ಗೌರಿ-ಗಣೇಶ ಹಬ್ಬಕ್ಕೆ ಗ್ರಾಮೀಣ ಅಂಗಡಿಯಲ್ಲಿ ಭಾರೀ ರಿಯಾಯಿತಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 30: ಇನ್ನೇನು ಗೌರಿ-ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಇಂಥ ಸಂದರ್ಭದಲ್ಲಿ ಗ್ರಾಮೀಣ ಅಂಗಡಿಯಿಂದ ಕೈಮಗ್ಗ-ಖಾದಿ ವಸ್ತ್ರ ಹಾಗೂ ಸಿರಿಧಾನ್ಯಗಳ ಪ್ರದರ್ಶನ ಹಾಗೂ ಮಾರಾಟ ಹಮ್ಮಿಕೊಳ್ಳಲಾಗಿದೆ. ಜತೆಗೆ ಶೇ 30ರಷ್ಟು ರಿಯಾಯಿತಿ ಕೂಡ ಇದೆ.

ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಕೈ ಮಗ್ಗದ ಹತ್ತಿ ಸೀರೆಗಳ ಬಳಕೆ ಕಡಿಮೆಯಾಗುತ್ತಿದೆ. ಈ ಕಾರಣಕ್ಕೆ ಎಷ್ಟೋ ಕೈಮಗ್ಗದ ಸೊಸೈಟಿಗಳು ನಷ್ಟದಿಂದ ಮುಚ್ಚಿವೆ. ಇದು ನೈಸರ್ಗಿಕವಾಗಿ ತಯಾರಾಗುವ ಸೀರೆಗಳು, ಅಪ್ಪಟ ಹತ್ತಿಯಿಂದ ಸಿದ್ಧಪಡಿಸಲಾಗಿರುತ್ತದೆ. ಇಂಥ ಚೆಂದದ ವಸ್ತ್ರಗಳನ್ನು ಖರೀದಿಸುವುದರಿಂದ ನಮ್ಮ ಪರಂಪರೆಯನ್ನೂ ಉಳಿಸಿಕೊಂಡಂತಾಗುತ್ತದೆ, ನೇಕಾರರ ಬದುಕಿಗೊಂದು ಆಸರೆಯೂ ಆಗುತ್ತದೆ.[ಡಾ. ಯತೀಂದ್ರ ರಾಜಕೀಯಕ್ಕೆ ಬಂದರೆ ನೋ ಪ್ರಾಬ್ಲಂ: ಸಿದ್ದರಾಮಯ್ಯ]

30% discount sale in Grameena angadi

ಗ್ರಾಮೀಣ ಕರಕುಶಲ ಉದ್ಯಮದ ಒಂದು ಘಟಕ ಗ್ರಾಮೀಣ ಅಂಗಡಿ. ಇಲ್ಲಿ ಸಿರಿಧಾನ್ಯಗಳು ಕೂಡ ಸಿಗುತ್ತವೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅವುಗಳಿಂದ ವಿವಿಧ ಆಹಾರಗಳನ್ನು ತಯಾರು ಮಾಡಬಹುದು. ಅಂದಹಾಗೆ ಬಾಯಿಗೂ ರುಚಿ.[ರಾಜಕಾಲುವೆ ಒತ್ತುವರಿ ತೆರವು ಎಂಬ ನಿಗೂಢ ರಹಸ್ಯ!]

30% discount sale in Grameena angadi

ವಿಳಾಸ: ಗ್ರಾಮೀಣ ಅಂಗಡಿ, ನಂ 8, 11ನೇ ಮುಖ್ಯರಸ್ತೆ, 39ನೇ ಎ ಕ್ರಾಸ್, 4ನೇ ಟಿ ಬ್ಲಾಕ್, ಜಯನಗರ, ಶಾಲಿನಿ ಮೈದಾನದ ಎದುರು, ಬೆಂಗಳೂರು-560041. ಮೊಬೈಲ್ ಫೋನ್ ಸಂಖ್ಯೆ 9448324727, 9731105526.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
On the occasion of Gowri-Ganesha festival 30% discount sale in Grameena angadi. Saree, siri dhanya sale in a shop situated in Jayanagar 4th t block, Bengaluru.
Please Wait while comments are loading...