ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದ 19 ರೈಲು ನಿಲ್ದಾಣಗಳಲ್ಲಿ ಕನ್ನಡ ಡಿಂಡಿಮ

By Vanitha
|
Google Oneindia Kannada News

ಬೆಂಗಳೂರು, ಜುಲೈ. 09 :ಇಂಗ್ಲಿಷ್ ಬಳಕೆ ಮಾಡಿ ರಾಜ್ಯದ ನಗರಗಳ ಹೆಸರನ್ನು ಅರ್ಧ ನುಂಗುತ್ತಿದ್ದವರು ಇನ್ನು ಮುಂದೆ ಸರಿಯಾಗಿ ಉಚ್ಚಾರಣೆ ಮಾಡಬೇಕು, ಇದು ರೈಲ್ವೆ ನಿಲ್ದಾಣಗಳಿಗೂ ಅನ್ವಯಿಸುತ್ತದೆ.

ಭಾರತೀಯ ರೈಲ್ವೆ ರಾಜ್ಯದ 19 ರೈಲು ನಿಲ್ದಾಣಗಳ ಹೆಸರನ್ನು ಬದಲಿಸಲು ನಿರ್ಧಾರ ತೆಗೆದುಕೊಂಡಿದ್ದು ಅಧಿಸೂಚನೆ ಹೊರಡಿಸಿದೆ. ಎಲ್ಲ ಊರುಗಳ ಹೆಸರನ್ನು ಕನ್ನಡಕ್ಕೆ ಅನುಗುಣವಾಗಿಯೇ ಬರೆಯಲು ಮತ್ತು ಓದಲು ರೈಲ್ವೆ ಪ್ರಾಧಿಕಾರ ತಿಳಿಸಿದೆ. ಈ ಮೂಲಕ ಕನ್ನಡ ಡಿಂಡಿಮವನ್ನು ರೈಲ್ವೆ ಇಲಾಖೆಯೇ ಮೊಳಗಿಸಿದಂತಾಗಿದೆ.

ನೈರುತ್ಯ ರೈಲ್ವೆ ಚೀಫ್ ಕಮರ್ಶಿಯಲ್ ಮ್ಯಾನೇಜರ್ ಸುದಾಂಶು ಜ್ಯೋತಿ ಸಿನ್ಹಾ ಅವರಿಗೆ ಜುಲೈ 7 ರಂದು ಭಾರತೀಯ ರೈಲೈ ಇಲಾಖೆಯು ಪತ್ರವನ್ನು ಕಳುಹಿಸಿಕೊಟ್ಟಿದೆ ಬದಲಾವಣೆಯ ಎಲ್ಲ ಮಾಹಿತಿ ನೀಡಿದೆ. [ಬೆಂಗಳೂರು-ರಾಮನಗರ ನಡುವೆ 'ಡೆಮು' ರೈಲು ಸಂಚಾರ]

19 Railway Stations in State to Change to New Names

ಈ ಬಗ್ಗೆ ಮಾಹಿತಿ ನೀಡಿರುವ, ನೈರುತ್ಯ ರೈಲ್ವೆ ಇಲಾಖೆಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಘನಶ್ಯಾಮ್ ವರ್ಮ, ಮತ್ತು ಚೀಫ್ ಪಬ್ಲಿಕ್ ರಿಲೇಶನ್ ಅಧಿಕಾರಿ, ಈಗಾಗಲೇ ಹೆಸರು ಬದಲಾವಣೆ ಮಾಡಲು ಬೇಕಾದ ಎಲ್ಲಾ ಕಾರ್ಯಗಳನ್ನು ಕೈಗೊಂಡು ಆಜ್ಞೆ ಹೊರಡಿಸಲಾಗಿದೆ. ಆದರೆ ನಿಲ್ದಾಣ, ಕಚೇರಿ ಪತ್ರ, ಹಾಗೂ ಟಿಕೆಟ್ ಗಳಲ್ಲಿ ಹೆಸರು ಬದಲಾವಣೆ ಮಾಡಲು ಇನ್ನು ಸ್ವಲ್ಪ ದಿನಗಳು ತಗಲುತ್ತದೆ ಎಂದು ತಿಳಿಸಿದ್ದಾರೆ.

ಈ ಕೆಳಗೆ ಬದಲಾವಣೆಗೆ ಒಳಪಟ್ಟ ನಿಲ್ದಾಣದ ಹೆಸರುಗಳ ಪಟ್ಟಿ:
* ಬೆಂಗಳೂರು ಕಂಟೋನ್ಮೆಂಟ್ (Bangalore Cantonment)
* ಬೆಂಗಳೂರು ಸಿಟಿ ಜಂಕ್ಷನ್ (Bangalore City Junction)
* ಬೆಂಗಳೂರು ಈಸ್ಟ್ (Bangalore East)
* ಬಳ್ಳಾರಿ ಕಂಟೋನ್ಮೆಂಟ್ (Bellary Cantonment),
* ಬಳ್ಳಾರಿ ಜಂಕ್ಷನ್ (Bellary Junction),
* ವಿಜಯಪುರ (Bijapur),
* ಬೆಳಗಾವಿ (Belgaum)
* ಚಿಕ್ಕಮಗಳೂರು (Chikkamagalur)
* ಮೈಸೂರು (Mysore)
* ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ (Mysore New Goods Terminal)
* ಹೊಸಪೇಟೆ ಡಿ ಕ್ಯಾಬಿನ್ (Hospet D Cabin)
* ಹೊಸಪೇಟೆ (Hospet),
* ಶಿವಮೊಗ್ಗ ಬಿದರೆ (Shimoga Bidare)
* ಶಿವಮೊಗ್ಗ ಎಚ್ (Shimoga H),
* ಶಿವಮೊಗ್ಗ ಟೌನ್ (Shimoga Town),
* ಹುಬ್ಬಳ್ಳಿ ಜಂಕ್ಷನ್ (Hubli Junction)
* ಹುಬ್ಬಳ್ಳಿ ಶಾಪ್ಸ್ (Hubli Shops)
* ಹುಬ್ಬಳ್ಳಿ ಸೌತ್ (Hubli South)
* ತುಮಕೂರು (Tumkur).

English summary
Indian Railway Conference Association have taken the decision to change the name of the state's 19 railway stations and notification issued. The letter issued on july 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X