ಬೆಂಗಳೂರು: ಪಟಾಕಿ ಸಿಡಿತ, ಈವರೆಗೆ 11 ಜನರ ಕಣ್ಣಿಗೆ ಗಾಯ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 19: ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸೋದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಹಿನ್ನಲೆಯಲ್ಲಿ ಪಟಾಕಿ ಸಿಡಿಸುವಾಗ ಹಲವರು ಕಣ್ಣು ಕಳೆದುಕೊಂಡಿರುವುದು ಉಂಟು. ಪ್ರತಿವರ್ಷವೂ ಪಟಾಕಿಯಿಂದ ಆಗುವ ಅನಾಹುತದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಲೇ ಇದೆ.ಆದರೂ ಪಟಾಕಿಯಿಂದ ಹಲವು ದುರ್ಘಟನೆಗಳು ನಡೆಯುತ್ತಲೇ ಇವೆ.

ಈ ಬಾರಿಯದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸಿಡಿತದಿಂದಾಗಿ ಬೆಂಗಳೂರು ನಗರದಲ್ಲಿ ಈ ವರೆಗೆ ಒಟ್ಟು 11 ಜನರು ಗಾಯಗೊಂಡಿರುವುದು ತಿಳಿದುಬಂದಿದೆ.

ಪಟಾಕಿ ಅಂಗಡಿಗೆ ಬೆಂಕಿಬಿದ್ದು ಓರ್ವ ಸಾವು: ದೀಪಾವಳಿಗೆ ಮೊದಲ ವಿಘ್ನ!

11 injured due to firecrackers during Deepavali in Bengaluru

ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದ್ದರೆ, ಮತ್ತೊಂದೆಡೆ ಪಟಾಕಿ ಅವಘಡಗಳು ನಡೆಯುತ್ತಲೇ ಇವೆ. ಮಾಮುಲುಪೇಟೆಯ ನಿವಾಸಿಯಾದ ಗೋಪಾಲ ಎನ್ನುವರ ಪುತ್ರ ಭಾವಿಷ್ ಪಟಾಕಿ ಸಿಡಿಸಲು ಹೋಗಿ ಕಣ್ಣಿಗೆ ಗಾಯ ಮಾಡಿಕೊಂಡಿದ್ದು, ವಿಂಟೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಎಲ್ ಆರ್ ನಗರದ ನಿವಾಸಿಯಾದ ಶಾರುಕ್ ಎನ್ನುವರು ಬುಧವಾರ ರಾತ್ರಿ ಮನೆಗೆ ತೆರಳುತ್ತಿರುವ ವೇಳೆ ಬೇರೆಯವರು ಹಚ್ಚಿದ ರಾಕೆಟ್ ಪಟಾಕಿ ಬಂದು ಕಣ್ಣಿ ತಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೀಪಾವಳಿಯಲ್ಲಿ ಪಟಾಕಿ ಸಿಡಿಸುವವರು ಎಚ್ಚರವಾಗಿರಿ!

ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ಇಲ್ಲಿಯವರೆಗೆ ಒಟ್ಟು 8 ಜನರು ಚಿಕಿತ್ಸೆ ಪಡೆದಿದ್ದಾರೆ. ರಾಜಾಜಿನಗರದಲ್ಲಿ 5 ಜನ, ಬನ್ನೇರುಘಟ್ಟ ಆಸ್ಪತ್ರೆಯಲ್ಲಿ ಒಬ್ಬರು, ಬೊಮ್ಮಸಂದ್ರದಲ್ಲಿ 2.

ದೀಪಾವಳಿಯಂದೇ ಜೀವನಾಧಾರಕ್ಕಿದ್ದ ಹಸುಗಳನ್ನು ಕಿತ್ತುಕೊಂಡ ವಿಧಿ

ಇನ್ನು ವಿಂಟೋ ಆಸ್ಟತ್ರೆಯಲ್ಲಿ ಈವರೆಗೆ ಒಟ್ಟು 3 ಜನರು ದಾಖಲಾಗಿದ್ದಾರೆ ಎಂದು ವರದಿ ಸಿಕ್ಕಿದೆ. ಅಷ್ಟೇ ಅಲ್ಲದೇ ಪಟಾಕಿ ಅನಾಹುತದಲ್ಲಿ ಕಣ್ಣಿಗೆ ಗಾಯ ಮಾಡಿಕೊಂಡು ಹೊರ ರೋಗಿಯಾಗಿ ನಗರದ ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

ಮಿಂಟೋ ಹಾಸ್ಪಿಟಲ್ ಬಗ್ಗೆ:1913 ರಲ್ಲಿ ಆರಂಭವಾದ ಮಿಂಟೋ ಹಾಸ್ಪಿಟಲ್ ಲಕ್ಷಾಂತರ ಜನರ ಕಣ್ಣಿನ ದೋಷಗಳನ್ನು ನಿವಾರಿಸಿಕೊಂಡು ಬಂದಿದೆ. ಬೆಂಗಳೂರಿನ ಹೆಮ್ಮೆಯ ಸರಕಾರಿ ಆಸ್ಪತ್ರೆಗಳಲ್ಲಿ ಒಂದಾದ ಇಲ್ಲಿ 300 ಹಾಸಿಗೆ ಇದೆ. ಈ ಆಸ್ಪತ್ರೆ ಹೆಚ್ಚು ಸುದ್ದಿ ಮಾಡುವುದು ದೀಪಾವಳಿ ಹಬ್ಬ ಬಂದಾಗ. ಕಣ್ಣಿಗೆ ಪಟಾಕಿ ಕಿಡಿ ಬಡಿದು ಚಿಕಿತ್ಸೆಗಾಗಿ ಪ್ರತೀವರ್ಷ ನೂರಾರು ಜನ ಇಲ್ಲಿಗೆ ಬರ್ತಾರೆ. ಈ ವರ್ಷವೂ ಅದೇ ಕತೆ, ಅದೇ ವ್ಯಥೆ.

ಮಿಂಟೋ ಆಸ್ಪತ್ರೆ ಚಾಮರಾಜಪೇಟೆಯ ಆಲ್ಬರ್ಟ್ ವಿಕ್ಟರ್ ರೋಡಿನಲ್ಲಿದೆ. ಹಳೇ ತರಗುಪೇಟೆಯ ಹೆಬ್ಬಾಗಿಲು. ವಾಣಿವಿಲಾಸ ಆಸ್ಪತ್ರೆಯ ಹಿಂದುಗಡೆ. ಚಾಮರಾಜಪೇಟೆ ಪೊಲೀಸ್ ಸ್ಟೇಷನ್ನಿನ ಎದರುಗಡೆ. ಟಿಪು ಸುಲ್ತಾನ್ ಅರಮನೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೂಗಳತೆ ದೂರದಲ್ಲಿದೆ. ದೂರವಾಣಿ: 080-2670 7176/ 080-26702322.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
11 injured for firecrackers in Bengaluru during Deepavali, 8 admitted to Narayana Netralaya while 3 others admitted to Minto hospital.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ