ಪೊಲೀಸ್ ಪೇದೆ ಮೇಲೆ ಕಾರು ಹರಿಸಿದ ಖತರ್ನಾಕ್ ಕಳ್ಳ

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್,30: ಕಳವು ಆರೋಪ ಎದುರಿಸುತ್ತಿದ್ದ ಕಳ್ಳನೊಬ್ಬ ಪೊಲೀಸ್ ಪೇದೆ ಮೇಲೆ ಕಾರು ಹತ್ತಿಸಿ ಪರಾರಿಯಾದ ಘಟನೆ ನಗರದ ಸುಬ್ರಹ್ಮಣ್ಯಪುರದ ಬಳಿ ಮಂಗಳವಾರ ತಡರಾತ್ರಿ ನಡೆದಿದೆ.

ಕಾರು ಕಳ್ಳ ಪ್ರೇಮ್ ಕುಮಾರ್ (25) ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಆರ್ ಟಿ ನಗರದ ಪೊಲೀಸ್ ಪೇದೆ ಶ್ರೀಧರ್ ಮೂರ್ತಿ ಎಂಬುವರ ಮೇಲೆ ಕಾರು ಹತ್ತಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಈ ದುಷ್ಕೃತ್ಯ ನಡೆಸಿದ್ದಾನೆ.[ರಸ್ತೆ ಅಪಘಾತದಲ್ಲಿ ಹುಬ್ಬಳ್ಳಿಯ 4 ದುರ್ಮರಣ, 6 ಮಂದಿಗೆ ಗಾಯ]

25 year old thief collision from car to police constable in Bengaluru

ಘಟನೆಯ ವಿವರ:

ಕಳವು ಆರೋಪದ ಮೇಲೆ ಪ್ರೇಮ್ ಕುಮಾರ್ ನನ್ನು ಬಂಧಿಸಲು ಆರ್ ಟಿ ನಗರದ ಪೊಲೀಸ್ ಪೇದೆ ಶ್ರೀಧರ್ ಮೂರ್ತಿ ತನ್ನ ಕೆಲವು ಸಿಬ್ಬಂದಿಯೊಂದಿಗೆ ತೆರಳಿದ್ದರು. ಆಗ ಪೊಲೀಸರಿಂದ ತಪ್ಪಿಸಿಕೊಳ್ಳಲು ವೇಗವಾಗಿ ಕಾರನ್ನು ಚಲಾಯಿಸಿದ ಕಳ್ಳ ಪ್ರೇಮ್ ಕುಮಾರ್ ಶ್ರೀಧರ್ ಮೂರ್ತಿಗೆ ಡಿಕ್ಕಿ ಹೊಡೆದಿದ್ದಾನೆ.[ಪಾನಮತ್ತ ವೈದ್ಯನ ಉಪಟಳ, ಒಂದು ಸಾವು, ನಾಲ್ವರಿಗೆ ಗಾಯ]

ಈ ಕಳ್ಳ ನಡೆಸಿದ ಅಮಾನವೀಯ ದುಷ್ಕೃತ್ಯದಿಂದ ಪೊಲೀಸ್ ಪೇದೆ ಶ್ರೀಧರ್ ಮೂರ್ತಿಗೆ ಗಂಭೀರ ಗಾಯಗಳಾಗಿದ್ದು, ಇವರನ್ನು ನಗರದ ಮತ್ತಿಕೆರೆ ಸಮೀಪದ ಎಂ. ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಯಿಂದ ಹೆದರಿದ ಪ್ರೇಮ್ ಕುಮಾರ್ ಸ್ಥಳದಲ್ಲಿಯೇ ಕಾರನ್ನು ಬಿಟ್ಟು ಪರಾರಿಯಾಗಿದ್ದು, ಪೊಲೀಸರು ಈತನ ಹುಡುಕಾಟ ಮುಂದುವರೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
25 year old thief Prem Kumar collision from car to police constable Sridar Murthy in Subramanyapura, Bengaluru. Police constabled very injured. Thief Premkumar escaped.
Please Wait while comments are loading...