ಕ್ಯಾಂಟರ್ ನಲ್ಲಿ ಸಾಗಿಸುತ್ತಿದ್ದ ಒಂದು ಕೋಟಿ ರುಪಾಯಿ ದರೋಡೆ!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 25: ಕ್ಯಾಂಟರ್ ನಲ್ಲಿ ಸಾಗಿಸುತ್ತಿದ್ದ ಒಂದು ಕೋಟಿ ರುಪಾಯಿಯನ್ನು ದುಷ್ಕರ್ಮಿಗಳು ದರೋಡೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಉದ್ಯಮಿಯೊಬ್ಬರು ಟ್ಯಾಂಕರ್ ನಲ್ಲಿ ಹಣ ಸಾಗಿಸುತ್ತಿದ್ದಾಗ ಈ ಕೃತ್ಯ ಎಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಆರೋಗ್ಯರಾಜು ಎಂಬ ಉದ್ಯಮಿ ಹಣ ಕಳೆದುಕೊಂಡವರು. ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹದಿನೈದು ಮಂದಿ ದುಷ್ಕರ್ಮಿಗಳು ಟ್ಯಾಂಕರ್ ಅನ್ನು ತಡೆದು, ಮಚ್ಚು-ಲಾಂಗುಗಳನ್ನು ತೋರಿಸಿ ಹೆದರಿಸಿದರು. ಅ ನಂತರ ಹಣವನ್ನು ದರೋಡೆ ಮಾಡಿದರು ಎಂದು ಅವರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.[ತಲೆಮರೆಸಿಕೊಂಡಿರುವ ಡೊಮಿನಿಕ್ ಬಂಧನಕ್ಕೆ ಪೊಲೀಸ್ ಬಲೆ]

crime

ಅಷ್ಟೊಂದು ಮೊತ್ತವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು ಎಂಬ ಪ್ರಶ್ನೆ ಬರುತ್ತದೆ ಎಂಬ ಕಾರಣಕ್ಕೆ ಆರೋಗ್ಯ ರಾಜು ಅವರು ದೂರು ನೀಡುವುದಕ್ಕೆ ನಿಧಾನ ಮಾಡಿದ್ದಾರೆ. ದರೋಡೆಯಾದ ಹಣದಲ್ಲಿ ಹೊಸ 2 ಸಾವಿರದ ನೋಟು ಸಹ ಲಕ್ಷಗಟ್ಟಲೆ ಇತ್ತು ಎಂಬ ಮಾಹಿತಿ ಇದ್ದು, ಅಷ್ಟೊಂದು ಹಣವನ್ನು ಹೇಗೆ ಇಟ್ಟುಕೊಂಡಿದ್ದರು ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ.

ತಲಘಟ್ಟ ಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಆದರೆ ಇಡೀ ಪ್ರಕರಣದಲ್ಲಿ ಹಲವು ಅನುಮಾನಗಳಿದ್ದು, ಸ್ಪಷ್ಟವಾದ ಉತ್ತರ ದೊರಕಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
1 crore looted in Talaghattapura police station limit, Benagluru. Cash was carrieing in tanker by a business man.
Please Wait while comments are loading...