ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿರ್ಸಿ ಸರ್ಕಲ್ ಮೇಲ್ಸೇತುವೆ ಕಾಮಗಾರಿಗೆ 30 ದಿನಗಳ ಗಡುವು

|
Google Oneindia Kannada News

ಬೆಂಗಳೂರು, ಜನವರಿ 9: ಸಿರ್ಸಿ ಸರ್ಕಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಕ್ಕೆ 30 ದಿನಗಳ ಗಡುವು ನೀಡಲಾಗಿದೆ.

ಚಾಲುಕ್ಯ ವೃತ್ತದ ವಿವಾದಿತ ಉಕ್ಕಿನ ಸೇತುವೆ ಯೋಜನೆಗೆ ಮರುಜೀವ ಚಾಲುಕ್ಯ ವೃತ್ತದ ವಿವಾದಿತ ಉಕ್ಕಿನ ಸೇತುವೆ ಯೋಜನೆಗೆ ಮರುಜೀವ

ಮೇಲ್ಸೇತುವೆಯಲ್ಲಿ ಪದೇ ಪದೇ ಗುಂಡಿ ಬೀಳುವುದು, ಮಳೆ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಕುರಿತು ದೂರುಗಳು ಕೇಳಿಬರುತ್ತಿತ್ತು, ಹೀಗಾಗಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಡಾಂಬರೀಕರಣ ಮಾಡಲಾಗುತ್ತಿದೆ.

ಜಯದೇವ ಬಳಿ ಮೆಟ್ರೋ ಕಾಮಗಾರಿ ಆರಂಭ: ವಾಹನಗಳಿಗೆ ಬದಲಿ ಮಾರ್ಗ ಜಯದೇವ ಬಳಿ ಮೆಟ್ರೋ ಕಾಮಗಾರಿ ಆರಂಭ: ವಾಹನಗಳಿಗೆ ಬದಲಿ ಮಾರ್ಗ

ಒಟ್ಟು 4.5 ಕೋಟಿ ರೂ ವೆಚ್ಚದಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿದ್ದು, ಒಂದು ಪಾರ್ಶ್ವದಲ್ಲಿ ಕೆಲಸ ಮುಗಿಸಲು 30 ದಿನಗಳ ಗಡುವು ನೀಡಲಾಗಿದೆ ಎಂದು ಡಿಸಿಎಂ ಪರಮೇಶ್ವರ ತಿಳಿಸಿದ್ದಾರೆ. ನಗರದ ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ದುರಸ್ತಿ ಕಾರ್ಯವನ್ನು ಪರಮೇಶ್ವರ್ ವೀಕ್ಷಿಸಿದರು.

30 days deadline for sirsi circle flyover repair work

ಶೀಟುಗಳನ್ನು 140 ಡಿಗ್ರಿ ಉಷ್ಣಾಂಶದಲ್ಲಿ ಬಿಸಿ ಮಾಡಿ ಹೊದಿಸಲಾಗುತ್ತದೆ. 2.5 ಕಿ.ಮೀ ಉದ್ದದ ಮೇಲ್ಸೇತುವೆಯಲ್ಲಿ ಡಾಂಬರು ಶೀಟು ಹಾಕಿ, ಅದರ ಮೇಲೆ ಡಾಂಬರು ಹಾಕಲಾಗುತ್ತದೆ ಎಂದರು.

ಮೈಸೂರು ರಸ್ತೆ ಕಡೆಯಿದ ಮೆಜೆಸ್ಟಿಕ್ ಮತ್ತು ಟೌನ್‌ಹಾಲ್‌ ಕಡೆಗೆ ಬರುವ ವಾಹನಗಳಿಗೆ ಬೆಳಗ್ಗೆ 6ರಿಂದ ಮಧ್ಯಾಹ್ನದ 3ರವರೆಗೆ ಪ್ರವೇಶ ಕಲ್ಪಿಸಲಾಗುತ್ತದೆ. ಮಧ್ಯಾಹ್ನ 3ರಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಟೌನ್‌ಹಾಲ್ ಕಡೆಯಿಂದ ಮೈಸೂರು ರಸ್ತೆಯತ್ತ ಸಾಗುವ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ.

ಮಾರ್ಗ ಬದಲಾವಣೆಯಾದ ಬಳಿಕ ಕೆಆರ್ ಮಾರುಕಟ್ಟೆ ಮೇಲ್ಸೇತುವೆ ದುರಸ್ತಿ ಕಾರ್ಯ ಆರಂಭಿಸಲಾಗುತ್ತದೆ. ಸುಮಾರು 2.65 ಕಿ.ಮೀ ಉದ್ದವಿರುವ ಮೇಲ್ಸೇತುವೆಯ ದುರಸ್ತಿಗೆ 4.30 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ನಾಗೇಶ್ ಮಾಯಣ್ಣ ಸಾಯಿ ತ್ರಿಷಾ ಇನ್‌ಫ್ರಾ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ.

ಈ ಅವಧಿಯಲ್ಲಿ ಮೇಲುರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಪುರಭವನದಿಂದ ಮೈಸೂರು ರಸ್ತೆ ಮತ್ತು ಚಾಮರಾಜಪೇಟೆಯ ಕಡೆಗೆ ಸಾಗುವವರು ಪರ್ಯಾಯ ರಸ್ತೆಗಳಲ್ಲಿ ತೆರಳಬೇಕಾಗುತ್ತದೆ.

ಒಂದು ಪದರ ಡಾಂಬರು ಕಿತ್ತು ಹಾಕಿ, 3 ಎಂಎಂ ದಪ್ಪದ ಡಾಂಬರು ಶೀಟ್ ಹೊದಿಸಲಾಗುತ್ತದೆ. ಬಳಿಕ 40 ಎಂಎಂ ದಪ್ಪದ ಬಿಟುಮಿನ್ ಹಾಕಲಾಗುವುದು ಎಂಜಿನಿಯರ್ ಒಬ್ಬರು ಮಾಹಿತಿ ನೀಡಿದ್ದಾರೆ.

English summary
Deputy chief minister G Parameshwar gave 30 days deadline for sirsi circle flyover repair work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X