ಕೆಆರ್ ಪುರಂನಲ್ಲಿ ಬೆಳ್ಳಂಬೆಳಗ್ಗೆ 10 ವರ್ಷದ ಬಾಲಕ ಕಿಡ್ನಾಪ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 26: ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ಬಾಲಕನನ್ನು ಅಪಹರಿಸಲಾಗಿದೆ. ತನ್ನ ತಾತನ ಜತೆಗೆ ಶಾಲೆಗೆ ತೆರಳುತ್ತಿದ್ದ ಹತ್ತು ವರ್ಷದ ಬಾಲಕನನ್ನು ದುಷ್ಕರ್ಮಿಗಳು ಅಯ್ಯಪ್ಪ ನಗರ ಮುಖ್ಯರಸ್ತೆಯಲ್ಲಿ ಅಪಹರಿಸಿದ್ದಾರೆ. ಕಾರಿನಲ್ಲಿ ಬಂದಂಥ ದುಷ್ಕರ್ಮಿಗಳು ಹತ್ತು ವರ್ಷದ ಬಾಲಕ ಮಯಾಂಕ್ ನನ್ನು ಹೊತ್ತೊಯ್ದಿದ್ದಾರೆ.

ಅಯ್ಯಪ್ಪ ನಗರದಲ್ಲಿರುವ ವಿನಾಯಕ ಟಿಂಬರ್ ಯಾರ್ಡ್ ನ ಮಾಲೀಕರಾದ ಹರೀಶ್ ಅವರ ಮಗ ಮಯಾಂಕ್ ಇಲ್ಲಿನ ನಾರಾಯಣ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಶನಿವಾರ ಬೆಳಗ್ಗೆ ತನ್ನ ತಾತನ ಜತೆಗೆ ಶಾಲೆಗೆ ಹೋಗುತ್ತಿದ್ದಾಗ ಇಯಾನ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಆತನನ್ನು ಅಪಹರಣ ಮಾಡಿದ್ದಾರೆ.

10 year boy kidnapped in KR Puram

ಬೆಳ್ಳಂಬೆಳಗ್ಗೆ ನಡೆದ ಅಪಹರಣ ಘಟನೆಯಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಪೋಷಕರು ಈ ಬಗ್ಗೆ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಅಪಹರಣ ನಂತರದ ಬೆಳವಣಿಗೆಗಳ ಬಗ್ಗೆ ಪೊಲೀಸರು ಕಣ್ಣಿಟ್ಟಿದ್ದು, ತೀವ್ರ ತನಿಖೆಗೆ ಮುಂದಾಗಿದ್ದಾರೆ. ಆ ರಸ್ತೆಯಲ್ಲಿ ಸಾಮನ್ಯವಾಗಿ ಜನರ ಓಡಾಟ ಇರುತ್ತದೆ. ಈ ಕೃತ್ಯವನ್ನು ಯಾರು ಮಾಡಿರಬಹುದು ಎಂಬ ಬಗ್ಗೆ ವಿವಿಧ ಆಯಾಮಗಳಲ್ಲಿ ಪೊಲೀಸರು ಯೋಚಿಸಲು ಆರಂಭಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mayank, 10 Year boy kidnapped in Ayyappa nagar, KR Puram on Saturday. Kidnappers came in car and boy on the way to school with his grandfather.
Please Wait while comments are loading...