ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಬಸ್‌ ಓಡಿಸಲು ಸಿದ್ಧರಾಗ್ತಿದಾರೆ 115 ಮಹಿಳೆಯರು

|
Google Oneindia Kannada News

ಬೆಂಗಳೂರು, ಡಿಸೆಂಬರ್ 10: ನಿರ್ಭಯಾ ಯೋಜನೆಯಡಿಯಲ್ಲಿ 115 ಮಹಿಳೆಯರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಚಾಲನಾ ತರಬೇತಿ ನೀಡುತ್ತಿದೆ.

ಬಿಎಂಟಿಸಿಯಲ್ಲಿ ಶೇ.33 ರಷ್ಟು ಚಾಲನಾ ಉದ್ಯೋಗವನ್ನು ಮಹಿಳೆಯರಿಗೆ ಮೀಸಲಿಟ್ಟಿದ್ದು ಇದೀಗ ನಿರ್ಭಯ ಯೋಜನೆಯಡಿ 115 ಮಹಿಳೆಯರು ಬಿಎಂಟಿಸಿ ಬಸ್ ಚಾಲನೆಯ ತರಬೇತಿ ಪಡೆಯುತ್ತಿದ್ದಾರೆ.

ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ

ನಿರ್ಭಯಾ ಯೋಜನೆಯಲ್ಲಿ ಒಟ್ಟು 7.5 ಕೋಟಿಯಷ್ಟು ಬಿಎಂಟಿಸಿಗೆ ಮೀಸಲಿಟ್ಟಿದ್ದು ಅದರಲ್ಲಿ 1 ಸಾವಿರ ಮಹಿಳೆಯರು ಪ್ರಯೋಜನ ಪಡೆಯಬಹುದಾಗಿದೆ.

115 women opt for BMTC’s driving classes

ಈಗಾಗಲೇ 115 ಮಹಿಳೆಯರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು ತರಬೇತಿ ಪಡೆಯುತ್ತಿದ್ದಾರೆ. 103 ಮಂದಿ ಲೈಟ್ ಮೋಟಾರ್ ವೆಹಿಕಲ್(ಲಘು ವಾಹನಗಳು) ತರಬೇತಿ ಪಡೆಯಲಿದ್ದಾರೆ, 12 ಮಂದಿ ಹೆವಿ ಪ್ಯಾಸೆಂಜರ್ ವೆಹಿಕಲ್ ತರಬೇತಿ(ಭಾರಿ ವಾಹನಗಳು)ಯನ್ನು ಉಚಿತವಾಗಿ ಪಡೆದುಕೊಳ್ಳಲಿದ್ದಾರೆ.

ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳಕ್ಕೆ ಮತ್ತೆ ಚಿಂತನೆ ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳಕ್ಕೆ ಮತ್ತೆ ಚಿಂತನೆ

ಲೈಟ್ ಮೋಟಾರ್ ವೆಹಿಕಲ್ ಪರವನಗಿ ಪಡೆದ ಬಳಿಕ ಹೆವಿ ಪ್ಯಾಸೆಂಜರ್ ವೆಹಿಕಲ್ ಚಾಲನಾ ತರಬೇತಿಯನ್ನೂ ಪಡೆಯಬಹುದಾಗಿದೆ. ಮಾಗಡಿ ರಸ್ತೆಯಲ್ಲಿರುವ ವಡ್ಡರಹಳ್ಳಿಯಲ್ಲಿ ತರಬೇತಿ ನೀಡಲಾಗುತ್ತದೆ.

ಬೆಂಗಳೂರು: ಕಾರು-ಬಿಎಂಟಿಸಿ ನಡುವೆ ಡಿಕ್ಕಿ 3 ಸಾವು, ಇಬ್ಬರು ಗಂಭೀರ ಬೆಂಗಳೂರು: ಕಾರು-ಬಿಎಂಟಿಸಿ ನಡುವೆ ಡಿಕ್ಕಿ 3 ಸಾವು, ಇಬ್ಬರು ಗಂಭೀರ

ಸಾಕಷ್ಟು ಮಹಿಳೆಯರು ತರಬೇತಿ ಮುಗಿದ ಬಳಿಕ ಬಿಎಂಟಿಸಿಗೆ ಸೇರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಖಾಸಗಿಯಾಗಿ ಕಲಿಯಬೇಕಿದ್ದರೆ 5 ಸಾವಿರ ರೂ ತರಬೇತಿಗೆ ನೀಬೇಕಾಗುತ್ತದೆ.

ಬಿಎಂಟಿಸಿ ಅಧಿಕಾರಿಗಳು ಹೇಳುವ ಪ್ರಕಾರ ಒಮ್ಮೆ ತರಬೇತಿ ಪಡೆದ ಬಳಿಕ ಬಿಂಟಿಸಿಯಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಎರಡು ಪಾಳಿಗಳಲ್ಲಿ ತರಬೇತಿ ನೀಡಲಾಗುತ್ತದೆ.

English summary
The Bangalore Metropolitan Transport Corporation (BMTC)’s 33percent reservation plan for women drivers has long remained a non-starter. But, the wheels of change have been set in motion, thanks to the Nirbhaya fund which became operational last month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X