ಮಾದಕ ದ್ರವ್ಯ ಮಾರುತ್ತಿದ್ದ ನೈಜಿರಿಯಾ ಪ್ರಜೆಗಳ ಬಂಧನ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 30 : ಮಾದಕ ದ್ರವ್ಯ ಜಾಲದ ಬೆನ್ನು ಬಿದ್ದಿರುವ ಬೆಂಗಳೂರು ಪೊಲೀಸರು ಮಾದಕ ದ್ರವ್ಯ ಮಾರಾಟಗಾರರ ಜನ್ಮ ಜಾಲಾಡುತ್ತಿದ್ದಾರೆ. ಮಾದಕ ದ್ರವ್ಯ ಜಾಲ ತಡೆಗೆಂದು ವಿಶೇಷ ಘಟಕ ತೆರೆದಿರುವ ಬೆಂಗಳೂರು ಪೊಲೀಸರು ನಗರದ ಹಲವೆಡೆ ಎಡಬಿಡದೆ ದಾಳಿಗಳನ್ನು ನಡೆಸುತ್ತಿದ್ದಾರೆ.

ಇದೀಗ ಕೋರಮಂಗಲ ಮತ್ತು ಸುತ್ತಮುತ್ತಲಿನ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಇಬ್ಬರನ್ನು ಬೆಂಗಳೂರು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

2 Nigerians arrested for drug peddling in Koramangal

ನೈಜಿರಿಯಾದ ಒಕೊಂಕೋ ಬಸಿಲ್ ನೊಬೆಸಿ, ಅಬ್ಬಾಸ್ ಮುಸ್ತಾನ್ ಬಂಧಿತ ಆರೋಪಿಗಳು, ಬಂಧಿತರಿಂದ 4 ಕೆಜಿ ಗಾಂಜಾ, 120 ಗ್ರಾಂ ಚರಸ್, 5 ಗ್ರಾಂ ಕೊಕೇನ್ ವಶ ಪಡಿಸಿಕೊಳ್ಳಲಾಗಿದೆ.

ಹೊರ ರಾಜ್ಯ ಮತ್ತು ದೇಶಗಳ ಮೂಲಕ ಕಳ್ಳದಾರಿಯಲ್ಲಿ ಮಾದಕ ದ್ರವ್ಯವನ್ನು ತರಿಸುತ್ತಿದ್ದ ಇವರು ನಗರದ ಸಾಪ್ಟ್ ವೇರ್ ಎಂಜಿನಿಯರ್‌ಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಮಾರುತ್ತಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru's Koramangala police arrested 2 Nigerians for drug peddling in koramangala area. arrested nigerians selling drugs to college students and software techies.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ