2017 ಕರ್ನಾಟಕದ "ವನ್ಯ ವರ್ಷ", ಪಶ್ಚಿಮಘಟ್ಟ ಉಳಿಯುವುದೇ?

Posted By:
Subscribe to Oneindia Kannada

ಬೆಂಗಳೂರು, ಜನವರಿ 2: ಕರ್ನಾಟದಲ್ಲಿ ವನ್ಯ ಜೀವಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರವಾಸೋದ್ಯಮ ಇಲಾಖೆ 2017 ಅನ್ನು 'ವನ್ಯ ವರ್ಷ' ವನ್ನಾಗಿ ಆಚರಿಸಲು ಮುಂದಾಗಿದೆ.

ವನ್ಯವರ್ಷ ಅಭಿಯಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಶನಿವಾರ ಪ್ರಾರಂಭಿಸಿದರು. ಶೀಘ್ರದಲ್ಲಿಯೆ ಪಶ್ಚಿಮಘಟ್ಟದ 9 ಟ್ರಕ್ಕಿಂಗ್ ಮಾರ್ಗಗಳನ್ನು ಸೂಚಿಸಲಾಗುವುದು ಎಂದು ತಿಳಿಸಿದರು. ಈ ಮಾರ್ಗಗಳಲ್ಲಿ ಟ್ರಕ್ಕಿಂಗ್ ಪರಿಣಿತರಿಂದ ಪ್ರವಾಸದ ತರಬೇತಿ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು ಅಭಿಯಾನದ ಉದ್ದೇಶ ಎಂದು ತಿಳಿಸಿದರು.[ಶಿವಮೊಗ್ಗದಲ್ಲಿ ಪಶ್ಚಿಮ ಘಟ್ಟ ಅಭಿವೃದ್ಧಿ ಸಂಸ್ಥೆ ಸ್ಥಾಪನೆ]

2017 is K’taka’s ‘Year of the Wild’, but is opening up the Western Ghats

ಇನ್ನು ಪ್ರಿಯಾಂಕ ಖರ್ಗೆ ಮಾತನಾಡಿ, ಅಭಿಯಾನದ ಭಾಗವಾಗಿ ಟ್ರಕ್ಕಿಂಗ್ ನಲ್ಲಿ ಅನೇಕ ಚಟುವಟಿಕೆಗಳ ಪಟ್ಟಿಯನ್ನು ತಯಾರಿಸಿದ್ದು, ಮೈಸೂರಿನಲ್ಲಿ ಏರೋ ಕ್ರೀಡಾ ಉತ್ಸವ, ಉಡುಪಿ ಮತ್ತು ಮಂಗಳೂರಿನಲ್ಲಿ ಬೀಚ್ ಸರ್ಪಿಂಗ್ ಇನ್ನು ಮುಂತಾದ ಚಟುವಟಿಕೆಗಳಿವೆ ಎಂದರು.

ಆದರೆ ಈ ಆಭಿಯಾನಕ್ಕೆ ಅರಣ್ಯ ಇಲಾಖೆಯ ಸಹಮತ ವಿದ್ದಂತೆ ಕಾಣುತ್ತಿಲ್ಲ. ಪರಿಸರ ಮತ್ತು ವನ್ಯಜೀವಿ ತಜ್ಞರಿಗೆ ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶವನ್ನು ಹಾಳುಮಾಡಿಬಿಡುವರೇನೋ ಎಂಬ ಚಿಂತೆ ಪ್ರಾರಂಭವಾಗಿದೆ.

2017 is K’taka’s ‘Year of the Wild’, but is opening up the Western Ghats

ಬೆಂಗಳೂರು ಮೂಲದ ಪರಿಸರ ತಜ್ಞ ಉಲ್ಲಾಸ್ ಕಾರಂತ್ ಹೇಳುವಂತೆ ಜನರಿಗೆ ಹೊಸಸ್ಥಳಗಳನ್ನು ಪರಿಚಯಿಸುವ ಸರ್ಕಾರ ಪರಿಸರದ ಸುರಕ್ಷತೆಯ ಕಡೆ ಗಮನ ಹರಿಸಬೇಕು. ಆದರೆ ಅದು ಆಗುತ್ತಿಲ್ಲ ಹೀಗಾಗಿ ಪರಿಸರ ಹಾನಿಯುತ್ತದೆ. ಒಂದು ಬಾರಿ ಹೊಸ ವನ್ಯ ಪ್ರದೇಶದಲ್ಲಿ ಪ್ರವಾಸೋದ್ಯಮ ಪ್ರಾರಂಭವಾದರೆ ದೀರ್ಘಾವಧಿಯಲ್ಲಿ ಆ ಸ್ಥಳದ ಮೇಲೆ ಮಾನವನ ದಾಳಿಯಾಗಿ ಪರಿಸರ ನಾಶವಾಗುತ್ತದೆ. ಪಶ್ಚಿಮ ಘಟ್ಟ ನಮಗುಳಿದಿರುವ ಸಂರಕ್ಷಿತ ಅಭಯಾರಣ್ಯ ಅದನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ ಎನ್ನುತ್ತಾರೆ.

ಆದರೆ ಪ್ರವಾಸಿಗರು ತಾವು ಪ್ರವಾಸ ಮಾಡುವ ಸ್ಥಳಗಳಿಗೆ ಮತ್ತು ಆಗುವ ನಾಶಕ್ಕೆ ಹಣವನ್ನು ಪಾವತಿಸುತ್ತವೆ. ಹೀಗಾಗಿ ಹೊಸ ಅರಣ್ಯ ಪ್ರದೇಶಗಳನ್ನು ಪರಿಚಯಿಸುವುದು ಒಳಿತು. ಬಂಡೀಪುರ ಸೇರಿದಂತೆ ಇನ್ನಿತರ ಹಳೇ ಪ್ರವಾಸಿತಾಣಗಳ ಪ್ರವೇಶ ಶುಲ್ಕವನ್ನು ಕಡಿತಗೊಳಿಸಿದರೆ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ಒಳಿತು ಎನ್ನುತ್ತಾರೆ.

2017 is K’taka’s ‘Year of the Wild’, but is opening up the Western Ghats

ಇಷ್ಟೆಲ್ಲಾ ಇದ್ದರು ಪ್ರವಾಸೋದ್ಯಮ ಸಚಿವ ಖರ್ಗೆ ಸೂಕ್ಷ್ಮ ಅರಣ್ಯಪ್ರದೇಶದಲ್ಲಿ 9 ಟ್ರಕ್ಕಿಂಗ್ ಮಾರ್ಗವನ್ನು ಗುರುತಿಸಲು ಮುಂದಾಗಿದ್ದಾರೆ. ಈಗಾಗಲೇ ನಂದಿ ಬೆಟ್ಟ, ಶಂಕರಗಿರಿ ಇತ್ಯಾದಿ ನಗರ ಸಮೀಪದ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಮುಂದುವರೆದಿದೆ ಜೊತೆ ಸೂಕ್ಷ್ಮ ಪ್ರದೇಶವನ್ನು ಸೇರಿಸಿ ವನ್ಯ ವರ್ಷದ್ಲಲಿ ಪರಿಸರ ಸಂರಕ್ಷಣೆಯ ಉದ್ದೇಶ ಹೊಂದಲಾಗಿದೆ ಎಂದು ಹೇಳುತ್ತಿದ್ದಾರೆ.

ಆದರೆ ಸಂರಕ್ಷಣೆಯ ಉದ್ದೇಶದಿಂದ ಟ್ರಕ್ಕಿಂಗ್ ಮಾರ್ಗಗಳನ್ನು ಸೂಚಿಸುವುದು ಸ್ವತಃ ದೋಷಪೂರಿತವಾದ ನಡೆ ಎಂದು ಉಲ್ಲಾಸ ಕಾರಂತರು ಹೇಳುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Saturday saw the Karnataka State Tourism Department declaring the year 2017 as the “Year of the Wild”, in a bid to promote wildlife tourism in the state. In the campaign launched by Karnataka Chief Minister Siddaramaiah and Tourism Minister Priyank Kharge, it was announced that nine eco-trekking routes in the Western Ghats will soon be opened up for tourists and nature enthusiasts.
Please Wait while comments are loading...