ಬೆಂಗಳೂರು ರಿಯಲ್ ಎಸ್ಟೇಟ್ ಕಂಪನಿಗಳಿಂದ 3 ಸಾವಿರ ಕೋಟಿ ರು. ಪಂಗನಾಮ!

Posted By:
Subscribe to Oneindia Kannada

ಬೆಂಗಳೂರು, ಜುಲೈ 29: ಕಡಿಮೆ ಮೊತ್ತಕ್ಕೆ ನಿವೇಶನ ಕೊಡಿಸುವುದಾಗಿ ಹೇಳಿ ಸಾರ್ವಜನಿಕರಿಗೆ ಸುಮಾರು 3,273 ಕೋಟಿ ರು. ವಂಚಿಸಿರುವ ಕಂಪನಿಗಳ ವಿರುದ್ಧ ತನಿಖೆ ನಡೆಸಿದ ಕ್ರಮ ಕೈಗೊಂಡಿರುವುದಾಗಿ ಸಿಐಡಿ ಡಿಜಿಪಿ ಹಾಗೂ ಕಿಶೋರ್ ಚಂದ್ರ ಹಾಗೂ ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಮೇ 1ರಿಂದ ಜಾರಿಯಾದ ರಿಯಲ್ ಎಸ್ಟೇಟ್ ಕಾಯ್ದೆ ಏನಿದು?

ನಗರದಲ್ಲಿ ಶನಿವಾರ ಮಧ್ಯಾಹ್ನ ನಡೆದ ಸುದ್ದಿಗೋಷ್ಠಿಯಲ್ಲಿ ಅವರು, ಸಾರ್ವಜನಿಕರಿಗೆ ಮೋಸ ಮಾಡಿದ ಕಂಪನಿಗಳ ಹೆಸರುಗಳನ್ನು ಹಾಗೂ ಆ ಕಂಪನಿಗಳು ಲಪಟಾಯಿಸಿದ ಹಣದ ಮೊತ್ತದ ವಿವರಗಳನ್ನು ನೀಡಿದರು.

3,273 crore looted by Online real estate companies: Karnataka CID DIG Kishor Chandra

ಸಾಮಾಜಿಕ ಜಾಲತಾಲಗಳ ಮೂಲಕ ಹೂಡಿಕೆಗೆ ಸಾರ್ವಜನಿಕರನ್ನು ಪ್ರೇರೇಪಿಸುತ್ತಿದ್ದ ಈ ಕಂಪನಿಗಳು ಈಗಾಗಲೇ ಹಲವಾರು ಜನರಿಗೆ ಟೋಪಿ ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ತಿಳಿಸಿದ ಕಂಪನಿಗಳ ಪಟ್ಟಿ ಇಲ್ಲಿದೆ.

ಕಂಪನಿಯ ಹೆಸರು ಮೋಸ ಮಾಡಿದ ಹಣದ ಮೊತ್ತ (ಕೋಟಿ ರು.ಗಳಲ್ಲಿ)
ಅಗ್ರಿ ಗೋಲ್ಡ್ 1,640
ಹಿಂದೂಸ್ಥಾನ್ ಇನ್ ಫ್ರಾಸ್ಟ್ರಕ್ಚರ್ 389
ಮೈತ್ರಿ ಪ್ಲಾಂಟೇಶನ್ 9.82
ಗ್ರೀನ್ ಬರ್ಡ್ ಆಗ್ರೋ ಫಾರಂ ಲಿಮಿಟೆಡ್ 53
ಹರ್ಷಾ ಎಂಟರ್ ಟೈನ್ ಮೆಂಟ್ 136
ಡ್ರೀಮ್ಸ್ ಇನ್ ಫ್ರಾ 573
ಟಿಜಿಎಸ್ 260
ಗೃಹ 277
ಸೆವೆನ್ ಹಿಲ್ಸ್ 81

ಈ ಪಟ್ಟಿಯನ್ನು ಬಿಡುಗಡೆ ಮಾಡಿದ ತರುವಾಯ ಮಾತನಾಡಿದ ಅಧಿಕಾರಿಗಳು, ಇಂಥ ವಂಚನೆಗಳ ಬಗ್ಗೆ ಸಿಐಡಿಯಲ್ಲಿ 422 ಪ್ರಕರಣಗಳು ದಾಖಲಾಗಿವೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
While giving a hot information, the CID of Karnataka DGP Kishore Chandra on Saturday said that, many of the online real estate companies in Bengaluru have cheated the citizens and looted 3,273 crores.
Please Wait while comments are loading...