ಬೆಂಗಳೂರು ಪೊಲೀಸರ ಗಸ್ತಿಗೆ ಹೈಟೆಕ್ ವಾಹನಗಳು

Posted By:
Subscribe to Oneindia Kannada

ಬೆಂಗಳೂರು, ಜುಲೈ 02 : ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿರುವ 222 ಹೈಟೆಕ್ ಹೊಯ್ಸಳ ವಾಹನಗಳು ಬೆಂಗಳೂರಿನಲ್ಲಿ ಕಾರ್ಯಾಚರಣೆ ಆರಂಭಿಸಿವೆ. 14.65 ಕೋಟಿ ವೆಚ್ಚದಲ್ಲಿ ನೂತನ ವಾಹನಗಳನ್ನು ಖರೀದಿ ಮಾಡಲಾಗಿದೆ.

ಶನಿವಾರ ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ವಾಹನಗಳ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿಸಿದರು. ಕರೆ ಮಾಡಿದ ಸ್ಥಳವನ್ನು ಪತ್ತೆಹಚ್ಚುವ ಜಿಪಿಎಸ್‌, ತುರ್ತು ಮತ್ತು ಅಪಾಯದ ಸಮಯದಲ್ಲಿ ಸಾರ್ವಜನಿಕರಿಗೆ ನೆರವಾಗುವ ಅಗತ್ಯ ವ್ಯವಸ್ಥೆಗಳನ್ನು ಈ ವಾಹನಗಳು ಹೊಂದಿವೆ. [ಬೆಂಗಳೂರು : ಹೊಯ್ಸಳ ಜೀಪಿಗೂ ಬಂತು ಸಿಸಿಟಿವಿ]

bengaluru police

'ಬೆಂಗಳೂರಿನಲ್ಲಿ ಸದ್ಯ 184 ಹೊಯ್ಸಳ ವಾಹನಗಳಿದ್ದವು. ಹೊಸ ವಾಹನಗಳು ಬಂದ ನಂತರ ಹಳೆಯ ವಾಹನಗಳನ್ನು ಆಯಾ ಠಾಣೆಯ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ' ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್‌.ಎಸ್.ಮೇಘರಿಕ್ ಹೇಳಿದ್ದಾರೆ. [ಬೆಂಗಳೂರಲ್ಲಿ 24x7 ರಕ್ಷಣೆ ಸ್ಮಾರ್ಟ್ ಸಿಟಿ ಯೋಜನೆ]

14.65 ಕೋಟಿ ವೆಚ್ಚದಲ್ಲಿ 222 ಮಾರುತಿ ಎರ್ಟಿಗಾ ಕಾರುಗಳನ್ನು ಖರೀದಿ ಮಾಡಲಾಗಿದೆ. ಇವುಗಳಲ್ಲಿ ಟ್ಯಾಬ್, ಜಿಪಿಎಸ್, ಇಂಟರ್‌ನೆಟ್ ವ್ಯವಸ್ಥೆ ಇದೆ. ಈ ಎಲ್ಲಾ ವಾಹನಗಳು ಪೊಲೀಸ್ ನಿಯಂತ್ರಣ ಕೊಠಡಿ ಸಂಪರ್ಕದಲ್ಲಿರುತ್ತವೆ.

ಪ್ರತಿಯೊಂದು ಗಸ್ತು ವಾಹನದಲ್ಲಿ ಎಎಸ್‌ಐ, ಎಚ್‌ಸಿ, ಚಾಲಕ ಹಾಗೂ ಇಬ್ಬರು ಸಹಾಯಕ ಸಿಬ್ಬಂದಿ ಇರುತ್ತಾರೆ. ಬೆಂಗಳೂರು ನಗರದ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ನಿತ್ಯ 6 ಮಾರ್ಗಗಳಲ್ಲಿ ಎರಡೆರಡು 3 ವಾಹನಗಳು ಗಸ್ತು ತಿರುಗಲಿವೆ.

-
-
-
-
-
-
-
-
-

ಕರೆ ಮಾಡಿದರೆ ಸ್ಥಳ ಪತ್ತೆ ಹಚ್ಚಲಿದೆ : ಅಪರಾಧಗಳ ಬಗ್ಗೆ ಮಾಹಿತಿ ನೀಡಲು ಜನರು ನಿಯಂತ್ರಣ ಕೊಠಡಿ 100ಕ್ಕೆ ಕರೆ ಮಾಡುತ್ತಾರೆ. ಆಗ ಜಿಪಿಎಸ್ ಮೂಲಕ ಸ್ಥಳವನ್ನು ಪತ್ತೆ ಹಚ್ಚಲಾಗುತ್ತದೆ. ಸ್ಥಳಕ್ಕೆ ತೆರಳುವ ಹೊಯ್ಸಳ ವಾಹನದ ಸಿಬ್ಬಂದಿ, ಸಾರ್ವಜನಿಕರನ್ನು ರಕ್ಷಿಸುವ ಜೊತೆಗೆ, ಗಂಭೀರ ಸ್ವರೂಪದ ಘಟನೆಗಳು ನಡೆದಿದ್ದರೆ ಅಲ್ಲಿಯ ಚಿತ್ರ ಹಾಗೂ ವಿಡಿಯೋವನ್ನು ನಿಯಂತ್ರಣ ಕೊಠಡಿಗೆ ಕಳುಹಿಸಿಕೊಡಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bengaluru police get 222 brand new Maruti Ertiga cars to patrol the streets. Chief Minister Siddaramaiah dedicate new vehicles on Saturday.
Please Wait while comments are loading...