ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಗೆ ಬಂದವರಿಗೆ ಯಡಿಯೂರಪ್ಪ ಅನ್ಯಾಯ ಮಾಡಿಲ್ಲ!

|
Google Oneindia Kannada News

ಬಳ್ಳಾರಿ, ನವೆಂಬರ್ 19 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಯಾರಿಗೆ ಸಚಿವ ಸ್ಥಾನ ಸಿಗಲಿದೆ?, ಸಂಪುಟಕ್ಕೆ ಯಾರು ಸೇರಲಿದ್ದಾರೆ? ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಬಳ್ಳಾರಿಯಲ್ಲಿ ಗುರುವಾರ ಮಾತನಾಡಿದ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, "ಬಿಜೆಪಿಗೆ ಬಂದವರಿಗೆ ಯಡಿಯೂರಪ್ಪ ಅವರು ಅನ್ಯಾಯ ಮಾಡಿಲ್ಲ" ಎಂದು ಹೇಳಿದ್ದಾರೆ.

ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಹೇಳಿಕೆ!ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಹೇಳಿಕೆ!

"ರಾಜೀನಾಮೆ ನೀಡಿದ 17 ಶಾಸಕರಿಗೆ ಬಿಜೆಪಿ ಬಿಫಾರಂ ನೀಡಿದೆ, ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಉಪ ಚುನಾವಣೆಯಲ್ಲಿ ಸೋತವರನ್ನು ಎಂಎಲ್‌ಸಿ ಮಾಡಿದ್ದಾರೆ. ಗೆದ್ದವರನ್ನು ಮಂತ್ರಿ ಮಾಡಿದ್ದಾರೆ" ಎಂದು ಎಸ್‌. ಟಿ. ಸೋಮಶೇಖರ್ ತಿಳಿಸಿದರು.

ಆರ್. ಆರ್. ನಗರ ಉಪ ಚನಾವಣೆ; ಬಿಜೆಪಿಯ ಮುನಿರತ್ನ ಜಯಭೇರಿ ಆರ್. ಆರ್. ನಗರ ಉಪ ಚನಾವಣೆ; ಬಿಜೆಪಿಯ ಮುನಿರತ್ನ ಜಯಭೇರಿ

Yediyurappa Will Take Decision On Cabinet Expansion ST Somashekar

"ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳುವುದು ಯಡಿಯೂರಪ್ಪ ಅವರ ಪರಮಾಧಿಕಾರ. ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ" ಎಂದು ಸಚಿವರು ಹೇಳಿದರು.

ಉಪ ಚುನಾವಣೆ ನಂತರ ನಾನು ಸಚಿವನಾಗುತ್ತೇನೆ: ಎಂಟಿಬಿ ನಾಗರಾಜ್ಉಪ ಚುನಾವಣೆ ನಂತರ ನಾನು ಸಚಿವನಾಗುತ್ತೇನೆ: ಎಂಟಿಬಿ ನಾಗರಾಜ್

"ನಾವೆಲ್ಲ ಈಗಲೂ ಒಂದೇ ಟೀಮ್ ಎರಡು ಟೀಮ್ ಆಗಿರುವ ಪ್ರಶ್ನೆಯೇ ಇಲ್ಲ. ಬಿಜೆಪಿ ಶಾಸಕರು ನಾವೆಲ್ಲರೂ ಒಂದೇ ಅವರು, ಇವರು ಅನ್ನೋದು ಏನೂ ಇಲ್ಲ. ಮತ್ತೆ ಶಾಸಕರನ್ನು ಕರೆತರುವ ಅವಶ್ಯಕತೆ ಇಲ್ಲ" ಎಂದು ಸೋಮಶೇಖರ್ ಸ್ಪಷ್ಟಪಡಿಸಿದರು.

ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಗೆದ್ದ ಮುನಿರತ್ನ, ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್, ಆರ್. ಶಂಕರ್ ಮತ್ತು ಎಂಟಿಬಿ ನಾಗರಾಜ್ ಬಿಜೆಪಿ ಸರ್ಕಾರ ರಚನೆಗೆ ಸಹಕಾರ ನೀಡಿದ್ದರು. ಇವರು ಸಚಿವರಾಗಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.

English summary
Chief minister B. S. Yediyurappa will take decision on cabinet expansion. He will treat all MLA's same said minister S.T. Somashekar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X