೇಳುಗರನ್ನು ಆಂತರಿಕ ಪಯಣಕ್ಕೆ ಕೊಂಡೊಯ್ಯುತ್ತದೆ. ಆರ್ಟ್ ಆಫ್ ಲಿವಿಂಗ್ ನ ಗಿಫ್ಟ್ ಎ ಸ್ಮೈಲ್/ ಕೇರ್ ಫಾರ್ ಚಿಲ್ಡ್ರನ್ ಕಾರ್ಯಕ್ರಮ ಗಳಿಗಾಗಿ ಮೊಟ್ಟ ಮೊದಲನೆಯ ಸಲ ಭಾರತದ ಉದ್ದಗಲಕ್ಕೂ ಶಾಸ್ತ್ರೀಯ ಸಂಗೀತಕಾರರು ಒಂದಾಗಿ ಸೇರಿದ್ದಾರೆ.

ಗ್ರಾಮಿ ಪ್ರಶಸ್ತಿ ವಿಜೇತರಾದ ಪಂಡಿತ್ ವಿಕ್ಕು ವಿನಾಯಕ್ ರಾಮ್ ಘಟವಾದ್ಯದಲ್ಲಿ, ಪಂಡಿತ್ ವಿಶ್ವ ಮೋಹನ್ ರಾಮ್, ಹಿರಿಯ ಪಿಟೀಲು ವಾದಕರು ಮತ್ತು ಗ್ರಾಮಿ ರಚನಾಕಾರರಾದ ಕಲಾ ರಾಮ್ ನಾಥ್, ಗ್ರಾಮಿಗಾಗಿ ನೇಮಿಸಲ್ಪಟ್ಟ ಮಾಂಡೋಲಿನ್ ವಾದಕರಾದ ಯು. ರಾಜೇಶ್, ಸರೋದ್ ವಾದಕರಾದ ಪಂಡಿತ್ ತೇಜೇಂದರ್ ನಾರಾಯಣ್ ಮಜುಂದಾರ್, ಪಂಡಿತ್ ಜಸ್ ರಾಜ್,

ಅರುಣಾ ಸಾಯಿರಾಮ್, ಉಸ್ತಾದ್ ಶಹೀದ್ ಪರ್ವೇಜ್ ಖಾನ್, ಉಸ್ತಾದ್ ರಶೀದ್ ಖಾನ್, ಲೈಫ್ ಆಫ್ ಪೈನ ಖ್ಯಾತಿಯ ಬಾಂಬೆ ಜಯಶ್ರೀ, ಯುವ ಕಲಾಕಾರರಾದ ಸಿತಾರ್ ವಾದಕರಾದ ಪೂರ್ಬಯಾನ್ ಚಟರ್ಜಿ, ವೀಣ ವಾದಕರಾದ ರಾಜೇಶ್ ವೈದ್ಯ, ಕೊಳಲು ವಾದಕರಾದ ರಾಕೇಶ್ ಚೌರಾಸಿಯ, ಹಾಡುಗಾರರಾದ ಕೌಶಿಕಿ ಚಕ್ರಬರ್ತಿ, ಬಾಲಿವುಡ್ ನ ಕೆ‌.ಎಸ್.ಚಿತ್ರಾ, ಹರಿಹರನ್, ಜಾವೇದ್ ಅಲಿ ಮರೆಯಲು ಸಾಧ್ಯವಿಲ್ಲದಂತಹ ಸಂಗೀತ ಸ್ವಾದವನ್ನು ನೀಡಿದ್ದಾರೆ.

ಪ್ರತಿಯೊಬ್ಬರ ಅಭಿರುಚಿಗೂ ಸರಿಹೊಂದುವ ಸಂಗೀತವಿದ್ದು, ರೂಮಿಯವರು ಜಗನ್ಮಾತೆಯ ಸ್ತುತಿಯು ಘನವಾದ ತಾಳವಾದ್ಯದೊಂದಿಗೆ ಬೆರೆತಿದೆ. ಅಭಿವ್ಯಕ್ತಗೊಳಿಸಲಾರದ ಆನಂದದ ಸ್ಥಿತಿಗೆ ಕೇಳುಗರನ್ನು ಕೊಂಡೊಯ್ಯುತ್ತದೆ.

ಇದರಿಂದ ಬರುವ ಲಾಭವನ್ನು ಆರ್ಟ್ ಆಫ್ ಲಿವಿಂಗ್ ನ ಮಕ್ಕಳ ಸೇವಾಕಾರ್ಯಕ್ಕೆ ವಿನಿಯೋಗಿಸಲಾಗುವುದು. 58,000 ಹಿಂದುಳಿದ ಮಕ್ಕಳಿಗೆ 435 ಶಾಲೆಗಳಲ್ಲಿ ಉಚಿತ ಶಿಕ್ಷಣವನ್ನು ಭಾರತಾದ್ಯಂತ ನೀಡಲಾಗುತ್ತಿದೆ. ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರರಿಂದ ಪ್ರೇರಿತವಾದ ಅನಂತ ಜಗತ್ತಿನ ಎಲ್ಲರನ್ನೂ ವಿಶ್ವಾತ್ಮಕ ಪ್ರೇಮದಿಂದ ಒಗ್ಗೂಡಿಸಿ, ಭಾರತೀಯ ಸಂಗೀತದ ಶುದ್ಧತೆಯನ್ನೂ ಸಂರಕ್ಷಿಸುವ ಉದ್ದೇಶವನ್ನು ಹೊಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
'Ananta Volume 1 - Maestros of India,' the official submission of The Art of Living has been accepted for consideration for nomination in the upcoming 60th Grammy awards as a 'World Music Album' & one of the tracks, Guru Stotra. Indian Classical Vocals has been entered for the "Arrangement - Instrumental and Vocals" category.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ