ಡಿಕೆಶಿ ಮೇಲಿನ ಐಟಿ ದಾಳಿ: ಎಲ್ಲೆಲ್ಲಿ, ಏನೇನು ಸಿಕ್ಕಿತು?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಆಗಸ್ಟ್ 3: ಸಚಿವ ಡಿಕೆ ಶಿವಕುಮಾರ್ ಅವರಿಗೆ ಸೇರಿದ ಒಟ್ಟು 11.43 ಕೋಟಿ ರುಪಾಯಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎಲ್ಲೆಲ್ಲಿ ಎಷ್ಟು ಹಣ ವಶಕ್ಕೆ ಪಡೆಯಲಾಗಿದೆ ಎಂಬ ವಿವರ ಇಂತಿದೆ.

ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ : ಗುರುವಾರದ ಬೆಳವಣಿಗೆಗಳು

  • ದೆಹಲಿ 8.33 ಕೋಟಿ ರುಪಾಯಿ
  • ಬೆಂಗಳೂರು 2.5 ಕೋಟಿ ರುಪಾಯಿ
  • ಮೈಸೂರಿನಲ್ಲಿ 60 ಲಕ್ಷ ರುಪಾಯಿ ವಶಪಡಿಸಿಕೊಳ್ಳಲಾಗಿದೆ.

ಗ್ಯಾಲರಿ: ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ

ಇದರ ಜತೆಗೆ ವಿವಿಧ ಸ್ಥಳಗಳಲ್ಲಿ ರಾಶಿಗಟ್ಟಲೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಲೆ, ಕೆಪಿಟಿಸಿಎಲ್ ಕಚೇರಿ, ಮನೆ ಮತ್ತಿತರ ಕಡೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

11.43 crore seized from D K Shivakumar: Here is the breakup

ಸದ್ಯಕ್ಕೆ ಅಧಿಕಾರಿಗಳು ಆದಾಯದ ಮೂಲವನ್ನು ತಿಳಿಯುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಇದೇ ವಿಚಾರವಾಗಿ ಶಿವಕುಮಾರ್ ರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಯಾವುದರ ಲೆಕ್ಕ ಇಲ್ಲ ಅದರ ಬಗ್ಗೆ ಆದಾಯದ ಮೂಲವನ್ನು ಕೇಳಲಾಗುತ್ತಿದೆ.

ಶಿವಕುಮಾರ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಹಿರೇಮಠ್ ಆಗ್ರಹ

ಶಾಲೆಯಲ್ಲಿ ವಶಪಡಿಸಿಕೊಂಡ ಹಣವು ನಿಷೇಧಿತ ನೋಟುಗಳು ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಅಧಿಕಾರಿಗಳು ಹೇಳುವ ಪ್ರಕಾರ, ಈ ಬಗ್ಗೆ ಪ್ರಶ್ನೆ ಮಾಡಲಾಗುತ್ತದೆ. ಶಿವಕುಮಾರ್ ಪರವಾಗಿ ಮಾತನಾಡಿರುವ ಸಂಸದ ಹಾಗೂ ಅವರ ಸೋದರ ಡಿಕೆ ಸುರೇಶ್, ಪ್ರತಿ ಪೈಸೆಗೂ ಲೆಕ್ಕ ಕೊಡಲಾಗುವುದು ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Income Tax department has in all seized cash to the tune of Rs 11.43 crore during raids it conducted on properties belonging to Karnataka Energy Minister, D K Shivakumar.
Please Wait while comments are loading...