ಸಂಭ್ರಮದ ಕಾರ್ಯಕ್ರಮ ಮುಗಿಸಿ ಬರುವಾಗ ಒಂದೇ ಕುಟುಂಬದ ಮೂವರು ಸಾವು

Posted By: Sridhar M Budigere
Subscribe to Oneindia Kannada

ವಿಜಯಪುರ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಮಾರ್ಚ್ 12 : ಮರಕ್ಕೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಕುಟುಂಬದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ವಾಪಸ್ ಬರುವಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ವಿಜಯ್ ಕುಮಾರ್, ಹರೀಶ್, ಶ್ರೀನಿವಾಸ್, ಪಾರ್ವತಮ್ಮ, ಕವಿತಾ, ವೃಷಬ್ ಗೌಡ, ಸುಪ್ರಿಯಾ ಹಾಗೂ ಶ್ರುತಿ ಕುಟುಂಬದ ಕಾರ್ಯಕ್ರಮಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಳಗವಾರಕ್ಕೆ ಹೋಗಿದ್ದರು.

ಬಾಗಲಕೋಟೆ: ಎತ್ತಿನ ಬಂಡಿಗೆ ಲಾರಿ ಡಿಕ್ಕಿ, 9 ಮಂದಿ ಸಾವು

ಕಾರ್ಯಕ್ರಮ ಮುಗಿಸಿ ಸಂಜೆ ವಾಪಸಾಗುತ್ತಿದ್ದಾಗ ಕಾರು ಮರಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಪಾರ್ವತಮ್ಮ, ಹರೀಶ್ ಹಾಗೂ ವಿಜಯ್ ಕುಮಾರ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟರೆ, ಶ್ರೀನಿವಾಸ್, ವೃಷಬ್ ಗೌಡ, ಸುಪ್ರಿಯಾ, ಶ್ರುತಿ, ಕವಿತಾ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Accident

ವಿಜಯಪುರ ಹೊರವಲಯದ ದರ್ಗಾ ಬಳಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸದ ಕಾರಣಕ್ಕೆ ಇಂಥ ಅನಾಹುತಗಳಿಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
3 people from same family died in an accident at Vijayapura, Bengaluru rural district. 5-6 people coming after visiting family function in Talagavara, Chintamani taluk, Chikkaballapur district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ