ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ನಡುವೆ 10 ಪಥಗಳ ರಸ್ತೆ ನಿರ್ಮಾಣ

By Nayana
|
Google Oneindia Kannada News

Recommended Video

ಬೆಂಗಳೂರು-ಮೈಸೂರು ನಡುವೆ 10 ಪಥಗಳ ರಸ್ತೆ ನಿರ್ಮಾಣ | Oneindia Kannada

ಬೆಂಗಳೂರು, ಜು.10: ಬೆಂಗಳೂರಿನಿಂದ-ಮೈಸೂರುವರೆಗೆ 10 ಪಥ ಒಳಗೊಂಡ ರಸ್ತೆ ನಿರ್ಮಿಸಲು ಯೋಜನಾ ವರದಿ ಸಿದ್ಧಗೊಂಡಿದ್ದು, ಎರಡು ಪ್ಯಾಕೇಜ್‌ಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿಧಾನ ಪರಿಷತ್‌ನಲ್ಲಿ ಹೇಳಿದರು.

ಪ್ರಶ್ನೋತ್ತರ ಕಲಾಪದಲ್ಲಿ ಸಂದೇಶ್ ನಾಗರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯೋಜನಾ ವರದಿಯು ತಡೆರಹಿತ ವಾಹನ ಸಂಚಾರಕ್ಕಾಗಿ 6 ಪಥದ ಹೆದ್ದಾರಿ ಹಾಗೂ ಗ್ರಾಮೀಣ ವಾಹನ ಸಂಚಾರಕ್ಕಾಗಿ ಹೆದ್ದಾರಿಯ ಎರಡು ಬದಿಗಳಲ್ಲಿ 2 ಪಥದ ಸೇವಾ ರಸ್ತೆ ಒಳಗೊಂಡಿರುತ್ತದೆ.

ನಂಗೆ ಮಾಟ ಮಾಡಿದ್ರೆ, ಉಲ್ಟಾ ಹೊಡೆಯುತ್ತೆ: ಸಚಿವ ರೇವಣ್ಣ ಹೇಳಿದ್ದು ಯಾರಿಗೆ?ನಂಗೆ ಮಾಟ ಮಾಡಿದ್ರೆ, ಉಲ್ಟಾ ಹೊಡೆಯುತ್ತೆ: ಸಚಿವ ರೇವಣ್ಣ ಹೇಳಿದ್ದು ಯಾರಿಗೆ?

3501 ಕೋಟಿ ರೂ.ಗಳ ಪ್ಯಾಕೇಜ್ 1ರ ಕಾಮಗಾರಿ, ಬೆಂಗಳೂರು-ನಿಡಘಟ್ಟ ವಿಭಾಗ ಹಾಗೂ ನಿಡಘಟ್ಟ-ಮೈಸೂರು ವಿಭಾಗ 2911 ಕೋಟಿ ರೂ.ಗಳ ಕಾಮಗಾರಿಗೆ ಕೇಂದ್ರ ಸಚಿವಾಲಯ ಅನುಮೋದನೆ ನೀಡಿದೆ.

10 lane highway between Bengaluru-Mysuru

ಪ್ರತಿ ತಿಂಗಳು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಲಾಗುವುದು. ಈ ಎರಡೂ ಪ್ಯಾಕೇಜ್‌ಗಳನ್ನು ಈಗಾಗಲೇ ವಹಿಸಿಕೊಡಲಾಗಿದ್ದು, ಸದ್ಯದಲ್ಲೇ ಪ್ರಾರಂಭಗೊಳ್ಳಲಿವೆ.

ಶೇ.64ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಕೂಡ ಮುಗಿದಿದೆ. ಮುಂದಿನ ಒಂದು-ಒಂದೂವರೆ ವರ್ಷದೊಳಗೆ ಒಂದು ಹಂತದ ಪ್ರಕ್ರಿಯೆ ಮುಗಿಯಲಿದೆ ಎಂದು ಸಚಿವ ರೇವಣ್ಣ ಸದನಕ್ಕೆ ತಿಳಿಸಿದರು.

English summary
Public works department minister H.D.Revanna said 10 lanes highway will be constructed between Bengaluru and Mysuru in two packages at the cost estimate of Rs. 3,501 crores. He also said that land acquisition process was completed up to 64 percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X