ಶೀಘ್ರವೇ ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ!

Posted By: Nayana
Subscribe to Oneindia Kannada

ಬೆಂಗಳೂರು, ನವೆಂಬರ್ 18 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೀದಿ ವ್ಯಾಪಾರಿಗಳಿಗೆ ನಡೆಯುತ್ತಿರುವ ದೌರ್ಜನ್ಯ ತಪ್ಪಿಸಲು ಎಂಟು ವಲಯಗಳಲ್ಲಿ ಸರ್ವೇ ನಡೆಸಿ 24,129 ಮಂದಿ ಬೀದಿ ವ್ಯಾಪಾರಿಗಳನ್ನು ಗುರುತಿಸಿದ್ದು ಶೀಘ್ರವೇ ಗುರುತಿನ ಚೀಟಿ ನೀಡಲು ಸಿದ್ಧತೆ ನಡೆಸಿದೆ.

ಬಿಬಿಎಂಪಿ ಅಧಿಕಾರಿಗಳು ಸೆಪ್ಟೆಂಬರ್ 17 ರಿಂದ ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿರುವ ವಾರ್ಡ್ ಗಳಲ್ಲಿ ಸಮೀಕ್ಷೆ ನಡೆಸಿ ವರದಿಯನ್ನು ಸಲ್ಲಿಸಿದ್ದಾರೆ. ಈ ವರದಿಯನ್ನು ಮುಂದಿಟ್ಟುಕೊಂಡು ಬೀದಿ ವ್ಯಾಪಾರಿಗಳಿಗೆ ಪಾಲಿಕೆ ಗುರುತಿನ ಚೀಟಿಯನ್ನು ನೀಡಲಾಗುತ್ತದೆ.

25k Street vendors will get ID Card soon!

ಬೀದಿ ವ್ಯಾಪಾರಿಗಳಿಗೆ ಬಿಬಿಎಂಪಿ ಅಧಿಕಾರಿಗಳು, ಪೊಲೀಸರು ಕಿರುಕುಳ ನೀಡುತ್ತಾರೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ದೀನದಯಾಳು ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯಗಳ ಅಭಿಯಾನದಡಿಯಲ್ಲಿ ಸರ್ವೇ ನಡೆಸಿದ್ದು ಒಟ್ಟು24,129 ಮಂದಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ವ್ಯಾಪಾರಿಗಳಿಗೆ ಗುರುತಿನ ಚೀಟಿಯಿಂದಾಗುವ ಉಪಯೋಗಗಳು: ಪ್ರಮುಖವಾಗಿ ಗುರುತಿನ ಚೀಟಿ ಹೊಂದಿರುವ ವ್ಯಾಪಾರಿಗಳಿಗೆ ಅಧಿಕಾರಿಗಳಿಂದ ದೌರ್ಜನ್ಯ ನಡೆಯುವುದಿಲ್ಲ. ಎಲ್ಲಿ ಬೇಕಾದರೂ ವ್ಯಾಪಾರ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಸಣ್ಣ ಸೌಲಭ್ಯಗಳು ಲಭ್ಯವಾಗಲಿದ್ದು ವ್ಯಾಪಾರಕ್ಕೆ ಅನುಕೂಲವಾಗಲಿದೆ.

ದಾಖಲಾತಿ ಪರಿಶೀಲನೆ: ಬೀದಿ ವ್ಯಾಪಾರಿಗಳ ನೋಂದಣಿಗೆ ವ್ಯಾಪಾರ ಮಾಡುವ ವ್ಯಕ್ತಿಯ ಮೂರು ಫೋಟೋ ಸೇರಿದಂತೆ ಕುಟುಂಬ ಸದಸ್ಯರ ಒಂದು ಗ್ರೂಪ್ ಫೋಟೊ, ಆಧಾರ್ ಕಾರ್ಡ್, ಪಡಿತರ ಚೀಟಿ ಅಥವಾ ವಾಹನ ಪರವಾನಗಿ ಸಮೀಕ್ಷೆ ಸಂದರ್ಭದಲ್ಲಿ ಅಧಿಕಾರಿಗಳು ಸಂಗ್ರಹಣೆ ಮಾಡಿದ್ದು, ಈ ಎಲ್ಲಾ ದಾಖಲಾತಿಗಳ ಪರಿಶೀಲನೆ ಬಳಿಕ ಅರ್ಹ ಫಲಾನುಭವಿಗಳಿಗೆ ಗುರುತಿನ ಚೀಟಿ ನೀಡಲು ಬಿಬಿಎಂಪಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಯಾರ್ಯಾರು ಬೀದಿ ವ್ಯಾಪಾರಿಗಳು : ಒಂದು ರಸ್ತೆ, ಗಲ್ಲಿ, ಪಾದಚಾರಿ ಮಾರ್ಗ, ಬೀದಿ ಬದಿ, ಸಾರ್ವಜನಿಕ ಉದ್ಯಾನ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸುತ್ತಾ ವ್ಯಾಪಾರ ಮಾಡುವವರನ್ನು ಬೀದಿ ವ್ಯಾಪಾರಿಗಳು ಎಂದು ಪರಿಗಣಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BBMP has identified nearly 25thousand street vendors in its right Zones adn decided to give Identity Cards dince they are exploited by police and officials,

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ