ಕೇಬಲ್ ವೈರ್ ಕದ್ದ ಗುಮಾನಿ, ವಿದ್ಯುತ್ ಶಾಕ್ ನೀಡಿ ಯುವಕನ ಕೊಲೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 22: ಇಲ್ಲಿನ ಕುಂದನಹಳ್ಳಿಯಲ್ಲಿ ಇಪ್ಪತ್ತು ವರ್ಷದ ಯುವಕನಿಗೆ ವಿದ್ಯುತ್ ಶಾಕ್ ಕೊಟ್ಟು ಕೊಲೆ ಮಾಡಿದ ಘಟನೆ ನಡೆದಿದೆ. ಈ ಘಟನೆಗೆ ಇರುವ ಕಾರಣ ಹುಬ್ಬೇರುವಂತೆ ಮಾಡುತ್ತದೆ. ಕೇಬಲ್ ವೈರ್ ಕದ್ದಿದ್ದಾರೆ ಎಂದು ಆರೋಪ ಮಾಡಿ, ಮೂವರು ಯುವಕರನ್ನು ಚೆನ್ನಾಗಿ ಬಡಿದಿದ್ದಾರೆ.

ಅಕ್ರಮ ಸಂಬಂಧದ ಶಂಕೆ, ಪತ್ನಿಯನ್ನು ಕತ್ತಿಯಿಂದ ಕಡಿದು ಕೊಂದ ಪತಿ

ಆ ಪೈಕಿ ಒಬ್ಬನಿಗೆ ವಿದ್ಯುತ್ ಶಾಕ್ ಕೊಟ್ಟು ಕೊಲೆ ಮಾಡಲಾಗಿದೆ. ಪಶ್ಚಿಮ ಬಂಗಾಲದ ಬಷೀರ್ ಹತ್ಯೆಯಾದ ಯುವಕ. ಅಂದಹಾಗೆ ಬಷೀರ್ ವರ್ಷದ ಹಿಂದಷ್ಟೇ ಮದುವೆಯಾಗಿದ್ದ. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ. ಬಸುರೆಡ್ಡಿ ಎಂಬುವರ ಜಮೀನಿನಲ್ಲಿ ಗುಡಿಸಲು ಕಟ್ಟಿಕೊಂಡು ಈ ಮೂವರು ಇದ್ದರು.

20 year old youth murdered in Bengaluru by electric shock

ಮೂರು ದಿನದ ಹಿಂದೆ ಜಮೀನಿನಲ್ಲಿ ಕೇಬಲ್ ವೈರ್ ಕಳ್ಳತನವಾಗಿತ್ತು. ಈ ಮೂವರೇ ಕಳವು ಮಾಡಿರಬೇಕು ಎಂದು ಅನುಮಾನ ಪಟ್ಟು, ಕಟ್ಟಿಹಾಕಿ ಹೊಡೆದಿದ್ದಾರೆ. ಬಷೀರ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಹಫೀಸ್ ಉಲ್ಲಾ, ಅಜ್ಮೈಲ್ ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಲ್ವರು ಸೇರಿ ಈ ಕೃತ್ಯ ಎಸಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Basheer -20 year old youth murdered by four people, suspecting cable wire theft in Bengaluru Kundanahalli. Three youths assaulted, Basheer was one of them. He died on the spot. Other two admitted in hospital.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ