ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಮೇಯರ್ ಪಟ್ಟ ಕಾಂಗ್ರೆಸ್ ಕೈ ತಪ್ಪಲಿದೆ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುರಿದು ಬೀಳಲಿದೆ?. ಹೌದು..ಒಂದು ವೇಳೆ ಬಿಜೆಪಿ ಕಾನೂನು ಹೋರಾಟ ಆರಂಭಿಸಿದರೆ ಬಿಬಿಎಂಪಿ ಆಡಳಿತ ಕಾಂಗ್ರೆಸ್-ಜೆಡಿಎಸ್ ಕೈ ತಪ್ಪಲಿದೆ.

ಕಾಂಗ್ರೆಸ್ ಮತ್ತು ಪಕ್ಷೇತರ ಸೇರಿ 19 ಸದಸ್ಯರು ತಮ್ಮ ಆಸ್ತಿ ವಿವರವನ್ನು ಸಲ್ಲಿಸಿಲ್ಲ. ಕೆಎಂಸಿ ಕಾಯ್ದೆ 1994ರ ಅನ್ವಯ ಆಸ್ತಿ ವಿವರ ಸಲ್ಲಿಸದ ಬಿಬಿಎಂಪಿ ಸದಸ್ಯರನ್ನು ಅನರ್ಹಗೊಳಿಸಲು ಅವಕಾಶವಿದೆ.

ಯಾರಾಗಲಿದ್ದಾರೆ ಬಿಬಿಎಂಪಿಯ ನೂತನ ಮೇಯರ್?ಯಾರಾಗಲಿದ್ದಾರೆ ಬಿಬಿಎಂಪಿಯ ನೂತನ ಮೇಯರ್?

ಕರ್ನಾಟಕ ಬಿಜೆಪಿ 19 ಸದಸ್ಯರನ್ನು ಅನರ್ಹಗೊಳಿಸುವಂತೆ ನ್ಯಾಯಾಲಯದ ಮೊರೆ ಹೋದರೆ ಸದಸ್ಯತ್ವ ರದ್ದಾಗುವ ಸಾಧ್ಯತೆ ಇದೆ. ಸದಸ್ಯತ್ವ ರದ್ದಾದರೆ ಪಾಲಿಕೆಯಲ್ಲಿನ ಮೈತ್ರಿ ಸರ್ಕಾರ ಅಸ್ಥಿರಗೊಳ್ಳಲಿದೆ.

ಬಿಬಿಎಂಪಿ ಮೇಯರ್ ಹುದ್ದೆ ಲಿಂಗಾಯತರಿಗೆ, ರಾಹುಲ್‌ ಗಾಂಧಿಗೆ ಪತ್ರಬಿಬಿಎಂಪಿ ಮೇಯರ್ ಹುದ್ದೆ ಲಿಂಗಾಯತರಿಗೆ, ರಾಹುಲ್‌ ಗಾಂಧಿಗೆ ಪತ್ರ

19 BBMP corporators yet to file asset details

ಸೆ.28ಕ್ಕೆ ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಿಗದಿಯಾಗಿದೆ. ಉಪ ಮೇಯರ್ ಪಟ್ಟ ಜೆಡಿಎಸ್‌ ಪಾಲಾಗಿದ್ದು, ಇಮ್ರಾನ್ ಪಾಷಾ ಅವರನ್ನು ಅಭ್ಯರ್ಥಿ ಎಂದು ಪಕ್ಷ ತೀರ್ಮಾನ ಮಾಡಿದೆ.

ಮೇಯರ್ ಚುನಾವಣೆ : ಪಕ್ಷೇತರ ಸದಸ್ಯರ ಜೊತೆ ರಾಮಲಿಂಗಾ ರೆಡ್ಡಿ ಸಭೆಮೇಯರ್ ಚುನಾವಣೆ : ಪಕ್ಷೇತರ ಸದಸ್ಯರ ಜೊತೆ ರಾಮಲಿಂಗಾ ರೆಡ್ಡಿ ಸಭೆ

ಆದರೆ, ಮೇಯರ್ ಯಾರು ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಮೇಯರ್ ಹುದ್ದೆ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ. ಮೇಯರ್ ಪಟ್ಟಕ್ಕೆ ಭಾರಿ ಪೈಪೋಟಿ ನಡೆಯುತ್ತಿದೆ. ಜಯನಗರ ವಾರ್ಡ್ ಕಾರ್ಪೊರೇಟರ್ ಗಂಗಾಬಿಕ ಮಲ್ಲಿಕಾರ್ಜುನ ಅವರ ಹೆಸರು ಮುಂಚೂಣಿಯಲ್ಲಿದೆ.

ನಿಯಮದಂತೆ ಮೇಯರ್ ಚುನಾವಣೆ ನಡೆದ ಒಂದು ತಿಂಗಳಿನಲ್ಲಿ ಕಾರ್ಪೊರೇಟರ್‌ಗಳು ಆಸ್ತಿ ವಿವರವನ್ನು ಸಲ್ಲಿಸಬೇಕು. ಆದರೆ, ಚುನಾವಣೆ ನಡೆದು ಒಂದು ವರ್ಷ ಕಳೆದರೂ ಇನ್ನೂ 19 ಕಾರ್ಪೊರೇಟರ್‌ಗಳು ಆಸ್ತಿ ವಿವರ ಸಲ್ಲಿಸಿಲ್ಲ.

English summary
Bruhat Bengaluru Mahanagara Palike (BBMP) 19 corporators yet to file asset details. If opposition party BJP moved the court they will loss BBMP membership. BBMP mayor election scheduled on September 28, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X