ಸಾರಿಗೆ ಮುಷ್ಕರ : ಬೆಂಗಳೂರಲ್ಲಿ ಜನರಿಗೆ ನೆರವಾದ ಮೆಟ್ರೋ

Posted By:
Subscribe to Oneindia Kannada

ಬೆಂಗಳೂರು, ಜುಲೈ 26 : ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಹಲವಾರು ಜನರು ನಮ್ಮ ಮೆಟ್ರೋ ಅವಲಂಬಿಸಿದ್ದರು. ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದಲ್ಲಿ ರಾತ್ರಿ 11 ಗಂಟೆಯ ತನಕ ಮೆಟ್ರೋ ಸಂಚಾರವನ್ನು ವಿಸ್ತರಣೆ ಮಾಡಲಾಗಿತ್ತು.

ನಮ್ಮ ಮೆಟ್ರೋದಲ್ಲಿ ಸೋಮವಾರ 1.50 ರಿಂದ 1.80 ಲಕ್ಷ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಸಾಮಾನ್ಯ ದಿನಗಳಲ್ಲಿ 1.20 ಲಕ್ಷ ಜನರು ಸಂಚರಿಸುತ್ತಿದ್ದರು. ಸಾರಿಗೆ ನೌಕರರ ಮುಷ್ಕರದಿಂದ ಬಿಎಂಟಿಸಿ ಬಸ್ಸುಗಳು ಸ್ಥಗಿತಗೊಂಡಿದ್ದರಿಂದ ಸೋಮವಾರ ಹೆಚ್ಚು ಜನರು ಮೆಟ್ರೋ ಮೂಲಕ ಪ್ರಯಾಣಿಸಿದ್ದಾರೆ.[ಸಾರಿಗೆ ಮುಷ್ಕರದ ಚಿತ್ರಗಳು]

ಬೈಯಪ್ಪನಹಳ್ಳಿ-ಮೈಸೂರು ರಸ್ತೆ (ನಾಯಂಡಹಳ್ಳಿ), ಸಂಪಿಗೆ ರಸ್ತೆ-ಪೀಣ್ಯ ಮಾರ್ಗದಲ್ಲಿ ಬೆಳಗ್ಗೆ 7ರಿಂದ 10 ಮತ್ತು ಸಂಜೆ 7 ರಿಂದ 10 ಗಂಟೆಯ ತನಕ ಪ್ರತಿ ಐದು ನಿಮಿಷಕ್ಕೊಂದು ಮೆಟ್ರೋ ರೈಲು ಸಂಚಾರ ನಡೆಸಿವೆ. ಮಂಗಳವಾರವೂ ಮುಷ್ಕರ ಇರುವುದದಿಂದ ಹೆಚ್ಚು ಜನರು ಮೆಟ್ರೋದಲ್ಲಿ ಪ್ರಯಾಣಿಸುವ ನಿರೀಕ್ಷೆ ಇದೆ.[5 ನಿಮಿಷಕ್ಕೊಂದು ಮೆಟ್ರೋ ರೈಲು]

ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನೇರಳೆ ಮಾರ್ಗ ಮತ್ತು ಸಂಪಿಗೆ ರಸ್ತೆ-ನಾಗಸಂದ್ರದ ನಡುವಿನ ಹಸಿರು ಮಾರ್ಗದಲ್ಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಜನರು. ಅಲ್ಲಿಂದ ಆಟೋ ಹಿಡಿದು, ನಡೆದುಕೊಂಡು ತಮ್ಮ ಕಚೇರಿ ತಲುಪಿದರು..... [Live : 2ನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ, ಜನರ ಪರದಾಟ]

ಸಂಪಿಗೆ ರಸ್ತೆ-ನಾಗಸಂದ್ರದ ಮಾರ್ಗದಲ್ಲಿ ಹೆಚ್ಚು ಜನ

ಸಂಪಿಗೆ ರಸ್ತೆ-ನಾಗಸಂದ್ರದ ಮಾರ್ಗದಲ್ಲಿ ಹೆಚ್ಚು ಜನ

ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗಕ್ಕಿಂತ ಹೆಚ್ಚು ಜನರು ಸಂಪಿಗೆ ರಸ್ತೆ-ನಾಗಸಂದ್ರದ ನಡುವಿನ ಮಾರ್ಗದಲ್ಲಿ ಸಂಚಾರ ನಡೆಸಿದ್ದಾರೆ. ಮಾಮೂಲಿ ದಿನಗಳಿಗೆ ಹೋಲಿಕೆ ಮಾಡಿದರೆ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದಲ್ಲಿ ಸೋಮವಾರ ಜನ ಸಂಚಾರ ಕಡಿಮೆ ಇತ್ತು. ಎಲ್ಲರೂ ಕಾರು, ಬೈಕ್ ಮೂಲಕ ತೆರಳಿದ್ದು ಇದಕ್ಕೆ ಕಾರಣವಿರಬಹುದು.

ರೈಲು ಸಂಚಾರದ ಅವಧಿ ಕಡಿತ

ರೈಲು ಸಂಚಾರದ ಅವಧಿ ಕಡಿತ

ಬೈಯಪ್ಪನಹಳ್ಳಿ-ಮೈಸೂರು ರಸ್ತೆ, ಸಂಪಿಗೆ ರಸ್ತೆ-ಪೀಣ್ಯ ಎರಡೂ ಮಾರ್ಗದಲ್ಲಿ ಬೆಳಗ್ಗೆ 7 ರಿಂದ 10 ಗಂಟೆ ತನಕ ಮತ್ತು ಸಂಜೆ 5 ರಿಂದ 9 ಗಂಟೆಯ ತನಕ ಐದು ನಿಮಿಷಕ್ಕೊಂದು ಮೆಟ್ರೋ ರೈಲುಗಳು ಸಂಚಾರ ನಡೆಸಿವೆ.

ಸಂಚಾರ ಅವಧಿ ವಿಸ್ತರಣೆ

ಸಂಚಾರ ಅವಧಿ ವಿಸ್ತರಣೆ

ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರಾತ್ರಿ 11 ಗಂಟೆಯ ತನಕ ಮೆಟ್ರೋ ರೈಲು ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ರಾತ್ರಿ 9 ಗಂಟೆಯ ಬಳಿಕ 15 ನಿಮಿಷಕ್ಕೊಂದು ಮೆಟ್ರೋ ರೈಲು ಈ ಮಾರ್ಗದಲ್ಲಿ ಸಂಚಾರ ನಡೆಸಿದೆ.

ಪ್ರಯಾಣಿಕರ ಸಂಖ್ಯೆ

ಪ್ರಯಾಣಿಕರ ಸಂಖ್ಯೆ

ನಮ್ಮ ಮೆಟ್ರೋದಲ್ಲಿ ಸೋಮವಾರ 1.50 ರಿಂದ 1.80 ಲಕ್ಷ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಸಂಪಿಗೆ ರಸ್ತೆ-ಪೀಣ್ಯ ಮಾರ್ಗದಲ್ಲಿ ಸಂಜೆ 7 ಗಂಟೆಯ ತನಕ 35 ಸಾವಿರ ಜನರು ಪ್ರಯಾಣಿಸಿದ್ದರು.

ಇಂದೂ ಹೆಚ್ಚಿನ ಜನರ ನಿರೀಕ್ಷೆ

ಇಂದೂ ಹೆಚ್ಚಿನ ಜನರ ನಿರೀಕ್ಷೆ

ಸಾರಿಗೆ ನೌಕರರ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದ್ದು ಇಂದೂ ಮುಂದುವರೆಯಲಿದೆ. ಆದ್ದರಿಂದ, ಹೆಚ್ಚು ಜನರು ಮೆಟ್ರೋದಲ್ಲಿ ಇಂದೂ ಸಹ ಪ್ರಯಾಣಿಸುವ ನಿರೀಕ್ಷೆ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
1.80 lakh commuters traveled in the namma metro on July 25, 2016. Karnataka State Road Transport Corporation employees called for strike on July 25.
Please Wait while comments are loading...