ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ 23 ರಸ್ತೆಗಳು ಸ್ಮಾರ್ಟ್ ಆಗಲಿವೆ, ಕಾಯ್ತಾ ಇರಿ!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 25: ಬೆಂಗಳೂರಿನ 23 ಪ್ರಮುಖ ರಸ್ತೆಗಳು ಇನ್ನುಮುಂದೆ ಸ್ಮಾರ್ಟ್ ಆಗಲಿವೆ. ಬಿಬಿಎಂಪಿಯು ಸ್ಮಾರ್ಟ್ ಸಿಟಿ ಯೋಜನೆಯಡಿ ಈ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರವು ಈ ಯೋಜನೆಗೆ ತಲಾ 500 ಕೋಟಿ ರೂಗಳನ್ನು ಒದಗಿಸಲಿದೆ. ಸ್ಮಾರ್ಟ್ ಸಿಟಿ ಯೋಜನೆಗೆ 2219.32 ಕೋಟಿ ರೂ ನಿಗದಿಪಡಿಸಲಾಗಿದೆ. ಕೇಂದ್ರ ಸರಕಾರದ ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದ ಹಲವು ಪ್ರದೇಶಗಳು ಅಭಿವೃದ್ಧಿಗೊಳ್ಳುವ ಕಾಲ ಸನ್ನಿಹಿತವಾಗುತ್ತಿದೆ.

ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಗೆ ಕುಮಾರಬಾಣ ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಗೆ ಕುಮಾರಬಾಣ

ಶೀಘ್ರದಲ್ಲೇ ಹಲವು ಕಾಮಗಾರಿಗಳು ಆರಂಭವಾಗಲಿವೆ. ಬಿಬಿಎಂಪಿಯು ಯೋಜನೆ ಅನುಷ್ಠಾನದ ನೋಡಲ್‌ ಏಜೆನ್ಸಿಯಾಗಿದ್ದು, ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್‌ ಕರೆಯುತ್ತಿದೆ.ಈ ವಾರದಲ್ಲೇ ರಸ್ತೆಗಳ ಅಭಿವೃದ್ಧಿಗೆ ಟೆಂಡರ್‌ ಆಹ್ವಾನಿಸಲಿದೆ. ಈಗಾಗಲೇ ವೈಟ್ ಟಾಪಿಂಗ್ ಮೂಲಕ ಸಾಕಷ್ಟು ಕಡೆಗಳಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಬಿಎಂಟಿಸಿ ಮತ್ತು ಬಿಎಂಆರ್‌ಸಿಎಲ್ ಮೂಲಕ ಅನುದಾನ ಕ್ರೋಢೀಕರಣ

ಬಿಎಂಟಿಸಿ ಮತ್ತು ಬಿಎಂಆರ್‌ಸಿಎಲ್ ಮೂಲಕ ಅನುದಾನ ಕ್ರೋಢೀಕರಣ

ಸಾರ್ವಜನಿಕ ಖಾಸಗಿ ಸಹಭಾಗಿತ್ವ, ಬಿಬಿಎಂಪಿ, ಬಿಎಂಟಿಸಿ ಮತ್ತು ಬಿಎಂಆರ್‌ಸಿಎಲ್‌ ಮೂಲಕ ಉಳಿದ ಅನುದಾನವನ್ನು ಕ್ರೋಢೀಕರಿಸಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಇದೇ ಯೋಜನೆಯಡಿ ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ಹಲಸೂರು ಕೆರೆ, ಸ್ಯಾಂಕಿ ಕೆರೆ, ಕಬ್ಬನ್‌ಪಾರ್ಕ್‌ ಮತ್ತು ಕೆಲವೊಂದು ಕೊಳೆಗೇರಿ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

ರಸ್ತೆಗುಂಡಿಗೆ ವೈಟ್ ಟಾಪಿಂಗ್ ಪರಿಹಾರ ಎಂದ ಮೇಯರ್ ಗಂಗಾಂಬಿಕೆ ರಸ್ತೆಗುಂಡಿಗೆ ವೈಟ್ ಟಾಪಿಂಗ್ ಪರಿಹಾರ ಎಂದ ಮೇಯರ್ ಗಂಗಾಂಬಿಕೆ

ಕೇಂದ್ರ ಸರ್ಕಾರ 500 ಕೋಟಿ ಬಿಡುಗಡೆ ಮಾಡಿದೆ

ಕೇಂದ್ರ ಸರ್ಕಾರ 500 ಕೋಟಿ ಬಿಡುಗಡೆ ಮಾಡಿದೆ

ಕೇಂದ್ರ ಸರಕಾರವು ಈಗಾಗಲೇ ತನ್ನ ಪಾಲಿನ 500 ಕೋಟಿ ರೂ. ಅನುದಾನವನ್ನು ಬಿಬಿಎಂಪಿಗೆ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯು ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಸಿದ್ಧಪಡಿಸುತ್ತಿದೆ. ಈ ಪೈಕಿ 250 ಕೋಟಿ ರೂ. ವೆಚ್ಚದಲ್ಲಿ 23 ರಸ್ತೆಗಳನ್ನು ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲು ಟೆಂಡರ್‌ ಕರೆಯಲು ತೀರ್ಮಾನಿಸಿದೆ.

''ಕೇಂದ್ರ ಸರಕಾರವು ಈಗಾಗಲೇ 500 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಈ ಸಂಬಂಧ ರಚಿಸಲ್ಪಟ್ಟಿರುವ ವಿಶೇಷ ಉದ್ದೇಶಿತ ವಾಹನವು (ಎಸ್‌ಪಿವಿ) ಡಿಪಿಆರ್‌ ಸಿದ್ಧಪಡಿಸುತ್ತಿದೆ. 23 ರಸ್ತೆಗಳನ್ನು ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಈ ವಾರದಲ್ಲೇ ಟೆಂಡರ್‌ ಆಹ್ವಾನಿಸಲಾಗುತ್ತಿದೆ.ಡಿಸೆಂಬರ್‌ನಲ್ಲಿ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ.

ವೈಟ್‌ ಟಾಪಿಂಗ್‌ ಮತ್ತೆ ಶುರು: ಬಿಬಿಎಂಪಿ-ಪೊಲೀಸರ ನಡುವೆ ಸಹಮತ ವೈಟ್‌ ಟಾಪಿಂಗ್‌ ಮತ್ತೆ ಶುರು: ಬಿಬಿಎಂಪಿ-ಪೊಲೀಸರ ನಡುವೆ ಸಹಮತ

ಬೆಂಗಳೂರಿನ ಯಾವ್ಯಾವ ರಸ್ತೆ ಅಭಿವೃದ್ಧಿ

ಬೆಂಗಳೂರಿನ ಯಾವ್ಯಾವ ರಸ್ತೆ ಅಭಿವೃದ್ಧಿ

ಮೆಗ್ರಾತ್‌ ರಸ್ತೆ 1.30ಕಿ.ಮೀ ರಸ್ತೆಗೆ 13ಕೋಟಿ ರೂ ವೆಚ್ಚವಾಗುತ್ತಿದೆ, ಎಂ.ಜಿ.ರಸ್ತೆಯಿಂದ ಶಿವಾಜಿನಗರ ಬಸ್‌ ನಿಲ್ದಾಣ ಮತ್ತು ಅಲ್ಲಿಂದ ಬಾಳೇಕುಂದ್ರಿ ವೃತ್ತ 1.60 ಕಿಮೀಗೆ ಉದ್ದದ ರಸ್ತೆಗೆ 17.60 ಕೋಟಿ ರೂ ಖರ್ಚಾಗುತ್ತಿದೆ.ರಿಚ್ಮಂಡ್‌ ರಸ್ತೆಯಿಂದ ಕ್ಯಾಸಲ್‌ ಸ್ಟ್ರೀಟ್‌ 0.13ಕಿ.ಮೀಗೆ 1.30 ಕೋಟಿ ರೂ, ಕೆ.ಜಿ.ರಸ್ತೆಯಿಂದ ಮೈಸೂರು ರಸ್ತೆ 1.20ಕಿಮೀ ಗೆ 12 ಕೋಟಿ , ಕೆ.ಜಿ.ರಸ್ತೆಯಿಂದ ಅವೆನ್ಯೂ ರಸ್ತೆ ಮಾರ್ಗವಾಗಿ ಕೆ.ಆರ್‌.ಮಾರುಕಟ್ಟೆ 1.10ಕಿ.ಮೀ ಗೆ 11 ಕೋಟಿ, ಡಿಕನ್ಸನ್‌ ರಸ್ತೆಯಿಂದ ಸೇಂಟ್‌ ಜಾನ್ಸ್‌ ಚರ್ಚ್‌ ರಸ್ತೆ 1.09ಕಿ.ಮೀಗೆ 10.90 ಕೋಟಿ , ಹಲಸೂರು ರಸ್ತೆ 0.60ಕಿ.ಮೀ 6 ಕೋಟಿ,, ಹೇನ್ಸ್‌ ರಸ್ತೆಯಿಂದ ಪ್ರೋಮೊನೆಡ್‌ ರಸ್ತೆ 1.22ಕಿ.ಮೀಗೆ 12.20 ಕೋಟಿ ರೂ , ಕೆ.ಎಸ್‌.ತಿಮ್ಮಯ್ಯ ರಸ್ತೆಯಿಂದ ಲ್ಯಾಂಗ್‌ಫೋರ್ಡ್‌ ರಸ್ತೆ 0.56 ಕಿ.ಮೀಗೆ 5.60 ಕೋಟಿ ರೂ, ಬೌರಿಂಗ್‌ ಆಸ್ಪತ್ರೆ ರಸ್ತೆ 0.97ಕಿ.ಮೀ ಗೆ 9.75 ಕೋಟಿ ರೂ ವೆಚ್ಚವಾಗಲಿದೆ.

ಕಮರ್ಷಿಯಲ್ ಸ್ಟ್ರೀಟ್ ರಸ್ತೆ ಅಭಿವೃದ್ಧಿಗೆ 11 ಕೋಟಿ

ಕಮರ್ಷಿಯಲ್ ಸ್ಟ್ರೀಟ್ ರಸ್ತೆ ಅಭಿವೃದ್ಧಿಗೆ 11 ಕೋಟಿ

ಕಮರ್ಷಿಯಲ್‌ ಸ್ಟ್ರೀಟ್‌ನ ಕಾಮರಾಜ ರಸ್ತೆಯಿಂದ ಜುಮ್ಮಾ ಮಸೀದಿ ರಸ್ತೆ 1 ಕಿಮೀ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದ್ದು, 11 ಕೋಟಿ ರೂ ವೆಚ್ಚಮಾಡಲಾಗುತ್ತಿದೆ, ಇನ್ನು ಕಸ್ತೂರಬಾ ರಸ್ತೆಯ ಸಿದ್ದಲಿಂಗಯ್ಯ ವೃತ್ತದಿಂದ ಮಿನ್ಸ್‌ಸ್ಕ್ವೇರ್‌ನಲ್ಲಿ 0.8ಕಿ.ಮೀ ಉದ್ದದ ರಸ್ತೆ ನಿರ್ಮಾಣವಾಗುತ್ತಿದ್ದು, 8.80 ಕೋಟಿ ರೂ ವೆಚ್ಚವಾಗಲಿದೆ.

ಎಂಜಿ ರಸ್ತೆ ಅಭಿವೃದ್ಧಿ

ಎಂಜಿ ರಸ್ತೆ ಅಭಿವೃದ್ಧಿ

ಎಂ.ಜಿ.ರಸ್ತೆಯಿಂದ ಕಂಟೋನ್ಮೆಂಟ್‌ ರೈಲು ನಿಲ್ದಾಣ 1.85 ಕಿ.ಮೀ ಉದ್ದದ ರಸ್ತೆಗೆ 20.35 ರೂ ಖರ್ಚು ಮಾಡಲಾಗುತ್ತಿದೆ. ಕೆ.ಆರ್‌.ವೃತ್ತದಿಂದ ಬಾಳೇಕುಂದ್ರಿ ವೃತ್ತ 0.80 ಕಿ.ಮೀ ರಸ್ತೆಗೆ 8 ಕೋಟಿ ರೂ, ಚಾಲುಕ್ಯ ವೃತ್ತದಿಂದ ಕಂಟೋನ್ಮೆಂಟ್‌ 2.41 ಕಿ.ಮೀ ರಸ್ತೆಗೆ 25.91 ಕೋಟಿ ರೂ, ಕಾಮರಾಜ ರಸ್ತೆಯಿಂದ ಸೇಂಟ್‌ಜಾನ್ಸ್‌ ಚರ್ಚ್‌ ರಸ್ತೆ 1.90 ಕಿ.ಮೀ ರಸ್ತೆಗೆ 20.90 ಕೋಟಿ ರೂ ವೆಚ್ಚ ಮಾಡಲಾಗುತ್ತದೆ.

ಅಲಿ ಅಸ್ಗರ್‌ ರಸ್ತೆಯಿಂದ ಸಫೀನಾ ಪ್ಲಾಜಾ ಕಾಂಪ್ಲೆಕ್ಸ್‌ 1.65 ಕಿ.ಮೀ ಉದ್ದದ ರಸ್ತೆಗೆ 18.15 ಕೋಟಿ ರೂ, ಎಂ.ಜಿ.ರಸ್ತೆಯಿಂದ ಕಾಮರಾಜ ರಸ್ತೆ 1.22ಕಿ.ಮೀ ಉದ್ದದ ರಸ್ತೆಗೆ 13.42 ಕೋಟಿ ರೂ, ಮಿನ್ಸ್ಕ್‌ ಚೌಕದಿಂದ ಬಸವೇಶ್ವರ ವೃತ್ತ 0.92
ಕಿ.ಮೀ ರಸ್ತೆಗೆ 10.16 ಕೋಟಿ ರೂ, ರಿಚ್ಮಂಡ್‌ ರಸ್ತೆಯಿಂದ ರೆಸಿಡೆನ್ಸಿ ರಸ್ತೆ 0.33 ಕಿ.ಮೀ ಉದ್ದದ ರಸ್ತೆ 3.26 ಕೋಟಿ ರೂ, ರಿಚ್ಮಂಡ್‌ ರಸ್ತೆಯ ಕಾನ್ವೆಂಟ್‌ ರಸ್ತೆಯಿಂದ ರೆಸಿಡೆನ್ಸಿ ರಸ್ತೆ 0.43 ಕಿ.ಮೀ ರಸ್ತೆಗೆ 4.30 ಕೋಟಿ ರೂ, ಮ್ಯೂಸಿಯಂ ರಸ್ತೆಯಿಂದ ರಿಚ್ಮಂಡ್‌ ರಸ್ತೆ 0.40 ಕಿ.ಮೀ ರಸ್ತೆಗೆ 3.96 ಕೋಟಿ ರೂ ಖರ್ಚಾಗಲಿದೆ.

English summary
In the line of tender sure model another 23 major roads in Bangalore central zone will be developed under smart city project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X