ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಆಟೋಗಳು ನಗರದಿಂದ ಹೊರಗೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 19 : ನಗರದಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವ 2 ಸ್ಟ್ರೋಕ್ ಆಟೊಗಳನ್ನು ಗುಜರಿಗೆ ಹಾಕಲು ತೀರ್ಮಾನಿಸಿದ್ದ ಸಾರಿಗೆ ಇಲಾಖೆಯು ಅದರ ಬದಲಾಗಿ ಅಂತಹ ಆಟೋಗಳನ್ನು ಹೊರ ಜಿಲ್ಲೆಗಳ ತಾಲೂಕು ಕೇಂದ್ರಗಳಿಗೆ ರವಾನಿಸುವ ಕುರಿತು ಆಲೋಚಿಸಿದೆ.

ಕನ್ನಡನಾಡಿನ ಹಳೇ ಆಟೋರಿಕ್ಷಾಗಳನ್ನು ಗುಜರಿ ಮಾಡಲು ಸರಕಾರದ ಚಿಂತನೆ! ಕನ್ನಡನಾಡಿನ ಹಳೇ ಆಟೋರಿಕ್ಷಾಗಳನ್ನು ಗುಜರಿ ಮಾಡಲು ಸರಕಾರದ ಚಿಂತನೆ!

2018ರ ಏಪ್ರಿಲ್ 1 ರಿಂದ ನಗರದಲ್ಲಿ 2 ಸ್ಟ್ರೋಕ್ ಆಟೋಗಳ ಸಂಚಾರ ನಿಷೇಧವಾಗಲಿದೆ ಎಂದು ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಈ ನಿಯಮವನ್ನು ಜಾರಿಗೆ ತರುವ ಸಂಬಂಧ ಸಾರಿಗೆ ಇಲಾಖೆಯ ಅಧಿಕಾರಿಗಳು ಗುಜರಿ ನೀತಿ ಸಿದ್ಧಪಡಿಸಿದ್ದಾರೆ. ಅದಕ್ಕೆ ಆಟೊ ಮಾಲೀಕರು ಹಾಗೂ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನೀತಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲು ಅಧಿಕರಿಗಳು ತೀರ್ಮಾನಿಸಿದ್ದಾರೆ.

2 stroke autos will dump to districts

ಗುಜರಿ ಘಟಕ ಸ್ಥಾಪನೆ ಅನುಮಾನ: 2 ಸ್ಟ್ರೋಕ್ ಆಟೋಗಳನ್ನು ಗುಜರಿಗೆ ಹಾಕುವ ಸಂಬಂಧ ಘಟಕ ತೆರೆಯುವ ಬಗ್ಗೆ ಚಚಿಘಸಿದ್ದರು. ಅದಕ್ಕಾಗಿ ಪ್ರಸ್ತಾವನೆ ಸಲ್ಲಿಸುವಂತೆಯೂ ಪ್ರತಿನಿಧಿಗಳಿಗೆ ತಿಳಿಸಿದ್ದರು. ಈಗ ಗುಜರಿ ಪ್ರಸ್ತಾಪವನ್ನೇ ಕೈಬಿಡುವ ಲಕ್ಷಣ ಕಾಣುತ್ತಿದೆ. ಈ ಸಂಬಂಧ ಆಟೊ ತಯಾರಿಕ ಕಂಪನಿಗಳ ಪ್ರತಿನಿಧಿಗಳ ಜತೆಗೆ ಸಾರಿಗೆ ಅಧಿಕಾರಿಗಳು ಸಭೆ ನಡೆಸಿದ್ದರು.ತಾಲ್ಲೂಕು ಕೇಂದ್ರಗಳಿಗೆ ಆಟೊ ರವಾನಿಸಲು ಅನುಮತಿ ನೀಡಿದರೆ, ಅಂಥ ಆಟೊವನ್ನು ನಗರದಲ್ಲೇ ಓಡಿಸುವವರು ಹೆಚ್ಚಿದ್ದಾರೆ. ಆಟೊ ಚಾಲಕರು ಹಾಗೂ ಮಾಲೀಕರು ಪ್ರಾಮಾಣಿಕತೆಯಿಂದ 2 ಸ್ಟ್ರೋಕ್ ಆಟೊಗಳನ್ನು ನಗರದಿಂದ ಹೊರಗೆ ಕಳುಹಿಸುವುದಾದರೆ, ಈ ನಿಯಮ ಜಾರಿ ಬಗ್ಗೆ ಆಸಕ್ತಿ ತೋರಿಸಬಹುದು ಎಂದು ಎಚ್.ಎಂ. ರೇವಣ್ಣ ಹೇಳಿದ್ದಾರೆ.

ನಿರುದ್ಯೋಗಳಾಗಲಿರುವ ಚಾಲಕರು: ಈಗಿರುವ ಆಟೋಗಳನ್ನು ಗುಜರಿಗೆ ಹಾಕಿ, ಹೊಸ ಆಟೋ ಖರೀದಿಡುವ ಶಕ್ತಿ ಚಾಲಕರಿಗಿಲ್ಲ, ಸರ್ಕಾರ ನೀಡುವ ಸಹಾಯ ಧನದಲ್ಲಿ ಆಟೋ ಖರೀದಿಸಲು ಸಾದ್ಯವಿಲ್ಲ. ಯಾವ ಬ್ಯಾಂಕ್ ಸಹ ಆರ್ಥಿಕ ಸಹಾಯ ಮಾಡಲು ಸಾದ್ಯವಿಲ್ಲ ಎಂದು ಆಟೋ ಚಾಲಕರು ತಿಳಿಸಿದ್ದಾರೆ.

ಒಂದು ಆಟೋದ ಬೆಲೆ 1.20 ಲಕ್ಷ ಕಳೆ ವರ್ಷವಿತ್ತು. ಈ ವರ್ಷದಲ್ಲಿ 1.50 ಲಕ್ಷವಾಗಿದೆ. ಹೀಗಾಗಿ ನಿಷೇಧ ನಿಯಮ ಜಾರಿಗೆ ಬಂದರೆ ಹಲವು ಚಾಲಕರು ನಿರುದ್ಯೋಗಳಾಗಲಿದ್ದಾರೆ. ಹಾಗಾಗಿ ಆಟೋ ಚಾಲಕರು ಅಧಿಕಾರಿಗೆ ಮನಿ ಸಲ್ಲಿಸಿದ್ದಾರೆ.

English summary
Transport department thinking to dump the 2 stroke auto rickshaws to other districts from Bengalru rather scrap the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X