ನಮ್ಮ ಮೆಟ್ರೋಗೆ ರಾಜೀನಾಮೆ ನೀಡಿದ 25 ಚಾಲಕರು

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮಾರ್ಚ್ 10 : ಹೆಚ್ಚು ಕೆಲಸ, ಸಿಕ್ಕಾಪಟ್ಟೆ ಒತ್ತಡ, ಕಡಿಮೆ ವೇತನ ಎಂಬ ಕಾರಣದಿಂದಾಗಿ ನಮ್ಮ ಮೆಟ್ರೋ ಸಿಬ್ಬಂದಿ ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಇತ್ತೀಚೆಗೆ 30 ಮಂದಿ ಮೆಟ್ರೋ ರೈಲು ಇಂಜಿನಿಯರ್‌ಗಳು ಕಂಪನಿಗೆ ಗುಡ್ ಬೈ ಹೇಳಿ ಹೊರ ನಡೆದಿದ್ದಾರೆ.

ಕಳೆದ ಎರಡು ತಿಂಗಳಲ್ಲಿ 25 ಮಂದಿ ಲೋಕೋ ಪೈಲೆಟ್‌ಗಳು ರಾಜೀನಾಮೆ ನೀಡಿದ್ದಾರೆ. ಕಡಿಮೆ ವೇತನ ಹೆಚ್ಚು ಕೆಸಲದಿಂದಲೇ ರಾಜೀನಾಮೆ ಪರ್ವ ಆರಂಭವಾಗಿದೆ. ಆದರೆ, ರಾಜೀನಾಮೆ ಪತ್ರದಲ್ಲಿ ಈ ವಿಚಾರವನ್ನು ಯಾರೊಬ್ಬರೂ ಹೇಳಿಲ್ಲ. [ನಮ್ಮ ಮೆಟ್ರೋ 2ನೇ ಹಂತಕ್ಕೆ ಭೂ ಸ್ವಾಧೀನ ಆರಂಭ]

namma metro

ಬೇರೆ ಕಡೆ ಕೆಲಸದ ಅವಕಾಶ ಸಿಕ್ಕಿರುವುದರಿಂದ ರಾಜೀನಾಮೆ ನೀಡುತ್ತಿರುವುದಾಗಿ ಅವರು ನೌಕರರು ಹೇಳಿದ್ದಾರೆ. 25 ರೈಲು ಚಾಲಕರು ರಾಜೀನಾಮೆ ಸಲ್ಲಿಸಿದ್ದರೂ ಯಾವುದೇ ರೀತಿಯಲ್ಲೂ ಮೆಟ್ರೋ ರೈಲಿನ ಸಂಚಾರಕ್ಕೆ ತೊಂದರೆಯಾಗುವುದಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. [ಮೆಟ್ರೋ ಎರಡನೇ ಹಂತಕ್ಕೆ ಒಪ್ಪಿಗೆ ಸಿಕ್ತು]

ನಮ್ಮ ಮೆಟ್ರೋ ರೈಲು ನಿಗಮದಲ್ಲಿ ಸದ್ಯ 292 ಲೋಕೋ ಪೈಲೆಟ್‌ಗಳಿದ್ದಾರೆ. ಇವರಲ್ಲಿ 51 ಮಹಿಳೆಯರಿದ್ದಾರೆ. ಇಷ್ಟು ಸಂಖ್ಯೆಯ ರೈಲು ಚಾಲಕರಿರುವ ಕಾರಣದಿಂದಾಗಿ ವಾಣಿಜ್ಯ ಸಂಚಾರ ಆರಂಭ ವಾಗಿರುವ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ತೊಂದರೆಯಾಗುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು. [ಮೆಟ್ರೋಕ್ಕೆ ಶಂಕರಣ್ಣ ಹೆಸರು: ಇದು ಓದುಗರ ತೀರ್ಮಾನ]

ಸದ್ಯ ರೈಲು ನಿರ್ವಾಹಕರಿಗೆ 14 ಸಾವಿರ ರೂ. ವೇತನ ನೀಡಲಾಗುತ್ತಿದ್ದು, ದಿನವೊಂದಕ್ಕೆ ಕನಿಷ್ಠ 400 ಕಿ.ಮೀ. ಮೆಟ್ರೋ ರೈಲು ಓಡಿಸಬೇಕಿದೆ. ಹೀಗಾಗಿ ಕೆಲಸಕ್ಕೆ ತಕ್ಕ ವೇತನ ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿ 25 ಲೋಕೋ ಪೈಲೆಟ್‌ಗಳು ರಾಜೀನಾಮೆ ನೀಡಿದ್ದಾರೆ.

ಅಂದಹಾಗೆ, ಎಂಜಿ ರಸ್ತೆ - ಬೈಯಪ್ಪನಹಳ್ಳಿ, ಸಂಪಿಗೆ ರಸ್ತೆ-ನಾಗಸಂದ್ರ ಮತ್ತು ಮಾಗಡಿ ರಸ್ತೆ-ಮೈಸೂರು ರಸ್ತೆ ಮಾರ್ಗಗಳಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರ ನಡೆಸುತ್ತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
25 train operators of Namma Metro have quit in the last 3 months. Bangalore Metro Rail Corporation (BMRCL)officials said, resignation of train operators will not impact the ongoing operations of metro rail in three reaches.
Please Wait while comments are loading...