ಬೆಂಗಳೂರಲ್ಲಿ ಮಹಿಳಾ ಕಾರು ಚಾಲಕಿಯರಿಗೆ ಪಾರ್ಕಿಂಗ್ ಮೀಸಲಾತಿ

Posted By: Gururaj
Subscribe to Oneindia Kannada
   ಬೆಂಗಳೂರು : ಬ್ರಿಗೇಡ್ ರಸ್ತೆಯಲ್ಲಿ ಜಾರಿಗೆ ಬಂತು ಲೇಡಿ ಡ್ರೈವರ್ ಸೌಲಭ್ಯ | Oneindia Kannada

   ಬೆಂಗಳೂರು, ಅಕ್ಟೋಬರ್ 30 : ಬೆಂಗಳೂರಿನ ಬ್ರಿಗೇಡ್ ರಸ್ತೆಯ ವಾಹನ ನಿಲುಗಡೆ ಸ್ಥಳದಲ್ಲಿ ಮಹಿಳೆಯರ ಕಾರುಗಳಿಗೆ ಶೇ 20ರಷ್ಟು ಮೀಸಲು ಸಿಗಲಿದೆ. ಈ ವ್ಯವಸ್ಥೆಗೆ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಭಾನುವಾರ ಚಾಲನೆ ನೀಡಿದ್ದಾರೆ.

   ಮಹಿಳೆಯರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಇರುವ ಸ್ಥಳಗಳಲ್ಲಿ ಶೇ 20ರಷ್ಟು ಮೀಸಲು ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದರಿಂದಾಗಿ ಪಾರ್ಕಿಂಗ್‌ಗಾಗಿ ಕಿ.ಮೀ.ಗಟ್ಟಲೆ ನಡೆಯುವುದು ತಪ್ಪಲಿದೆ. ಬಿಬಿಎಂಪಿಯ ನೂತನ ಯೋಜನೆ ಇದಾಗಿದೆ.

   ಓಕಳಿಪುರಂ ಸಿಗ್ನಲ್‌ ಫ್ರೀ ಕಾರಿಡಾರ್‌ ಮುಗಿಸಲು ಗಡುವು ನೀಡಿದ ಮೇಯರ್

   ಈ ವ್ಯವಸ್ಥೆಗೆ ಮೇಯರ್ ಸಂಪತ್ ರಾಜ್ ಮತ್ತು ಶಾಂತಿನಗರ ಶಾಸಕ ಹ್ಯಾರೀಸ್ ಭಾನುವಾರ ಚಾಲನೆ ನೀಡಿದ್ದಾರೆ. ಮಹಿಳೆಯರು ಡ್ರೈವಿಂಗ್ ಮಾಡಿಕೊಂಡು ಬಂದ ಕಾರುಗಳಿಗೆ ಮಾತ್ರ ನಿಲುಗಡೆಯಲ್ಲಿ ಮೀಸಲಾತಿ ಸಿಗಲಿದೆ. ಗರಿಷ್ಠ 2 ಗಂಟೆಗಳ ಕಾಲ ವಾಹನ ನಿಲುಗಡೆ ಮಾಡಲು ಅವಕಾಶ ನೀಡಲಾಗಿದೆ.

   ಚರ್ಚ್ ಸ್ಟ್ರೀಟ್ ರಸ್ತೆಯ ಅಂದ ಹೆಚ್ಚಿಸಲಿವೆ ಗ್ರಾನೈಟ್!

   ಬಿಬಿಎಂಪಿ ಮುಂದಿನ ದಿನಗಳಲ್ಲಿ ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಇರುವ ರಸ್ತೆಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಿದೆ. 'ಹಂತ-ಹಂತವಾಗಿ ಎಲ್ಲಾ ರಸ್ತೆಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತದೆ' ಎಂದು ಮೇಯರ್ ಹೇಳಿದ್ದಾರೆ.

   ಹೇಗಿದೆ ವ್ಯವಸ್ಥೆ?

   ಹೇಗಿದೆ ವ್ಯವಸ್ಥೆ?

   ಮಹಿಳೆಯರು ಡ್ರೈವಿಂಗ್ ಮಾಡಿಕೊಂಡು ಬಂದರೆ ಮಾತ್ರ ಈ ವ್ಯವಸ್ಥೆಯನ್ನು ಪಡೆಯಬಹುದಾಗಿದೆ. ನಿಗದಿ ಪಡಿಸಿದ ಜಾಗದಲ್ಲಿ ಪಾರ್ಕಿಂಗ್ ಮಾಡಿದ ಬಳಿಕ ಟಿಕೆಟ್ ಕೇಳಿ ಪಡೆಯಬೇಕು. ಅವರಿಗೆ 'ಲೇಡಿ ಡ್ರೈವರ್' ಎಂಬ ಪಿಂಕ್ ಬಣ್ಣದ ಕಾರ್ಡ್ ನೀಡಲಾಗುತ್ತದೆ. ಅದನ್ನು ಕಾರುಗಳಲ್ಲಿ ಪ್ರದರ್ಶಿಸಬೇಕು.

   ಬ್ರಿಗೇಡ್ ರಸ್ತೆಯಲ್ಲಿ ಪ್ರಾಯೋಗಿಕ ಜಾರಿ

   ಬ್ರಿಗೇಡ್ ರಸ್ತೆಯಲ್ಲಿ ಪ್ರಾಯೋಗಿಕ ಜಾರಿ

   ಪೇ ಅಂಡ್ ಪಾರ್ಕ್ ವ್ಯವಸ್ಥೆ ಜಾರಿಯಲ್ಲಿರುವ ರಸ್ತೆಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. ಕಾರನ್ನು 2 ಗಂಟೆಗಳ ಕಾಲ ನಿಲುಗಡೆ ಮಾಡಬಹುದಾಗಿದೆ. ಇದಕ್ಕಾಗಿ 10 ರೂ. ಶುಲ್ಕ ಪಾವತಿ ಮಾಡಬೇಕು.

   ಜಾಗವೇ ಸಿಗುತ್ತಿರಲಿಲ್ಲ

   ಜಾಗವೇ ಸಿಗುತ್ತಿರಲಿಲ್ಲ

   ಈ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಮೇಯರ್ ಸಂಪತ್ ರಾಜ್, ‘ಮಹಿಳೆಯರು ಎಲ್ಲೆಂದರಲ್ಲಿ ಕಾರುಗಳನ್ನು ಪಾರ್ಕ್ ಮಾಡಬೇಕಿತ್ತು. ಕಾರನ್ನು ದೂರದಲ್ಲಿ ನಿಲ್ಲಿಸಿ ಕಿ.ಮೀ.ಗಟ್ಟಲೇ ನಡೆದುಕೊಂಡು ಬರಬೇಕಿತ್ತು. ಅವರ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದೆ' ಎಂದು ಹೇಳಿದರು.

   ಎಲ್ಲಾ ರಸ್ತೆಗಳಿಗೆ ವಿಸ್ತರಣೆ ಮಾಡಿ

   ಎಲ್ಲಾ ರಸ್ತೆಗಳಿಗೆ ವಿಸ್ತರಣೆ ಮಾಡಿ

   ‘ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಈ ವ್ಯವಸ್ಥೆ ಉತ್ತಮವಾಗಿದೆ. ನಗರದ ಎಲ್ಲಾ ರಸ್ತೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಬೇಕು' ಎಂದು ಶಾಸಕ ಹ್ಯಾರೀಸ್ ಒತ್ತಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಬಿಬಿಎಂಪಿ ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್ ಮುಂತಾದ ರಸ್ತೆಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಿದೆ.

   ಎಷ್ಟು ಕಾರುಗಳು ನಿಲ್ಲುತ್ತವೆ

   ಎಷ್ಟು ಕಾರುಗಳು ನಿಲ್ಲುತ್ತವೆ

   ಬ್ರಿಗೇಡ್ ರಸ್ತೆಯಲ್ಲಿ ಪ್ರತಿದಿನ 1,432 ಕಾರುಗಳನ್ನು ನಿಲುಗಡೆ ಮಾಡಲಾಗುತ್ತದೆ ಎನ್ನುತ್ತದೆ ಅಂಕಿ-ಅಂಶ. ಮಹಿಳೆಯರಿಗೆ ಮೀಸಲಿಟ್ಟ ಜಾಗದಲ್ಲಿ 10 ಕಾರುಗಳನ್ನು ನಿಲ್ಲಿಸಬಹುದಾಗಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Brigade Road is the first street in the Bengaluru city where women can get 20 reservation for car parking. The facility will be launched in Church street shortly.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ