ನೈಸ್‌ ರಸ್ತೆಯಲ್ಲಿ ಯುವತಿಯರ ತೋರಿಸಿ ಸುಲಿಗೆ, 12 ಜನರ ಬಂಧನ

Posted By:
Subscribe to Oneindia Kannada

ಬೆಂಗಳೂರು, ಜೂನ್ 16: ಇಲ್ಲಿ ನೈಸ್‌ ರಸ್ತೆಯಲ್ಲಿ ಯುವತಿಯರನ್ನು ಬಳಸಿಕೊಂಡು ಸಾರ್ವಜನಿಕರ ಸುಲಿಗೆ ಮಾಡುತ್ತಿದ್ದ ದರೋಡೆಕೋರರ ತಂಡವನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಮೋನಿಷಾ(20) ಎನ್ನುವಳನ್ನು ನೈಸ್ ರಸ್ತೆಯಲ್ಲಿ ನಿಲ್ಲಿಸಿ ವಾಹನ ಸವಾರರನ್ನು ಆಕರ್ಷಿಸಿ ಲೈಂಗಿಕ ಕ್ರಿಯೆ ನಡೆಸಲು ನಿರ್ಜನ ಪ್ರದೇಶಕ್ಕೆ ಕರೆತಂದು ಬಳಿಕ ಸುಲಿಗೆ ಮಾಡುತ್ತಿದ್ದ ಮಹಿಳೆ ಸೇರಿ ಒಟ್ಟು 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈ ತಂಡ ಸುಮಾರು 25 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದೆ.

12-member gang arrested for waylaying, robbing people on NICE Road

ತಮಿಳುನಾಡು ಹಾಗೂ ಕೇರಳ ಮತ್ತು ಬೆಂಗಳೂರು ನಗರದವರಾದ ಮೋನಿಷಾ(20), ಸಾವಾನ್ ಅಲಿಯಾಸ್ ಬಬ್ಲು, ಮುತ್ತುರಾಜ್, ಪುನೀತ್ ಅಲಿಯಾಸ್ ಕಾಡಿ, ತುಳಸಿರಾಮ್, ಅರುಣ್ ಏಸುರಾಜ್, ಸ್ಟೀಫನ್ ರಾಜ್ ಅಲಿಯಾಸ್ ಮುಕುಡಿ, ವಿಗ್ನೇಶ್ ಅಲಿಯಾಸ್ ದೀಲಾ, ಅಮರ್, ಶಾಂತ್ ಕುಮಾರ್, ಕೇಶವಮೂರ್ತಿ, ಮತ್ತು ದೀಪಕ್ ಗಾರ್ಗ್ ಬಂಧಿತ ಆರೋಪಿಗಳು.

ಪ್ರಮುಖ ಆರೋಪಿ ಸಾವನ್‌ ಅಲಿಯಾಸ್ ಬಬ್ಲು ಎಲೆಕ್ಟ್ರಾನಿಕ್ ಸಿಟಿಯ ನೈಸ್ ರಸ್ತೆಯಲ್ಲಿ ಮೊನಿಷಾಳನ್ನು ನಿಲ್ಲಿಸಿ ವಾಹನ ಸವಾರರನ್ನು ಸೆಳೆದು ಅವರಿಗೆ ಅನುಮಾನ ಬರದಂತೆ ರಸ್ತೆಯ ಪಕ್ಕದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬರಲಾಗುತ್ತಿತ್ತು.

ಅಲ್ಲಿ ಮಾರಕಾಸ್ತ್ರಗಳೊಂದಿಗೆ ಸಜ್ಜಾಗಿರುತ್ತಿದ್ದ ಆರೋಪಿಗಳು ಅವರ ಬಳಿ ಇದ್ದ ಹಣ, ಚಿನ್ನಾಭರಣ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದರು.

ಬಬ್ಲು ವರ್ತನೆಯಿಂದ ಅನುಮಾನಗೊಂಡ ಪೊಲೀಸರು ಆತನನ್ನು ಕರೆದು ವಿಚಾರಣೆ ನಡೆಸಿದಾಗ ತಮ್ಮ ಕಾಯಕವನ್ನು ಬಹಿರಂಗ ಪಡಿಸಿದ್ದಾನೆ. ಬಳಿಕ ಕಾರ್ಯಚರಣೆಗಿಳಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಇನ್ಸ್ ಪೆಕ್ಟರ್ ಮತ್ತವರ ಸಿಬ್ಬಂದಿ ಗ್ಯಾಂಗ್ ನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Electronics City police on Thursday nabbed a gang of 12, including a 20-year-old woman, for allegedly luring motorists on NICE Road and helping her gang members rob them. The kingpin of the gang, Sawan Bablu, 24, has been involved in over 25 such cases, the police said.
Please Wait while comments are loading...