ಬೆಂಗ್ಳೂರಲ್ಲಿ ಬಾಲಕಿ ಮೇಲೆ ಅಪ್ರಾಪ್ತರಿಂದ ಲೈಂಗಿಕ ದೌರ್ಜನ್ಯ

Posted By:
Subscribe to Oneindia Kannada

ಬೆಂಗಳೂರು, ಜುಲೈ 31: ಇಲ್ಲಿನ ರೈಲು ನಿಲ್ದಾಣದ ಬಳಿ ಪೊದೆಯೊಂದರಲ್ಲಿ ಹನ್ನೆರಡು ವರ್ಷದ ಬಾಲಕಿಯ ಕೈ ಕಟ್ಟಿ ಹಾಕಿದ ಆರು ಹುಡುಗರು ಮೂವತ್ತು ನಿಮಿಷಗಳ ಕಾಲ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಮಹಿಳೆಯೊಬ್ಬರು ಈ ಕೃತ್ಯವನ್ನು ಗಮನಿಸಿದ ಕಾರಣಕ್ಕೆ ಬಾಲಕಿಯನ್ನು ಬಿಟ್ಟು ಹೋಗಿದ್ದಾರೆ.

ಸುಳ್ಯ: ಗುರುವಿನ ಕಾಮ ಪುರಾಣವನ್ನು ಬಿಚ್ಚಿಟ್ಟ ವಿದ್ಯಾರ್ಥಿನಿ

ಪೋಷಕರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಖಾತ್ರಿಯಾಗಿದೆ. ಆದರೆ ಎಫ್ ಐಆರ್ ದಾಖಲಿಸಲು ಪೊಲೀಸರು ಹತ್ತು ದಿನ ಸಮಯ ತೆಗೆದುಕೊಂಡಿದ್ದಾರೆ.

12 year old girl sexually assaulted, 5 arrested

ಪೊಲೀಸರು ಎಫ್ ಐಆರ್ ದಾಖಲಿಸಲು ಹಿಂದೆ-ಮುಂದೆ ನೋಡಿದ್ದಾರೆ. ಮೊದಲಿಗೆ ಅಧಿಕೃತವಾಗಿ ದೂರು ದಾಖಲಿಸಲು ಆಗುವುದಿಲ್ಲ ಎಂದಿದ್ದಾರೆ. ಇನ್ನು ಲೈಂಗಿಕ ದೌರ್ಜನ್ಯ ಎಸಗಿದವರ ಪೈಕಿ ಅಪ್ರಾಪ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ 'ಪಾಠ' ಹೇಳಿದರೆ ಸಾಕು ಎಂಬಂತೆ ನಡೆದುಕೊಂಡಿದ್ದಾರೆ.

ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದ ಸಂದರ್ಭದಲ್ಲಿ ರಾತ್ರಿ ಹನ್ನೊಂದರವರೆಗೆ ಕೂರಿಸಿಕೊಂಡಿದ್ದಾರೆ. ಕನಿಷ್ಠ ಹತ್ತು ಸಲ ವಿಚಾರಣೆ ನಡೆಸಿದ್ದಾರೆ. ಪ್ರತಿ ಬಾರಿಯೂ ಪುರುಷ ಅಧಿಕಾರಿಯೇ ವಿಚಾರಣೆ ಮಾಡಿದ್ದಾರೆ. ಆ ಬಾಲಕಿ ಹೇಳುವಂತೆ, ಒಮ್ಮೆ ಮಾತ್ರ ಮಹಿಳಾ ಅಧಿಕಾರಿಯೊಬ್ಬರು ಸಂಕ್ಷಿಪ್ತವಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಬೆಂಗಳೂರು: 3 ವರ್ಷದ ಮಗುವಿನ ಮೇಲೆ ಶಾಲಾ ಬಸ್ ನಲ್ಲಿ ದೌರ್ಜನ್ಯ

ಆ ನಂತರ ಪ್ರಕರಣಕ್ಕೆ ಸಂಬಂಧವೇ ಇಲ್ಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಫೇಸ್ ಬುಕ್ ನಲ್ಲಿ ಸಂತ್ರಸ್ತೆಯು ಮೂವರನ್ನು ಗುರುತಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರೂ ನಿರ್ಲಕ್ಷ್ಯ ಮಾಡಲಾಗಿದೆ.

ಬಾಲಕಿಯು ಪದೇಪದೇ ಹೇಳಿಕೆ ಬದಲಾಯಿಸುತ್ತಿರುವುದರಿಂದ ಎಫ್ ಐಆರ್ ದಾಖಲಿಸಲು ಬಹಳ ಸಮಯ ಹಿಡಿಯಿತು ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.

Worlds Top 10 Most Powerful Guns | Oneindia Kannada

ಸಂತ್ರಸ್ತೆಯ ತಾಯಿ ನೀಡಿದ ದೂರಿನ ಅನ್ವಯ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಐವರು ತಪ್ಪಿತಸ್ಥರನ್ನು (ಎಲ್ಲರೂ ಅಪ್ರಾಪ್ತರು) ಬಂಧಿಸಲಾಗಿದೆ ಎಂದು ಪೊಲೀಸರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
12 year old girl sexually assaulted near Bengaluru railway station and 5 minors arrested by police.
Please Wait while comments are loading...