ಜ.16ರಿಂದ ಲಾಲ್ ಬಾಗ್‌ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ

Posted By:
Subscribe to Oneindia Kannada

ಬೆಂಗಳೂರು, ಜನವರಿ 14 : ಸಸ್ಯಕಾಶಿ ಲಾಲ್ ಬಾಗ್ 2016ನೇ ಸಾಲಿನ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧವಾಗುತ್ತಿದೆ. ಜನವರಿ 16ರಿಂದ 26ರ ತನಕ ಫಲಪುಷ್ಪ ಪ್ರದರ್ಶನ ನಡೆಯಲಿದೆ. 1.2 ಕೋಟಿ ವೆಚ್ಚದಲ್ಲಿ ಈ ಬಾರಿ ಪ್ರದರ್ಶನ ಆಯೋಜಿಸಲಾಗಿದೆ.

ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ತೋಟಗಾರಿಕಾ ಇಲಾಖೆ ನಿರ್ದೇಶಕ ಎಸ್.ಬಿ.ಬೊಮ್ಮನಹಳ್ಳಿ ಅವರು ಫಲಪುಷ್ಪ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖೆಗೆ ಕೊಡುಗೆ ನೀಡಿದ ಜಿ.ಎಚ್.ಕಂಬಿಗಲ್ ಅವರಿಗೆ ಫಲಪುಷ್ಪ ಪ್ರದರ್ಶನವನ್ನು ಅರ್ಪಣೆ ಮಾಡಲಾಗುತ್ತದೆ ಎಂದು ಹೇಳಿದರು. [2015 ಫಲಪುಷ್ಪ ಪ್ರದರ್ಶನದ ಚಿತ್ರಗಳು]

lal bagh

ವಿವಿಧ ಹೂಗಳಿಂದ ಜಿ.ಎಚ್.ಕಂಬಿಗಲ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ದೇಶ ಮತ್ತು ವಿದೇಶಗಳ 40 ರಿಂದ 50 ಜಾತಿಯ ಹೂಗಳನ್ನು ಪ್ರದರ್ಶನಕ್ಕಾಗಿ ತರಿಸಲಾಗಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ 4 ರಿಂದ 5 ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆ ಇದೆ ಎಂದರು.

ಶುಲ್ಕ ಏರಿಕೆ : ಫಲಪುಷ್ಪ ಪ್ರದರ್ಶನದ ಶುಲ್ಕವನ್ನು ಈ ಬಾರಿ ಏರಿಕೆ ಮಾಡಲಾಗಿದೆ. ಸಾಮಾನ್ಯ ದಿನಗಳಲ್ಲಿ 40 ಮತ್ತು ರಜಾ ದಿನಗಳಲ್ಲಿ 50 ರೂ. ಶುಲ್ಕವಿತ್ತು. ಈ ಬಾರಿ ಸಾಮಾನ್ಯ ದಿನಗಳಲ್ಲಿ 50 ಮತ್ತು ರಜಾ ದಿನಗಳಲ್ಲಿ 60 ರೂ. ಶುಲ್ಕ ಪಾವತಿ ಮಾಡಿ ಫಲಪುಷ್ಪ ಪ್ರದರ್ಶನಕ್ಕೆ ಬರಬೇಕಾಗಿದೆ.

ಹೆಬ್ಬಾಳ ಉಪ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಬಾರಿ ತೋಟಗಾರಿಕಾ ಸಚಿವರು ಫಲಪುಷ್ಪ ಪ್ರದರ್ಶನವನ್ನು ಉದ್ಘಾಟನೆ ಮಾಡುತ್ತಿಲ್ಲ. ಕೆಲವು ತಿಂಗಳ ಹಿಂದೆ ಜೇನು ಹುಳಗಳ ದಾಳಿಯಿಂದ ಬಾಲಕಿಯೊಬ್ಬಳು ಮೃತಪಟ್ಟ ಹಿನ್ನೆಲೆಯಲ್ಲಿ, ಜೇನು ಹುಳಗಳ ಉಪಟಳ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಸ್.ಬಿ.ಬೊಮ್ಮನಹಳ್ಳಿ ಅವರು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The annual Republic Day flower show in Lalbagh Bengaluru will open to the public on January 17 and will go on till January 26, 2016. Flower show will organized by the department of horticulture and Mysore horticultural society.
Please Wait while comments are loading...