ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿನಿಂದ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ

|
Google Oneindia Kannada News

ಬೆಂಗಳೂರು, ಫೆಬ್ರವರಿ 22 : ಹತ್ತನೇ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಇಂದು ವಿಧ್ಯುಕ್ತ ಚಾಲನೆ ದೊರೆಯಲಿದೆ.

ವಿಧಾನಸೌಧ ಮುಂಭಾಗ ಸಂಜೆ 6 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿನಿಮೋತ್ಸವ ಉದ್ಘಾಟಿಸಲಿದ್ದಾರೆ. ವಿಧಾನ ಸಭಾಧ್ಯಕ್ಷ ಕೆ.ಬಿ ಕೋಳಿವಾಡ್, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಅತಿಥಿಗಳಾಗಿ ಆಗಮಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಹಿಂದಿ ಚಲನಚಿತ್ರ ನಟಿ ಕರೀನಾ ಕಪೂರ್, ಹಿಂದಿ ಚಲನಚಿತ್ರ ನಿರ್ದೇಶಕರಾದ ರಾಕೇಶ್ ಓಂ ಪ್ರಕಾಶ್ ಮೆಹ್ರಾ, ಖ್ಯಾತ ಇರಾನಿಯನ್ ಚಲನಚಿತ್ರ ನಟಿ ಫತೇಮೇ ಮೋಟಮೆಡ್ ಆರ್ಯ, ಖ್ಯಾತ ಫ್ರೆಂಚ್ ಚಿತ್ರ ನಿರ್ಮಾಪಕ ಮಾರ್ಕ್ ಭಾಷೆಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

10th edition of Bengaluru International Film Festival Begins on Thursday

ಉದ್ಘಾಟನಾ ಸಮಾರಂಭದ ಅಂಗವಾಗಿ ಸಂಜೆ7.45 ಕ್ಕೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ 'ಇಟ್ಸ್ ದಿ ಲಾ'(ಇಟಲಿ) ಚಲನಚಿತ್ರ ಪ್ರದರ್ಶಿಸಲಾಗುತ್ತಿದೆ. ಸಾಲ್ವಟೋರ್ ಫಿಕಾರಾ ಮತ್ತು ವೆಲೆಂಟಿನೋ ಪಿಕೋನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮಾರ್ಚ್1 ರಂದು ಸಿನಿಮೋತ್ಸವ ಅಂತ್ಯಗೊಳ್ಳಲಿದೆ. ಒಟ್ಟು 68 ದೇಶಗಳ 200 ಚಿತ್ರಗಳು ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ಓರಾಯನ್ ಮಾಲ್ ನ 11 ಹಾಗೂ ಬೆಂಗಳೂರಿನ ಕಲಾವಿದರ ಸಂಘದ 1 ಪರದೆ ಸೇರಿದಂತೆ ಒಟ್ಟು 12 ಪರದೆಗಳಲ್ಲಿ ಚಿತ್ರಗಳು ಪ್ರದರ್ಸನಗೊಳ್ಳಲಿದದೆ. ಬೆಳಗ್ಗೆ 9 ರಿಂದ ರಾತ್ರಿವರೆಗೂ ಪ್ರತಿ ದಿನ ಐದು ಚಿತ್ರಗಳು ಪ್ರದರ್ಶನಗೊಳ್ಳಲಿದೆ.

English summary
Curtains will go up on the 10th edition of bengaluru International Film Festival on Thursday. On the grand steps of the Vidhana Soudha and chief minister Siddaramaiah will inaugurate the festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X