ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಾತಂತ್ರ್ಯೋತ್ಸವ: 3.33 ಲಕ್ಷ ಪ್ರಯಾಣಿಕರಿಂದ ಮೆಟ್ರೋ ಬಳಕೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 16: ಸ್ವಾತಂತ್ರ್ಯ ಪುಷ್ಪಪ್ರದರ್ಶನಕ್ಕೆ ಲಕ್ಷಾಂತರ ಮಂದಿ ಆಗಮಿಸಿದ ಕಾರಣ ನಮ್ಮ ಮೆಟ್ರೋದಲ್ಲಿ ಬುಧವಾರ ಜನದಟ್ಟಣೆ ವಿಪರೀತವಾಗಿತ್ತು. ಒಟ್ಟು 3.33 ಲಕ್ಷ ಮಂದಿ ಮೆಟ್ರೋ ಬಳಸಿದ್ದು, 33,204 ಲಾಲ್‌ಬಾಗ್‌ ಮೆಟ್ರೋವನ್ನು ಬಳಸಿದರು.

ಫ್ಲವರ್‌ ಶೋ ಪರಿಣಾಮ: ಮೆಟ್ರೋ ಪ್ರಯಾಣ ಮೂರು ದಿನ ತುಟ್ಟಿಫ್ಲವರ್‌ ಶೋ ಪರಿಣಾಮ: ಮೆಟ್ರೋ ಪ್ರಯಾಣ ಮೂರು ದಿನ ತುಟ್ಟಿ

ಮೈಸೂರು ರಸ್ತೆ-ಬೈಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ 1.45 ಲಕ್ಷ, ನಾಗಸಂದ್ರದಿಂದ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲಿ 1.88 ಲಕ್ಷ ಮಂದಿ ಪ್ರಯಾಣಿಸಿದರು. ಲಾಲ್‌ಬಾಗ್‌ ನಿಲ್ದಾಣದಲ್ಲಿ ಬೆಳಗ್ಗೆ 5ಗಂಟೆಯಿಂದ ಸಂಜೆ 8ರವರೆಗೆ 33,204 ಮಂದಿ ಮೆಟ್ರೋ ಬಳಸಿದ್ದಾರೆ.

ಯೋಧರಿಗೆ ಸಮರ್ಪಿತ ಪುಷ್ಪ ಪ್ರದರ್ಶನ ಉದ್ಘಾಟಿಸಿದ ಕುಮಾರಸ್ವಾಮಿಯೋಧರಿಗೆ ಸಮರ್ಪಿತ ಪುಷ್ಪ ಪ್ರದರ್ಶನ ಉದ್ಘಾಟಿಸಿದ ಕುಮಾರಸ್ವಾಮಿ

ಲಾಲ್‌ಬಾಗ್‌ನಿಂದ ಮರಳಿ ಬೇರೆಡೆಗೆ ಹೋಗುವವರಿಗೆ ಟೋಕನ್‌ ಬದಲು 30 ರೂ. ದರದ ಪೇಪರ್‌ ಟಿಕೆಟ್‌ ನೀಡಲಾಯಿತು. ಆಗಸ್ಟ್ 14ರಂದು ಕೂಡ ಮೆಟ್ರೋ ದಟ್ಟಣೆಯಿಂದ ಕೂಡಿತ್ತು, ಲಾಲ್‌ಬಾಗ್‌ನಲ್ಲಿ ಪುಷ್ಪಪ್ರದರ್ಶನ ಇದ್ದುದರಿಂದ ಹಸಿರು ಮಾರ್ಗದ ಎಲ್ಲ ನಿಲ್ದಾಣಗಳಲ್ಲಿ ಜನದಟ್ಟಣೆ ಪ್ರತಿ ದಿನಕ್ಕಿಂತ ಅಧಿಕವಾಗಿತ್ತು. ನೇರಳೆ ಮಾರ್ಗದಿಂದಲೂ ಲಕ್ಷಾಂತರ ಜನರು ಲಾಲ್‌ಬಾಗ್‌ಗೆ ಪ್ರಯಾಣಿಸಿದ್ದರು.

3.33 lakh commuters use Namma Metro on I-Day

ಹಾಗಾಗಿ ಮೆಜೆಸ್ಟಿಕ್‌ ಇಂಟರ್‌ಚೇಂಜ್‌ ನಿಲ್ದಾಣವು ಜನರಿಂದ ತುಂಬಿಹೋಗಿತ್ತು. ಹಸಿರು ಮಾರ್ಗದಲ್ಲಿ ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಪ್ರತಿ 8 ನಿಮಿಷಕ್ಕೊಂದು ರೈಲು ಸೇವೆ ನೀಡುವ ಬದಲು ಒಂದು ನಿಮಿಷ ಕಡಿತಗೊಳಿಸಿ 7 ನಿಮಿಷಕ್ಕೊಂದು ರೈಲು ಕಾರ್ಯಾಚರಣೆಗೊಳಿಸಲಾಯಿತು. ನೇರಳೆ ಮಾರ್ಗದಲ್ಲಿ ಇದೇ ವಾಧಿಯಲ್ಲಿ ಪ್ರತಿ 6ರಿಂದ 8 ನಿಮಿಷಕ್ಕೊಂದು ರೈಲು ಕಾರ್ಯಾಚರಣೆಗೊಂಡಿತು.

English summary
More than 3.33 lakhs of people were travelled in Namma Metro on Independence day and most of the commuters were visited Lalbagh station to visit flower show at Lalbagh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X