ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಎಟಿಎಂಗೆ ಹಣ ತುಂಬುವ ವೇಳೆ 18 ಲಕ್ಷ ಲೂಟಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 30: ಬ್ಯಾಂಕ್ ಎಟಿಎಂಗೆ ಹಣ ತುಂಬಲು ತೆರಳಿದಾಗ ದಾಳಿ ಮಾಡಿದ ಮೂವರು ದುಷ್ಕರ್ಮಿಗಳು ಹದಿನೆಂಟು ಲಕ್ಷ ರುಪಾಯಿ ನಗದು ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಣ ದೋಚುವ ಪ್ರಯತ್ನದಲ್ಲಿ ಕಸ್ಟೋಡಿಯನ್ ಮೋಹನ್ ಅವರ ಮೇಲೆ ದಾಳಿ ನಡೆಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಎಟಿಎಂ ಮೋಸದ ಜಾಲ ಪತ್ತೆ, ಲಕ್ಷಾಂತರ ಹಣ ಗುಳುಂಬೆಂಗಳೂರಿನಲ್ಲಿ ಎಟಿಎಂ ಮೋಸದ ಜಾಲ ಪತ್ತೆ, ಲಕ್ಷಾಂತರ ಹಣ ಗುಳುಂ

ಜಾಲಹಳ್ಳಿ ಕ್ರಾಸ್ ಬಳಿಯ ಐಸಿಐಸಿಐ ಬ್ಯಾಂಕ್ ನ ಎಟಿಎಂ ಕೇಂದ್ರಕ್ಕೆ ಹಣ ತುಂಬಲು ಬರಲಾಗಿತ್ತು. ಈ ವೇಳೆ ಸೆಕ್ಯೂರ್ ವೆಲ್ ಏಜೆನ್ಸಿಯ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಪ್ರತಿರೋಧ ತೋರಿದ ಕಸ್ಟೋಡಿಯನ್ ಮೋಹನ್ ಅವರಿಗೆ ಚಾಕುವಿನಿಂದ ಇರಿದಿದ್ದಾರೆ. ಅವರನ್ನು ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.

18 lakh rupees looted by miscreants while filling money in ATM in Bengaluru

ಬೆಂಗಳೂರಿನಲ್ಲಿ ಹಣವಿರುವ ವ್ಯಾನ್‌ದೊಂದಿಗೆ ಚಾಲಕ ಪರಾರಿಬೆಂಗಳೂರಿನಲ್ಲಿ ಹಣವಿರುವ ವ್ಯಾನ್‌ದೊಂದಿಗೆ ಚಾಲಕ ಪರಾರಿ

ಈ ಹಿಂದೆ ಸೆಕ್ಯೂರಿಟಿ ಏಜೆನ್ಸಿಯ ಸಿಬ್ಬಂದಿಯೊಬ್ಬ ವಾಹನವನ್ನು ಕದ್ದೊಯ್ದು, ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಹೋಗಿದ್ದ. ಆ ನಂತರ ಆತನನ್ನು ಬಂಧಿಸಿ, ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ಎಟಿಎಂನಲ್ಲಿ ಹಣ ತುಂಬುವ ವೇಳೆ ರಕ್ಷಣಾ ಸಿಬ್ಬಂದಿ ಇರುತ್ತಾರೆ. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಬಂದು, ದಾಳಿ ನಡೆಸಿದರೆ ಅದನ್ನು ಎದುರಿಸಲು ಸನ್ನದ್ಧವಾಗಿರುವ ಅವಶ್ಯಕತೆಯನ್ನು ಈ ಘಟನೆ ಸೂಚಿಸುತ್ತಿದೆ.

English summary
18 lakh rupees looted by miscreants while filling money in ATM in Bengaluru on Monday morning. miscreants attacks secure well agency staffs and looted money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X