ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

200 ದಿನದಿಂದ ನಾಪತ್ತೆ: ಟಿಕ್ಕಿ ಅಜಿತಾಬ್‌ ಪತ್ತೆಗೆ ಪೋಷಕರ ಅಳಲು

By Nayana
|
Google Oneindia Kannada News

ಬೆಂಗಳೂರು, ಜು.9: ಬೆಂಗಳೂರಿನ ಟೆಕ್ಕಿಯೊಬ್ಬರು ನಾಪತ್ತೆಯಾಗಿ 200 ದಿನಗಳು ಕಳೆದಿವೆ ಈ ಪ್ರಕರಣವನ್ನು ಕೂಡಲೇ ಸಿಬಿಐಗೆ ಒಪ್ಪಿಸಬೇಕು ಎಂದು ಅಜಿತಾಬ್‌ ಪೋಷಕರು ಒತ್ತಾಯಿಸಿದ್ದಾರೆ.

ಭಾನುವಾರ ಟೌನ್‌ಹಾಲ್‌ ಎದುರು ನೂರಾರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ಅಜಿತಾಬ್ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿ ಅಜಿತಾಬ್‌ ನಾಪತ್ತೆ ಪ್ರಕರಣವನ್ನು ಪೊಲೀಸ್‌ ಇಲಾಖೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಹೀಗಾಗಿ ಗಂಭೀರ ಪ್ರಕರಣವೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಸಾಲದ ಸುಳಿಯಲ್ಲಿ ಸಿಲುಕಿದ್ದ ಟೆಕ್ಕಿ 8 ತಿಂಗಳ ನಂತರ ಪತ್ತೆ ಸಾಲದ ಸುಳಿಯಲ್ಲಿ ಸಿಲುಕಿದ್ದ ಟೆಕ್ಕಿ 8 ತಿಂಗಳ ನಂತರ ಪತ್ತೆ

ಈ ಕುರಿತು ಅಜಿತಾಬ್‌ ಸಹೋದರ ಪ್ರಗ್ಯಾ ಮಾತನಾಡಿ, ವೈಟ್‌ಫೀಲ್ಡ್‌ನಲ್ಲಿ ವಾಸಿಸುತ್ತಿದ್ದ ಅಜಿತಾಬ್‌ 2017ರ ಡಿ.18ರಂದು ಮನೆಯಿಂದ ಒಎಲ್‌ಎಕ್ಸ್‌ನಲ್ಲಿ ಕಾರು ಮಾರಾಟ ಮಾಡಲು ಹೋದ ಬಳಿಕ ವಾಪಸ್‌ ಆಗಿಲ್ಲ. ಈ ಸಂಬಂಧ ವೈಟ್‌ಫೀಲ್ಡ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ 6 ತಿಂಗಳಾದರೂ ಕಾಣೆಯಾದವನನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

200 days since Bluru techie disappeared: Family urges police to find Ajitabh

ಈ ಪ್ರಕರಣ ಸಂಬಂಧ ಸಿಐಡಿ ತನಿಖೆ ಕೈಗೊಂಡಿದ್ದರೂ, ಯಾವುದೇ ರೀತಿಯ ಮಾಹಿತಿ ದೊರೆತಿಲ್ಲ, ಸಾಮಾನ್ಯ ಪ್ರಕರಣದಲ್ಲಿ ತನಿಖೆ ನಡೆಸುವಂತೆ ನಡೆಸಲಾಗುತ್ತಿದೆ ಎಂದ ಅವರು ಒಎಲ್‌ಎಕ್ಸ್‌ನಲ್ಲಿ ಗ್ರಾಹಕರ ಜೊತೆ ಅಜಿತಾಬ್‌ ಮಾತನಾಡಿದ ಸಂಭಾಷಣೆ, ಮೊಬೈಲ್‌ ದೂರವಾಣಿ ಕರೆಗಳನ್ನು ಹಾಗೂ ಅದರ ವಿವರಗಳನ್ನು ಗೂಗಲ್‌ಗೆ ಸಂಬಂಧಿಸಿದ ವಿವರಗಳನ್ನು ಪಡೆಯುವಲ್ಲಿ ವಿಳಪವಾಗಿದ್ದು, ಸಿಐಡಿ ತನಿಖೆ ನಡೆಸುತ್ತಿಲ್ಲ ಹೀಗಾಗಿ ಸಿಬಿಐಗೆ ವಹಿಸಬೇಕು ಎಂದು ಮನವಿ ಮಾಡಿದರು.

ಜು.9ರಂದು ಸಿಎಂ-ಡಿಸಿಎಂಗೆ ಮನವಿ ಮಾಡಲಾಗುತ್ತದೆ, ಸಿಬಿಐ ತನಿಖೆ ವಹಿಸಲು ಒತ್ತಾಯಿಸಲಾಗುವುದು ಎಂದು ಪ್ರಗ್ಯಾ ಸಿನ್ಹ ತಿಳಿಸಿದ್ದಾರೆ.

English summary
It has been 200 days since Kumar Ajitabh, a Bengaluru-based techie went missing after he went to meet a person in connection with selling his car, which he had advertised on an online portal. Ajitabh disappeared on December 18, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X