ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಶಸ್ತ್ರಾಸ್ತ್ರ: ಬೆಂಗಳೂರಲ್ಲಿ 13 ಬಾಂಗ್ಲರ ಬಂಧನ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 25: ಬೆಂಗಳೂರು ಗ್ರಾಮಾಂತರ ಪೊಲೀಸರು ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ 13 ಬಾಂಗ್ಲಾದೇಶಿಗರನ್ನು ಬಂಧಿಸಿದ್ದಾರೆ.

ಕೊಮ್ಮಸಂದ್ರದ ನಾಗೇಶ್‌ ಎಂಬುವವರ ಜಮೀನಿನಲ್ಲಿ ಶೆಡ್ ಹಾಕಿಕೊಂಡು ವಾಸವಿದ್ದ ಶಫಿಕುಲ್, ಮೊಹಮದ್ ರಾಖಿಬ್, ಮೊಹಮದ್ ಶಾಯಿನ್ಸ್, ಮೊಹಮದ್ ಹಬೀಬ್, ಮೊಹಮದ್ ಶಫೀಕುಲ್, ಮೊಹಮದ್ ಸದ್ದಾಂ ಹುಸೇನ್, ಮೊಹಮದ್ ಆರೀಫ್, ತನಿಯಾ, ಕಾಕೀಲಿ, ಮೌಲ್ ಶೂಮಿ, ಅಸ್ಮಾ ಬಂಧಿತರು.

ಹಿಲ್ಟನ್ ಹೋಟೆಲ್ ನಲ್ಲಿ ದಾವೂದ್ ಗ್ಯಾಂಗಿನ ಪ್ರಮುಖ ಸದಸ್ಯ ಬಂಧನಹಿಲ್ಟನ್ ಹೋಟೆಲ್ ನಲ್ಲಿ ದಾವೂದ್ ಗ್ಯಾಂಗಿನ ಪ್ರಮುಖ ಸದಸ್ಯ ಬಂಧನ

ಐಎಸ್ ಡಿ ಅಧಕಾರಿಗಳು ನೀಡಿದ ಮಾಹಿತಿ ಆಧರಿಸಿ ಆ.22ರಂದು ಪೊಲೀಸರು ಬಾಂಗ್ಲಾದೇಶದ ಶೋಬಿಕುಲ್ ಇಸ್ಲಾಂನನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದಾಗ ಆತನ ಬಳಿ ವೀಸಾ, ಪಾಸ್‌ಪೋರ್ಟ್ ಯಾವುದೂ ಇರಲಿಲ್ಲ, ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ತನ್ನ ಜತೆ ಇನ್ನೂ 13ಮಂದಿ ಇದ್ದಾರೆ ಎಂದು ಬಾಯ್ಬಿಟ್ಟಿದ್ದ.

13 Bangla nationals detained in Bengaluru

ಬಂಧಿತ ಬಾಂಗ್ಲಾದೇಶದ ಪ್ರಜೆಗಳ ಶೆಡ್ ನಲ್ಲಿ ಸಿಕ್ಕಿರುವ ಬಳಸಿದ ಖಾಲಿ ಕಾಡತೂಸುಗಳು ತುಂಬಾ ಹಳೆಯದಾಗಿವೆ, ಕೆಲಸಕ್ಕೆ ಬಾರದ ಪೆನ್ ಡ್ರೈವ್ ಮತ್ತು ವಾಕಿಟಾಕಿಗಳು ದೊರೆತಿವೆ. ಇವುಗಳನ್ನು ಎಲ್ಲಿಂದ ತರಲಾಗಿತ್ತು ಎಂದು ಹೇಳಿದ್ದಾನೆ.

ಕಸ ಆಯುವ ವೇಳೆ ಸಿಗುವ ವಸ್ತುಗಳನ್ನು ತಂದು ಒಂದೆಡೆ ಹಾಕಿ ಬೇರ್ಪಡಿಸಿ ನಂತರ ಗುಜರಿಗೆ ಮಾರಾಟ ಮಾಡಲಾಗುತ್ತದೆ. ಅವರಿಗೆ ನಿಷೇಧಿತ ವಸ್ತುಗಳು ಸಿಕ್ಕಿವೆ, ಆದರೆ ಅವುಗಳು ಎಲ್ಲಿ ಸಿಕ್ಕಿವೆ ಎಂದು ಯಾರಿಗೂ ಗೊತ್ತಿಲ್ಲ.

ಅಕ್ರಮ ವಲಸಿಗರಿಗೆ ಕಾಂಗ್ರೆಸ್ ರಕ್ಷಣೆ?: ವಿಕಿಲೀಕ್ಸ್ ಮಾಹಿತಿ ಬಹಿರಂಗಅಕ್ರಮ ವಲಸಿಗರಿಗೆ ಕಾಂಗ್ರೆಸ್ ರಕ್ಷಣೆ?: ವಿಕಿಲೀಕ್ಸ್ ಮಾಹಿತಿ ಬಹಿರಂಗ

ಇವರ ಜತೆಗೆ ವಾಸವಿರುವ ಮತ್ತು ಕೆಲವರು ಬೇರೆ ಬೇರೆ ಪ್ರದೇಶಗಳಿಗೆ ಹೊರಟು ಹೋಗಿದ್ದಾರೆ. ವಿದ್ವಂಸಕ ಕೃತ್ಯದ ಉದ್ದೇಶ ಹೊಂದಿದಂತೆ ಕಾಣತ್ತಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

English summary
13 Bangla nationals including four women were arrested in Kommasandra by Bengaluru rural police on Friday with illegal arms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X