ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್ಸೆಸ್ಸೆಲ್ಸಿ ಪರೀಕ್ಷೆ: 10ಸಾವಿರ ವಿದ್ಯಾರ್ಥಿಗಳಿಗಿಲ್ಲ ಪ್ರವೇಶ

|
Google Oneindia Kannada News

ಬೆಂಗಳೂರು, ಮಾರ್ಚ್ 23: ಇಂದಿನಿಂದ 2018ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪ್ರಾರಂಭವಾಗಿದೆ. ತರಗತಿಗೆ ಗೈರಾದ 10,867 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

20-25 ವಿದ್ಯಾರ್ಥಿಗಳು ಮಾತ್ರ ಅನಾರೋಗ್ಯದಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಉಳಿದೆಲ್ಲಾ ಪ್ರಕರಣಗಳು ಕನಿಷ್ಠ ಹಾಜರಾತಿ ಕೊರತೆಯಿಂದ ಅರ್ಹತೆ ಕಳೆದುಕೊಂಡಿದ್ದಾರೆ. ಇವರೆಲ್ಲರೂ ಪರೀಕ್ಷೆ ಬರೆಯಲು ಮುಂದಿನ ಶೈಕ್ಷಣಿಕ ವರ್ಷದವರೆಗೂ ಕಾಯಬೇಕು. ಪೂರಕ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಕ್ಕರ್ ಹಾಕಿದವರ ಸಂಖ್ಯೆ ಬಹುತೇಕ ಕಡಿಮೆಯಾಗಿದೆ. 2017ರಲ್ಲಿ ಇದರ ಪ್ರಮಾಣ 19,306 ಇತ್ತು.

ಎಸ್.ಎಸ್.ಎಲ್.ಸಿ. ಪರೀಕ್ಷೆ ಸಂಬಂಧಿ ದೂರುಗಳಿಗೆ ಸಹಾಯವಾಣಿಎಸ್.ಎಸ್.ಎಲ್.ಸಿ. ಪರೀಕ್ಷೆ ಸಂಬಂಧಿ ದೂರುಗಳಿಗೆ ಸಹಾಯವಾಣಿ

10k students will miss SSLC exams this year

ಆಧುನಿಕ ಕಾಲದಲ್ಲಿ ವಿದ್ಯಾರ್ಥಿಗಳ ಏಕಾಗ್ರತೆ ಕಸಿಯಲು ದೂರದರ್ಶನ, ವಿಡಿಯೋ ಗೇಮ್ ಮತ್ತಿತರ ವಸ್ತುಗಳೇ ಕಾರಣ ಎನ್ನಲಾಗಿದೆ. ಉತ್ಪನ್ನಗಳ ಕಡೆ ಮಕ್ಕಳು ಹೆಚ್ಚು ಆಕರ್ಷಿಯರಾಗುವುದರಿಂದ ವಿದ್ಯಾರ್ಥಿಗಳು ತಗತಿಗೆ ಬಂಕ್ ಮಾಡುತ್ತಾರೆ. ಶಾಲಾ ಹಂತದಲ್ಲಿ ಪಠ್ಯೇತರ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡಿದರೆ ವಿದ್ಯಾರ್ಥಿಗಳು ತರಗತಿಗಳಿಗೆ ಹೆಚ್ಚು ಹಾಜರಾಗುತ್ತಾರೆ ಎನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.

English summary
Due to shortage of minumum attendance 10,867 students will not eligible for SSLC exams which will resume from March 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X