ಬೆಂಗಳೂರು, ನವೆಂಬರ್ 8: ಬೆಂಗಳೂರಿನ ಹನುಮಂತ ನಗರದ 50 ಅಡಿ ರಸ್ತೆಯಲ್ಲಿರುವ 'ನಮ್ಮ ದೇವೇಗೌಡ ಅಪ್ಪಾಜಿ ಕ್ಯಾಂಟೀನ್'ಗೆ ನವೆಂಬರ್ 9ಕ್ಕೆ 100 ದಿನಗಳು ಪೂರ್ಣಗೊಳ್ಳುತ್ತದೆ. ಆ ಸಂಭ್ರಮದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ.
ಅಪ್ಪಾಜಿ ಕ್ಯಾಂಟೀನ್ ನಲ್ಲಿ 3 ರುಪಾಯಿಗೆ ಕಾಫಿ, 5ಕ್ಕೆ ತಿಂಡಿ, 10ಕ್ಕೆ ಊಟ...
ಅಗ್ಗದ ಬೆಲೆಗೆ ತಿಂಡಿ ಹಾಗೂ ಊಟವನ್ನು ಒದಗಿಸುವ ಉದ್ದೇಶದಿಂದ ವಿಧಾನ ಪರಿಷತ್ ಸದಸ್ಯರಾದ ಡಾ.ಟಿ.ಎ.ಶರವಣ ಈ ಕ್ಯಾಂಟೀನ್ ಆರಂಭಿಸಿದ್ದರು. ಈ ಕಾರ್ಯಕ್ರಮದಲ್ಲಿ ನಟಿ ಶರ್ಮಿಳಾ ಮಾಂಡ್ರೆ ಕೂಡ ಭಾಗವಹಿಸುತ್ತಾರೆ. ನವೆಂಬರ್ 9ರ ಗುರುವಾರ ಮಧ್ಯಾಹ್ನ 1 ಗಂಟೆಗೆ ಊಟ ಮತ್ತು ಮಾತಿಗೆ ಶರ್ಮಿಳಾ ಮಾಂಡ್ರೆ ಅವರು ಜೊತೆಗಿರುತ್ತಾರೆ ಎಂದು ತಿಳಿಸಲಾಗಿದೆ.
ತಟ್ಟೆ ಇಡ್ಲಿ/ ವಡೆ/ ಖಾರಾಬಾತ್/ ಕೇಸರಿ ಬಾತ್ ಗೆ 5 ರುಪಾಯಿ, ಕಾಫಿ/ಟೀಗೆ 3 ರುಪಾಯಿ, ಮುದ್ದೆ-ಬಸ್ಸಾರು/ ಅನ್ನ-ಸಾಂಬಾರ್/ ರೈಸ್ ಬಾತ್ ಗೆ 10 ರುಪಾಯಿ ನಿಗದಿ ಆಗಿದೆ. ಆದರೆ ಇಲ್ಲಿಂದ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ಇಲ್ಲ. ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಗಸ್ಟ್ ಎರಡರಂದು ಆರಂಭಿಸಿದ ಈ ಕ್ಯಾಂಟೀನ್ ಗೆ ಹತ್ತು ಲಕ್ಷ ರುಪಾಯಿ ಖರ್ಚಾಗಿದೆ ಎಂದು ಶರವಣ ತಿಳಿಸಿದ್ದರು.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!