ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೀರೆ ಖರೀದಿಗೆ ಬಂದವರು, 100 ಸೀರೆ ಕದ್ದರು

By Ashwath
|
Google Oneindia Kannada News

 sari
ಬೆಂಗಳೂರು, ಮೇ.24: ಸೀರೆ ಮಾರುವವರ ಮನೆಗೆ ಸೀರೆ ಖರೀದಿಸುವ ಸೋಗಿನಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ಮಾಲೀಕರ ಕೈ ಮತ್ತು ಬಾಯಿಗೆ ಟವೆಲ್‍ನಿಂದ ಕಟ್ಟಿಹಾಕಿ ನೂರು ಸೀರೆಗಳನ್ನು ಕದ್ದಿರುವ ಘಟನೆ ಲೊಟ್ಟಗೊಲ್ಲನಹಳ್ಳಿಯಲ್ಲಿ ನಡೆದಿದೆ.

ಕಳ್ಳತನ ಮೇ.23 ಶುಕ್ರವಾರ ರಾತ್ರಿ 10 ಗಂಟೆಗೆ ನಡೆದಿದ್ದು, ನೂರು ಸೀರೆ, ಒಂದು ಲ್ಯಾಪ್‌‌ಟಾಪ್‌‌, ಮೊಬೈಲ್‌ ಫೋನ್‌ ಹಾಗೂ 1.30. ಲಕ್ಷ ರೂಪಾಯಿ ದೋಚಿ ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ.[ಕಳ್ಳತನ: ಐಟಿ ಕಂಪೆನಿ ಮಹಿಳಾ ಉದ್ಯೋಗಿ ಬಂಧನ]

ಸೀರೆ ಕದ್ದದ್ದು ಹೇಗೆ? ಸಂತೋಷ್‍ಕುಮಾರ್ ಮತ್ತು ಅವರ ಮಾವ ಲೊಟ್ಟಗೊಲ್ಲನಹಳ್ಳಿ ಸೀರೆ ಮಾರಾಟ ಮಾಡುತ್ತಿದ್ದು, ಶುಕ್ರವಾರ ರಾತ್ರಿ ಇಬ್ಬರು ಅಪರಿಚಿತರು ಇವರ ಮನೆಗೆ ಬಂದಿದ್ದಾರೆ. ಮಾಲೀಕರಿಗೆ ನೀವು ಸೀರೆ ಮಾರಾಟ ಮಾಡುತ್ತಿರಾ ಎಂದು ಪ್ರಶ್ನಿಸಿ ಸೀರೆ ತೋರಿಸಲು ಹೇಳಿದ್ದಾರೆ. ಮಾಲೀಕರು ಇಂದು ಸೀರೆ ತೋರಿಸಲು ಸಾಧ್ಯವಿಲ್ಲ ನಾಳೆ ತೋರಿಸುತ್ತೇವೆ ಎಂದು ತಿಳಿಸಿದ್ದಾರೆ.

ಈ ವೇಳೆ ಅಪರಿಚಿತರು ನೀರು ಬೇಕು ಎಂದು ಕೇಳಿದಾಗ ಸಂತೋಷ್‌‌ ಕುಮಾರ್‌ ನೀರು ತರಲು ಹೋದಾಗ ಅವರ ಹಿಂದಿನಿಂದ ಬಂದು ಕೈ ಮತ್ತು ಬಾಯಿಗೆ ಟವೆಲ್‍ನಿಂದ ಕಟ್ಟಿಹಾಕಿ ದೋಚಿ ಸೀರೆ ಮತ್ತು ಹಣದೊಂದಿಗೆ ಪರಾರಿಯಾಗಿದ್ದಾರೆ.ಮಾಲೀಕ ಸಂತೋಷ್‌‌ಕುಮಾರ್‌ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಕಳ್ಳರ ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ.

English summary
Kodigehalli police have booked an unidentified thief for stealing 100 sari and cash Rs 1 lakh from the sari sellers residence. The incident took place in lottegollahalli on Friday night, around 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X